ಕುಡಿಯಲು ಹಣ ಕೇಳಿದ್ದನೆಂಬ ಕಾರಣಕ್ಕೆ ಪರಿಚಿತ ವ್ಯಕ್ತಿಯಿಂದ ಹಲ್ಲೆ: ತಲೆಗೆ ಗಂಭೀರ ಗಾಯ

ಕುಡಿಯಲು ಹಣ ಕೇಳಿದ್ದನೆಂಬ ಕಾರಣಕ್ಕೆ ಪರಿಚಿತ ವ್ಯಕ್ತಿಯೇ ಹಲ್ಲೆ ನಡೆಸಿದ ಘಟನೆ ಮಂಗಳೂರಲ್ಲಿ ನಡೆದಿದೆ.ತಲಪಾಡಿ ನಿವಾಸಿ ಮಕರೇಂದ್ರ ಎಂಬಾತ ನೆಲಕ್ಕೆ ಉರುಳಿ ಬಿದ್ದು, ರಸ್ತೆ ಬದಿಯಲ್ಲಿ ಬಿದ್ದಿದ್ದ ಕಲ್ಲು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಲಪಾಡಿಯ ಬಾರ್ ಆಂಡ್ ರೆಸ್ಟೋರೆಂಟ್ ಸಮೀಪ ನಡೆದಿದೆ.
ಮಕರೇಂದ್ರ ಬಾರ್ ನತ್ತ ಬಂದಿದ್ದು, ಇದೇ ವೇಳೆ ಪರಿಚಿತ ವಿಲ್ಫ್ರೆಡ್ ಮೈಕಲ್ ಡಿಸೋಜ ಬಾರ್ ಎದುರುಗಡೆ ನಿಂತಿದ್ದನು. ಮಕರೇಂದ್ರ ಆತನಲ್ಲಿ ಕುಡಿಯಲು ಹಣ ಕೇಳಿದ್ದಾನೆ. ಇದಕ್ಕೆ ಕುಪಿತನಾದ ವಿಲ್ಫ್ರೆಡ್ , ಅವಾಚ್ಯ ಶಬ್ದಗಳಿಂದ ನಿಂದಿಸಿ , ಕೊಲೆ ಬೆದರಿಕೆಯನ್ನು ಒಡ್ಡಿ, ಹಲ್ಲೆ ನಡೆಸಿದಾಗ ಮಕರೇಂದ್ರ ರಸ್ತೆಗೆ ಬಿದ್ದಿದ್ದಾನೆ.ಈ ವೇಳೆ ಅಲ್ಲೇ ಇದ್ದ ಕಲ್ಲು ತಲೆಗೆ ಬಡಿದು ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw