5:42 AM Thursday 16 - October 2025

ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ? | ಡಿ.ಕೆ.ಶಿವಕುಮಾರ್ ಪ್ರಶ್ನೆ

d.k shivakumar
03/01/2022

ಮೈಸೂರು: ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ರಾಮನಗರದ ಸರ್ಕಾರಿ ಕಾರ್ಯಕ್ರಮ ವೇದಿಕೆಯಲ್ಲಿ ನಡೆದ ಜಟಾಪಟಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅಶ್ವಥ್ ನಾರಾಯಣ  ಏನ್ ಸುಳ್ಳು ಹೋಳೋದಿಕ್ಕೆ ಹೋಗಿದ್ದರೋ ಗೊತ್ತಿಲ್ಲ, ಅಶ್ವತ್ಥನಾರಾಯಣನಿಗೂ ರಾಮನಗರಕ್ಕೂ ಏನ್ ಸಂಬಂಧ ? ಎಂದು ಪ್ರಶ್ನಿಸಿದರು.

ಗಲಾಟೆ ಆಗಿರುವ ವಿಚಾರ ನನಗೆ ಗೊತ್ತಿಲ್ಲ, ನಾನು ಮೇಕೆದಾಟು ಪಾದಯಾತ್ರೆಯ ಸಿದ್ಧತೆಯಲ್ಲಿದ್ದೇನೆ.  ಏನ್ ಸುಳ್ಳು ಹೋಳೋದಿಕ್ಕೆ ಹೋಗಿದ್ದರೋ ಗೊತ್ತಿಲ್ಲ. ಸಾಮಾನ್ಯವಾಗಿ ಬಿಜೆಪಿಯವರು ಸುಳ್ಳು ಹೇಳ್ತಾರೆ. ಅಶ್ವತ್ಥನಾರಾಯಣ ಅದೇನ್ ಕ್ಲೀನ್ ಮಾಡಿದ್ದಾರೋ ಗೊತ್ತಿಲ್ಲ. ವೃಷಭಾವತಿ ಕ್ಲೀನ್ ಮಾಡಲಿ ಅಂತ ಕಾಯುತ್ತಿದ್ದೆವು ಎಂದರು.

ರಾಜಕೀಯದ ಭಿನ್ನಾಭಿಪ್ರಾಯಗಳು ಏನೇ ಇರಲಿ. ಕುಮಾರಸ್ವಾಮಿ ರಾಮನಗರ ಜಿಲ್ಲೆ ಮಾಡಿದ್ರು. ಹೆಡ್ ಕ್ವಾರ್ಟರ್ಸ್ನಲ್ಲಿ ಒಂದಷ್ಟು ಕಟ್ಟಡ ಕಟ್ಟಿಸಿದ್ರು. ಅಶ್ವತ್ಥನಾರಾಯಣ ಏನ್ ಮಾಡಿದ್ದಾರೆ. ಒಂದು ದಿನವೂ ಸೌಜನ್ಯಕ್ಕೂ ನಮ್ಮನ್ನು ಮಾತನಾಡಿಸಿಲ್ಲ. ಏನು ಅಭಿವೃದ್ಧಿ ಮಾಡಿದ್ದಾರೆ ಅಂತ ತೋರಿಸಲಿ. ಯಾವುದಾದರೂ ಕಟ್ಟಡ ಕಟ್ಟಿಸಿದ್ದರೆ ತೋರಿಸಲಿ. ಹೋಗ್ಲಿ, ಕೋವಿಡ್ ನಿಂದ ಸತ್ತವರಿಗೆ ಪರಿಹಾರ ಕೊಟ್ಟಿದ್ದಾರಾ?  ಅದನ್ನಾದರೂ ಹೇಳಲಿ ಎಂದು ಕಿಡಿಕಾರಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ  ವ್ಯಾಕ್ಸಿನೇಷನ್ ಗೆ ಹೆಚ್ಚಿನ ಒತ್ತು!

“ಜೈನಕಾಶಿ ಮೂಡುಬಿದಿರೆಯ ಇಟ್ಟೆಕೊಪ್ಪ ಪೆರಿಯ ಮಂಜವೇ ಕಾನದ ಕಟದರ ಆದಿಮೂಲ”

ವೇದಿಕೆಯಲ್ಲಿಯೇ ಅಶ್ವಥ್ ನಾರಾಯಣ, ಡಿ.ಕೆ.ಸುರೇಶ್ ನಡುವೆ ಜಟಾಪಟಿ

ಉಡುಪಿ: ಸಾವಿತ್ರಿಭಾಯಿ ಫುಲೆ ಜಯಂತಿ, ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆ

ಅಪಾರ್ಟ್​ಮೆಂಟ್ ಫ್ಲಾಟ್​ನಲ್ಲಿ ಯುವತಿಯ ಅನುಮಾನಾಸ್ಪದ ಸಾವು: ಟೆಕ್ಕಿ ಪೊಲೀಸ್ ವಶಕ್ಕೆ

 

ಇತ್ತೀಚಿನ ಸುದ್ದಿ

Exit mobile version