5:37 PM Wednesday 15 - October 2025

ಅತ್ಯಾಚಾರಕ್ಕೆ ಯತ್ನಿಸಿದಾತನನ್ನು ಹತ್ಯೆ ಮಾಡಿದ ಮಹಿಳೆಯ ಬಿಡುಗಡೆ! | ಅಂದು ರಾತ್ರಿ ನಡೆದದ್ದೇನು?

tamilnadu news
16/07/2021

ಚೆನ್ನೈ:  ತನ್ನನ್ನು ಅತ್ಯಾಚಾರಕ್ಕೆ ಯತ್ನಿಸಿದ ದುಷ್ಕರ್ಮಿಯನ್ನು ಹತ್ಯೆ ಮಾಡಿದ್ದ ಮಹಿಳೆ ಬಿಡುಗಡೆ ಭಾಗ್ಯ ದೊರೆತಿದ್ದು,  ಆತ್ಮರಕ್ಷಣೆಗಾಗಿ  ಯುವತಿಯು ವ್ಯಕ್ತಿಯನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ  ಜಾಮೀನಿನ ಮೇಲೆ ಪೊಲೀಸರು ಆಕೆಯನ್ನು ಬಿಟ್ಟು ಕಳುಹಿಸಿದ್ದಾರೆ ಎಂದು ವರದಿಯಾಗಿದೆ.

ಬುಧವಾರ ಮಧ್ಯಾಹ್ನ ಮಿಂಜೂರ್ ಬಳಿಯ ಮೀನು ಸಾಕಣೆ ಕೇಂದ್ರದಲ್ಲಿ ವ್ಯಕ್ತಿಯೊರ್ವ ಮೃತಪಟ್ಟಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಮೃತದೇಹವನ್ನು ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಿಆರ್‌ ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು.

ಮೃತ ವ್ಯಕ್ತಿಯು ಆ ದಿನ ಮಹಿಳೆಯ ಮೇಲೆ  ಅತ್ಯಾಚಾರಕ್ಕೆ ಯತ್ನಿಸಿದ್ದ.  ಮಹಿಳೆಯ ಹಿಂದೆ ಬಂದಿದ್ದ ಆತ ಅಲ್ಲಿಂದ ಆಕೆಯನ್ನು ಬಲವಂತವಾಗಿ ಜಮೀನೊಂದಕ್ಕೆ ಎಳೆದೊಯ್ದಿದ್ದ. ಅಲ್ಲಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಈ ವೇಳೆ ಮಹಿಳೆಯು ಆತನನ್ನು ಜೋರಾಗಿ ತಳ್ಳಿದ್ದು, ಈ ವೇಳೆ ಮಳೆಯ ಹಿನ್ನೆಲೆಯಲ್ಲಿ ಒದ್ದೆಯಾಗಿದ್ದ ನೆಲದಲ್ಲಿ ಕಾಲು ಜಾರಿ ಆತ ಕೆಳಗೆ ಬಿದ್ದಿದ್ದು, ಈ ವೇಳೆ ಬಂಡೆಯೊಂದು ಆತನ ತಲೆಗೆ ಅಪ್ಪಳಿಸಿದ್ದು, ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

ಆತ ಮೃತಪಟ್ಟದ್ದನ್ನು ಕಂಡು ಗಾಬರಿಗೊಂಡ ಮಹಿಳೆ ಆತನ ಶವವನ್ನು ರಸ್ತೆ ಬದಿಗೆ ಎಸೆದು ತನ್ನ ಮನೆಗೆ ಹೋಗಿ ತನ್ನ ಪತಿಗೆ ಈ ವಿಚಾರ ತಿಳಿಸಿದ್ದಾಳೆ. ಆಕೆಯ ಪತಿ ತಕ್ಷಣವೇ ಸ್ಥಳೀಯರಿಗೆ ವಿಚಾರ ತಿಳಿಸಿ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದರು. ಘಟನಾ ಸ್ಥಳಕ್ಕೆ ಆಗಮಿಸಿದ ಮಿಂಜೂರ್ ಪೊಲೀಸರು ಆಂಬುಲೆನ್ಸ್ ಕರೆಸಿದ್ದಾರೆ. ಆದರೆ ಅದಾಗಲೇ ಆತ ಮೃತಪಟ್ಟಿದ್ದಾನೆ ಎಂದು  ಆಂಬುಲೆನ್ಸ್ ಸಿಬ್ಬಂದಿ ದೃಢಪಡಿಸಿದ್ದರು.

ಇನ್ನಷ್ಟು ಸುದ್ದಿಗಳು:

ಕಲ್ಯಾಣ ಮಂಟಪದಲ್ಲಿಯೇ ಗೊರಕೆ ಹೊಡೆದ ವರ | ನಿದ್ದೆಯಿಂದ ಎಬ್ಬಿಸಲು ಹೋದ ಕುಟುಂಬಸ್ಥರು ಸುಸ್ತು!

ಜೊತೆ ಜೊತೆಯಲಿ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ ನೀಡಿದ ಅನು ಸಿರಿಮನೆ

ಮುಖಕ್ಕೆ ಹಾಕುವ ಮಾಸ್ಕ್ ನ್ನು ಬಿಜೆಪಿ ಸಚಿವ ಹಾಕಿದ್ದೆಲ್ಲಿಗೆ ಗೊತ್ತಾ? | ಫೋಟೋ ವೈರಲ್

ಯುವತಿಯ ಮೇಲಿನ ಕೋಪಕ್ಕೆ 7 ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ ಯುವಕ!

ಜಾಸ್ತಿ ಮಕ್ಕಳು ಮಾಡಿಕೊಳ್ಳಲು ತಾಕತ್ ಇದ್ರೆ ಮಾಡಿಕೊಳ್ತಾರೆ | ಜಮೀರ್ ಹೇಳಿದ್ದೇನು?

ಕಷ್ಟಕರ ಯೋಗದ ಭಂಗಿಗಳೂ ಈ 4ರ ಬಾಲಕಿಗೆ ಅತಿ ಸುಲಭ | ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಪ್ರಿಯದರ್ಶಿನಿ

ಇತ್ತೀಚಿನ ಸುದ್ದಿ

Exit mobile version