ನೋಯ್ಡಾ ಸೆಕ್ಟರ್ 18 ರಲ್ಲಿರುವ ಮೆಕ್ ಡೊನಾಲ್ಡ್ ಮಳಿಗೆ ಮತ್ತು ಸೆಕ್ಟರ್ 104 ರ ಥಿಯೋಬ್ರೋಮಾ ಎಂಬ ಬೇಕರಿಯ ಶಾಖೆಯ ವಿರುದ್ಧ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್ಎಸ್ ಡಿಎ) ಇಲಾಖೆ ಕ್ರಮ ಕೈಗೊಂಡಿದೆ. ಒಬ್ಬ ಗ್ರಾಹಕ ಮೆಕ್ ಡೊನಾಲ್ಡ್ ನಲ್ಲಿ ಫ್ರೈಸ್ ಮತ್ತು ಬರ್ಗರ್ ತಿಂದಿದ್ರೆ ಇನ್ನೊಬ್ಬ ವ್ಯಕ್ತಿ ಥಿಯೋಬ್ರೋಮಾ ಮಳಿಗೆಯಿಂದ ಆರ್ಡರ್ ಮಾ...
ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಲೋಕಸಭಾ ಸ್ಥಾನಗಳಿಗೆ ಪಕ್ಷದ ಆಯ್ಕೆಯ ಬಗ್ಗೆ ನಡೆಯುತ್ತಿರುವ ಸಸ್ಪೆನ್ಸ್ ಮಧ್ಯೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅಮೇಥಿ ಅಥವಾ ರಾಯ್ ...
ಐವಿ ಲೀಗ್ ನಿಗದಿಪಡಿಸಿದ ಗಡುವನ್ನು ಉಲ್ಲಂಘಿಸಿ ಗಾಝಾ ಸಾಲಿಡಾರಿಟಿ ಶಿಬಿರದಿಂದ ಹೊರಹೋಗಲು ನಿರಾಕರಿಸಿದ ಫೆಲೆಸ್ತೀನ್ ಪರ ಪ್ರತಿಭಟಿಸಿದ ವಿದ್ಯಾರ್ಥಿಗಳನ್ನು ಕೊಲಂಬಿಯಾ ವಿಶ್ವವಿದ್ಯಾಲಯ ಅಮಾನತುಗೊಳಿಸಿದೆ. ಯುಎಸ್ ವಿಶ್ವವಿದ್ಯಾಲಯ ಮತ್ತು ಪ್ರತಿಭಟನಾಕಾರರ ನಡುವಿನ ಮಾತುಕತೆ ಸೋಮವಾರ ಮುರಿದುಬಿದ್ದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ....
ಆಡಳಿತಾರೂಢ ಸ್ಕಾಟಿಷ್ ನ್ಯಾಷನಲ್ ಪಾರ್ಟಿ ಅಲ್ಪಸಂಖ್ಯಾತ ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡಿದ ದಿನಗಳ ರಾಜಕೀಯ ಪ್ರಕ್ಷುಬ್ಧತೆಯ ನಂತರ ಅದರ ಪಾಕಿಸ್ತಾನಿ ಮೂಲದ ನಾಯಕ ಹಮ್ಜಾ ಯೂಸುಫ್ ಅವರು ಅಧಿಕಾರ ವಹಿಸಿಕೊಂಡ ಒಂದು ವರ್ಷದ ನಂತರ ಏಪ್ರಿಲ್ 29 ರಂದು ರಾಜೀನಾಮೆ ನೀಡಿದ್ದಾರೆ. ಯೂಸುಫ್ ಸ್ಕಾಟ್ಲೆಂಡ್ ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ...
ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ: 'ಕೈ' ಬಿಟ್ಟು 'ಕಮಲ' ಹಿಡಿದ ಅಕ್ಷಯ್ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಂ ಎಂಬವರು ತಮ್ಮ ನಾಮಪತ್ರವನ್ನು ಹಿಂಪಡೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನಾಮಪತ್ರವನ್ನು ಹಿಂಪಡೆಯುವುದಕ್ಕೆ ಅವರು ಬಿಜೆಪಿ ನಾಯಕರೊಂದಿಗೆ ಬಂದಿದ್ದರು. ಇಂಥದ್ದೇ ಘಟನ...
ಅಪಾರ್ಟ್ ಮೆಂಟ್ ನ ನಾಲ್ಕನೇ ಅಂತಸ್ತಿನಿಂದ ಬಿದ್ದು ಎರಡನೇ ಅಂತಸ್ತಿನಲ್ಲಿ ಸಿಲುಕಿಕೊಂಡ ಏಳು ತಿಂಗಳ ಮಗುವನ್ನು ಅಪಾರ್ಟ್ ಮೆಂಟ್ ನ ನಿವಾಸಿಗಳು ರಕ್ಷಿಸಿದ ಸಾಹಸಮಯ ಕೃತ್ಯದ ವಿಡಿಯೋ ವೈರಲ್ ಆಗಿದೆ. ಈ ಘಟನೆ ನಡೆದಿರುವುದು ಚೆನ್ನೈನಲ್ಲಿ. ಎರಡನೇ ಅಂತಸ್ತಿನ ಟಿನ್ ಶೀಟ್ ನ ಬದಿಯಲ್ಲಿ ನೇತಾಡಿದಂತೆ ತೂಗುತ್ತಿದ್ದ ಮಗುವನ್ನು ರಕ್ಷಿಸಲಾಗಿದೆ. ...
ಗಾಝಾದಲ್ಲಿ ನರಮೇಧವನ್ನು ಮುಂದುವರಿಸಿರುವ ಇಸ್ರೇಲ್ ನ ಪ್ರಧಾನಿ ನೇತನ್ಯಾಹು ವಿರುದ್ಧ ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಕುರಿತಂತೆ ಉನ್ನತ ಕಾನೂನು ತಜ್ಞರು ಇಸ್ರೇಲ್ ಸರಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ನೇತನ್ಯಾಹು ಅವರಲ್ಲದೇ ರಕ್ಷಣಾ ಸಚಿ...
ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ನ ವೇಳೆ ವಿಮಾನವು ರನ್ ವೇಯಿಂದ ಹೊರಹೋದ ಘಟನೆ ನಡೆದಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಕತಾರ್ ನ ದೋಹದಿಂದ ಬಂದ ಫ್ಲೈ ನಾಸ್ ವಿಮಾನವು ಲ್ಯಾಂಡಿಂಗ್ ನ ವೇಳೆ ಮುಖ್ಯ ರನ್ವೆಯಿಂದ ಹೊರ ಹೋಗಿರುವುದಾಗಿ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವರದಿಗಳು...
ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಈ ವಿಚಾರದಲ್ಲಿ ಮೌನವಾಗಿರುವರೇ ಎಂದು ಪ್ರಶ್ನಿಸಿದ್ದಾರೆ. ಅಶ್ಲೀಲ ವೀಡಿಯೋಗಳು ತುಂಬಿರುವ ಪೆನ್ ಡ್ರೈವ್ ಕುರಿತು ...
ದಕ್ಷಿಣ ರಾಜ್ಯದಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಕೇರಳದಲ್ಲಿ 50 ವರ್ಷದ ಪುರುಷ ಮತ್ತು ವೃದ್ಧ ಮಹಿಳೆಯು ಬಿಸಿಲಿನ ಹೊಡೆತಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ಕೇರಳದ ಕಣ್ಣೂರು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ಶಾಖ ಸಂಬಂಧಿತ ಸಾವುನೋವುಗಳು ವರದಿಯಾಗಿವೆ. ಕೇರಳವು ತೀವ್ರ ಶಾಖ ಇರುವುದರಿಂದ ಹವಾಮಾನ ಇಲಾಖೆ...