ಯಮುನಾ ನದಿ ನೀರನ್ನು ಉದ್ದೇಶಪೂರ್ವಕವಾಗಿ ವಿಷಪೂರಿತಗೊಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರಿಗೆ ಶುಕ್ರವಾರ ಬೆಳಿಗ್ಗೆ 11 ಗಂಟೆಯೊಳಗೆ ಸಾಕ್ಷ್ಯ ಒದಗಿಸುವಂತೆ ಚುನಾವಣಾ ಆಯೋಗ ಹೇಳಿದೆ. ಒಂದು ವೇಳೆ ವಿಫಲವಾದರೆ ಈ ವಿಷಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಯೋಗವು ...
ಬಜರಂಗದಳದ ಕುರಿತಂತೆ ತನಿಖೆಗೆ ಆದೇಶಿಸಿದ ಗಂಟೆಗಳೊಳಗೆ ಎಸ್ಪಿಯನ್ನು ವರ್ಗಾವಣೆಗೊಳಿಸಿದ ಘಟನೆ ಗೋವಾದಲ್ಲಿ ನಡೆದಿದೆ. ಬಜರಂಗದಳದ ಪ್ರಮುಖ ನಾಯಕ ಮತ್ತು ಇತರ ಕಾರ್ಯಕರ್ತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಎಲ್ಲಾ ಪೊಲೀಸ್ ಠಾಣೆಗಳಿಗೂ ವಯರ್ಲೆಸ್ ಸಂದೇಶವನ್ನು ಕಳುಹಿಸಿದ ಗಂಟೆಗಳ ಒಳಗೆ ಸೌತ್ ಗೋವಾ ಸೂಪರ್ ಡೆಂಟ್ ಆಫ್ ಪೊಲೀಸ್ ಸುನೀತಾ...
ಗಾಝಾದಲ್ಲಿ ನೂರರಷ್ಟು ಮಸೀದಿಯನ್ನು ನಿರ್ಮಿಸುವುದಾಗಿ ಇಂಡೋನೇಷಿಯಾ ಘೋಷಿಸಿದೆ. ರಮಝಾನ್ ಹತ್ತಿರ ಬಂದಿರುವ ಈ ಸಮಯದಲ್ಲಿ ಗಾಝಾದ ಮಂದಿಯ ಅಗತ್ಯವನ್ನು ಪರಿಗಣಿಸಿ, ಈ ನಿರ್ಧಾರ ಕೈಗೊಂಡಿರುವುದಾಗಿ ಇಂಡೋನೇಷ್ಯಾ ಹೇಳಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಗಾಝದಲ್ಲಿ ಸಾವಿರಕ್ಕಿಂತಲೂ ಅಧಿಕ ಮಸೀದಿಯನ್ನು ಇಸ್ರೇಲ್ ನಾಶಪಡಿಸಿದೆ ಎಂದು ಹೇಳಿರುವ ಇಂ...
ಕದನ ವಿರಾಮ ಒಪ್ಪಂದದಂತೆ 8 ಮಂದಿ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇವರಲ್ಲಿ ಮೂರು ಮಂದಿ ಇಸ್ರೇಲಿಯನ್ನರಾದರೆ ಐದು ಮಂದಿ ಥೈಲ್ಯಾಂಡ್ ನವರು. ಇದೇ ವೇಳೆ ನೂರಕ್ಕಿಂತಲೂ ಅಧಿಕ ಫೆಲಸ್ತೀನಿ ಕೈದಿಗಳನ್ನು ಇಸ್ರೇಲ್ ಬಿಡುಗಡೆಗೊಳಿಸಿದೆ. ಹಮಾಸ್ ಬಿಡುಗಡೆಗೊಳಿಸಿದ ಒತ್ತೆಯಾಳುಗಳಲ್ಲಿ ಇಬ್ಬರು ಮಹಿಳೆಯರಿದ್ದಾರೆ ಮತ್ತು ಓರ್ವರು 80 ವಯಸ...
ಮುಸ್ಲಿಂ ವ್ಯಕ್ತಿಯನ್ನು ಸುತ್ತುವರಿದು ಜೈ ಶ್ರೀರಾಮ್ ಎಂದು ಘೋಷಿಸುವಂತೆ ಬಲವಂತಪಡಿಸಿದ್ದ ಪ್ರಕರಣವನ್ನು ತಾನು ವರ್ಗಾವಣೆ ಮಾಡಿರುವುದಾಗಿ ಬಾಂಬೆ ಹೈಕೋರ್ಟಿಗೆ ಮಹಾರಾಷ್ಟ್ರ ಸರಕಾರ ಮಾಹಿತಿ ನೀಡಿದೆ. 2024 ಜನವರಿ 19ರಂದು ರೈಲಿನಲ್ಲಿ ಪ್ರಯಾಣಿಸುವಾಗ ಈ ಘಟನೆ ನಡೆದಿತ್ತು. ವಿದ್ಯಾರ್ಥಿಗಳ ಒಂದು ಗುಂಪು ಶೈಕ್ ಮತ್ತು ಅವರ ಪತ್ನಿಯನ್ನು ಸುತ್ತ...
ಎನ್ ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅನ್ಮೋಲ್ ಬಿಷ್ಣೋಯ್ ಅಲಿಯಾಸ್ ಭಾಯಿಜಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಮುಂಬೈ ಕ್ರೈಂ ಬ್ರಾಂಚ್ ಆತನನ್ನು ಅಮೆರಿಕದಿಂದ ಗಡಿಪಾರು ಮಾಡುವಂತೆ ಕೋರಿದ ನಂತರ ಈ ವಾರಂಟ್ ಹ...
2015ರಲ್ಲಿ ನಡೆದಿದ್ದ ಲೇಖಕ ಹಾಗೂ ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ ಹತ್ಯೆ ಪ್ರಕರಣದ ಆರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿದೆ. ನ್ಯಾಯಾಲಯವು ಪ್ರಮುಖ ಆರೋಪಿ ವೀರೇಂದ್ರಸಿನ್ಹ ತಾವ್ಡೆ ಅವರ ಜಾಮೀನು ಅರ್ಜಿಯನ್ನು ಮರು ವಿಚಾರಣೆಗೆ ಮುಂದೂಡಿದೆ. ನ್ಯಾಯಮೂರ್ತಿ ಅನಿಲ್ ಕಿಲೋರ್ ಅವರು ತಾವ್ಡೆ ಅವರ ಪ್ರಕರಣವನ್ನು ಹೆ...
ಕುಂಭಮೇಳದ ಸಂಗಮ್ ಪ್ರದೇಶದಲ್ಲಿ ಮೊನ್ನೆ ಮುಂಜಾನೆ ನಡೆದ ಕಾಲ್ತುಳಿತದಲ್ಲಿ 30 ಜನರು ಸಾವನ್ನಪ್ಪಿದ ಒಂದು ದಿನದ ನಂತರ, ಮಹಾ ಕುಂಭ ಪ್ರದೇಶವನ್ನು ವಾಹನ ನಿಷೇಧ ವಲಯವೆಂದು ಘೋಷಿಸಲಾಗಿದೆ. ವಿವಿಐಪಿ ಪಾಸ್ ಗಳನ್ನು ರದ್ದುಪಡಿಸಲಾಗಿದೆ ಮತ್ತು ಭಕ್ತರ ಸುಗಮ ಸಂಚಾರಕ್ಕೆ ಜಾತ್ರೆಗೆ ಹೋಗುವ ರಸ್ತೆಗಳನ್ನು ಏಕಮುಖವನ್ನಾಗಿ ಮಾಡಲಾಗಿದೆ. ಬುಧವಾರ, ...
ಆಂಧ್ರಪ್ರದೇಶವು ಇಂದಿನಿಂದ (ಜನವರಿ 30) 'ವಾಟ್ಸಾಪ್ ಆಡಳಿತ' ಪ್ರಾರಂಭಿಸಲು ಸಜ್ಜಾಗಿದ್ದು, ನಾಗರಿಕರಿಗೆ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ನೇರವಾಗಿ 161 ಸರ್ಕಾರಿ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಟ್ಟಿದೆ. ಈ ಕ್ರಮವು ದಾಖಲೆಗಳು ಮತ್ತು ಸೇವೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅನೇಕ ಬಾರಿ ಭೇಟಿ ನೀಡುವ ಅಗತ್ಯವನ್ನು ನಿವಾರಿಸುವ ಗುರಿಯ...
ಅಮೆರಿಕನ್ ಏರ್ ಲೈನ್ಸ್ ಪ್ರಯಾಣಿಕರ ವಿಮಾನವು ಯುಎಸ್ ಸೇನಾ ಹೆಲಿಕಾಪ್ಟರ್ ಗೆ ಡಿಕ್ಕಿ ಹೊಡೆದ ಘಟನೆ ವಾಷಿಂಗ್ಟನ್ ಬಳಿಯ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ನಡೆದಿದೆ. ಪೊಟೊಮ್ಯಾಕ್ ನದಿಯಿಂದ ಎರಡು ಶವಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅನೇಕ ಏಜೆನ್ಸಿಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಕಾನ್ಸಾಸ್ ನ ವಿಚಿತಾದಿ...