11:29 PM Wednesday 15 - October 2025

ಕಲ್ಲುಗಣಿಗಾರಿಕೆಗೆ ಹೋಗುವ ದಾರಿಯ ವಿವಾದ: ಬಡ ರೈತನಿಗೆ ಪೊಲೀಸರಿಂದ ಥಳಿತ!

haveri
30/06/2021

ಹಾವೇರಿ:  ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರನ ಕಲ್ಲುಗಣಿಗಾರಿಕೆಗೆ ಹೋಗುವ ದಾರಿಯ ವಿವಾದಕ್ಕೆ ಸಂಬಂಧಿಸಿದಂತೆ ಬಡ ರೈತನಿಗೆ ಪೊಲೀಸರು ತಹಶೀಲ್ದಾರ್ ಎದುರೇ ಥಳಿಸಿರುವ ಆರೋಪ ಕೇಳಿ ಬಂದಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾಜಿ ಸಚಿವ ರುದ್ರಪ್ಪ ಲಮಾಣಿ ಸಹೋದರನ ಕಲ್ಲುಗಣಿಗಾರಿಕೆಗೆ ಹೋಗುವ ದಾರಿ, ರೈತ ಪರಮೇಶ್ ಯಲ್ಲಪ್ಪ ಜಮೀನಿಗೆ ಸೇರಿಕೊಂಡಿದೆ ಎಂದು ಅಧಿಕಾರಿಗಳು ವಾದಿಸಿದ್ದಾರೆ. ಆದರೆ, ಹಿಂದಿನ ನಕಾಶೆಯಲ್ಲಿ ಇಲ್ಲಿ ಯಾವುದೇ ದಾರಿ ಇಲ್ಲ. ನಾನು ನನ್ನ ಜಮೀನನ್ನು ಹೇಗೆ ಬಿಟ್ಟುಕೊಡಲಿ ಎಂದು  ಸರ್ವೇಗೆ ಬಂದ ಅಧಿಕಾರಿಗಳನ್ನು ಪರಮೇಶ್ ಪ್ರಶ್ನಿಸಿದ್ದಾರೆನ್ನಲಾಗಿದೆ.

ತಾಲೂಕು ದಂಡಾಧಿಕಾರಿ ಶಂಕರ್ ಅವರ ಎದುರಲ್ಲಿ ರೈತ ವಾದಿಸಿದ್ದರಿಂದ ಈ ಜಾಗದಲ್ಲಿ ಸರ್ವೇ ಮಾಡಬೇಕು ಎಂದು ಹೇಳಿದ್ದಾರೆ. ಈ ವೇಳೆ, ರೈತ ಪರಮೇಶ್, ನೀವು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಷ್ಟು ಬಾರಿ  ಸರ್ವೇ ಮಾಡುತ್ತಿದ್ದೀರಿ? ಎಂದು ರೈತ ಆಕ್ರೋಶ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ವೇಳೆ ತಹಶೀಲ್ದಾರ್ ಎದುರೇ ಇಬ್ಬರು ಪೊಲೀಸರು ರೈತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ

Exit mobile version