10:23 AM Wednesday 20 - August 2025

ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ -ಮುಸ್ಲಿಂ ಸ್ನೇಹ ಸಮ್ಮಿಲನ

bajpe sdpi
19/11/2021

ಬಜ್ಪೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಮತ್ತು ರಾಜ್ಯ‌ ಕಾರ್ಯದರ್ಶಿ ಆನಂದ ಮಿತ್ತಬೈಲ್ ರವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದ ಭಾಗವಾಗಿ ಇಂದು ದಲಿತ ಮತ್ತು ಮುಸ್ಲಿಂ ಸ್ನೇಹ ಸಮ್ಮಿಲನವು ಬಜ್ಪೆ ವ್ಯಾಪ್ತಿಯ ಪೊರ್ಕೊಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.

ಈ ಸಂಧರ್ಭದಲ್ಲಿ ಮಾತನಾಡಿದ ಬಿ.ಆರ್.ಭಾಸ್ಕರ್ ಪ್ರಸಾದ್, ದಲಿತರು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮತ್ತು ರಾಜಕೀಯ ಹಿನ್ನಡೆ  ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ಹುಡುಕಬೇಕಾಗಿದೆ ಎಂದರು.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಅಂತಿಮವಾಗಿ ತೋರಿಸಿಕೊಟ್ಟ ರಾಜಕೀಯ ಜನಾಧಿಕಾರ ಪಡೆಯುವ ಮೂಲಕ ಮಾತ್ರವೇ ಪರಿಹಾರ ದೊರೆಕಿಸಲು ಸಾದ್ಯ, ಅದಕ್ಕಾಗಿ ಜನಸಂಖ್ಯೆ ಯಲ್ಲಿ ಶೇಕಡಾ ಐವತ್ತಕ್ಕಿಂತ ಹೆಚ್ಚಿರುವ ದಲಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಾದ  ನಾವೆಲ್ಲರೂ ತಯಾರಾಗಬೇಕು ಎಂದು ಕರೆ ನೀಡಿದರು

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ  SDPI ರಾಜ್ಯ ಕಾರ್ಯದರ್ಶಿ ಆನಂದ್ ಮಿತ್ತಬೈಲ್ ರವರು  ದಲಿತ ಮುಸ್ಲಿಂ ಐಕ್ಯತೆ  ಎಂಬುದು ಕಾಲದ ಅತೀ ಅಗತ್ಯ ಬೇಡಿಕೆ ಆಗಿದ್ದು ರಾಜಕೀಯ ಸಬಲೀಕರಣದ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದರು.

ಚರ್ಚಾ ಕೂಟದಲ್ಲಿ ಹಲವು ದಲಿತ  ಮುಖಂಡರು ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಈ ಸಂಧರ್ಭ ವೇದಿಕೆಯಲ್ಲಿ ಎಸ್.ಡಿ.ಪಿ.ಐ. ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಸಮಿತಿ ಸದಸ್ಯ ಗಣೇಶ್ ಗುರಿಯಾನ, ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಅದ್ಯಕ್ಷ ಆಸಿಫ್ ಕೋಟೆಬಾಗಿಲು, ಬಿ.ಎಸ್.ಪಿ ಜಿಲ್ಲಾ ಉಸ್ತುವಾರಿ ನಾರಾಯಣ ಭೋದಿ, ಬಿ.ಎಸ್.ಪಿ. ಜಿಲ್ಲಾ ಉಪಾದ್ಯಕ್ಷ ದೇವಪ್ಪ ಭೋದಿ ಮತ್ತು ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಪದ್ಮನಾಭ ಪೇಜಾವರ ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ ಬಜ್ಪೆ ಪಟ್ಟಣ ಪಂಚಾಯತ್ ಅದ್ಯಕ್ಷ ಇಸ್ಮಾಯಿಲ್ ಇಂಜಿನಿಯರ್ ಸ್ವಾಗತಿಸಿದರು, ಬಿ.ಎಸ್.ಪಿ. ಮೂಡಬಿದ್ರೆ ಕ್ಷೇತ್ರ ಸಮಿತಿಯ ಕಾರ್ಯಕಾರಿ ಸದಸ್ಯ ರಾಕೇಶ್ ಕುಂದರ್ ಧನ್ಯವಾದ ಸಮರ್ಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಳೆ ಅನಾಹುತ: ಬಹುಮಹಡಿ ಕಟ್ಟಡದ ಗೋಡೆ ಕುಸಿದು 9 ಮಂದಿಯ ದಾರುಣ ಸಾವು

ಭಾರೀ ಮಳೆಗೆ 3 ಮಂದಿ ಸಾವು: ಪ್ರವಾಹದ ಪರಿಣಾಮ 30 ಮಂದಿ ನಾಪತ್ತೆ

ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?

ಸೆಗಣಿ ತಿಂದು, ನೀವೂ ತಿನ್ನಿ ಎಂದು ಕರೆ ನೀಡಿದ ಹುಚ್ಚ ವೈದ್ಯ!

ಉಪ್ಪಿಟ್ಟಿನಲ್ಲಿ ಹಾವಿನ ಮರಿ?: 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಬೆಂಗಳೂರು: ನದಿಯಂತಾದ ರಸ್ತೆ, ವ್ಯಾಪಾರ ಕಳೆದುಕೊಂಡ ವ್ಯಾಪಾರಿಗಳು | ಭಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತ

ಇತ್ತೀಚಿನ ಸುದ್ದಿ

Exit mobile version