6:50 AM Saturday 18 - October 2025

ಬಾಳು ಕೊಡುತ್ತೇನೆಂದು ಮಹಿಳೆಯನ್ನು ಕರೆದೊಯ್ದ ಅರ್ಚಕ, ಕಾಡಿನಲ್ಲಿ ಬಿಟ್ಟು ಹೋದ!

archaka
23/06/2022

ಮೈಸೂರು: 10 ದಿನಗಳ ಹಿಂದೆ ಬಾಳು ಕೊಡ್ತೀನಿ ಬಾ ಎಂದು ವಿವಾಹಿತೆಯನ್ನು ಕರೆದೊಯ್ದಿದ್ದ 21 ವರ್ಷ ವಯಸ್ಸಿನ ಚಿಗುರು ಮೀಸೆಯ ಅರ್ಚಕ, ಇದೀಗ ಮಹಿಳೆಯನ್ನು ಕಾಡಿನಂಚಿನಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂರು ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ನಡೆದಿದೆ.

21 ವರ್ಷ ವಯಸ್ಸಿನ ಸಂತೋಷ್ ಎಂಬ ಅರ್ಚಕ, ತನ್ನ ಬಳಿ ಕೌಟುಂಬಿಕ ಸಮಸ್ಯೆಗೆ ಪರಿಹಾರ ಹೇಳಲು ಬಂದ 35 ವರ್ಷದ ಮಹಿಳೆಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದು,  ನಿನಗೆ ಹೊಸ ಬಾಳು ಕೊಡುತ್ತೇನೆ ಎನ್ನುವ ಕಥೆ ಕಟ್ಟಿ  10 ದಿನಗಳ ಕಾಲ ಆಕೆಯ ಜೊತೆಗೆ ತಿರುಗಾಡಿದ್ದಾನೆ. ಬಳಿಕ ಆತ್ಮಹತ್ಯೆಯ ನಾಟಕವಾಡಿ ಕಾಡಿಗೆ ಕರೆದೊಯ್ದು ಕಾಡಿನಲ್ಲಿ ಇದ್ದಕ್ಕಿದ್ದಂತೆಯೇ ನಾಪತ್ತೆಯಾಗಿದ್ದಾನೆ ಎಂದು ವರದಿಯಾಗಿದೆ.

ರಾತ್ರಿ ಇಡೀ ಕಾಡಿನಲ್ಲಿ ಒಬ್ಬಂಟಿಯಾಗಿ ಕಳೆದ ಮಹಿಳೆ ಮುಂಜಾನೆ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದು, ಗೃಹಿಣಿಯನ್ನು ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಅರ್ಚಕನ ಮಾತು ನಂಬಿ ಹೋಗಿದ್ದ ಮಹಿಳೆಗೆ ಇದೀಗ ಅತ್ತ ಗಂಡನ ಮನೆಯೂ ಇಲ್ಲ, ಇತ್ತ ಬಾಳುಕೊಡುತ್ತೇನೆ ಎಂದಿದ್ದವನೂ ಇಲ್ಲ ಎಂಬಂತಾಗಿದ್ದು, ಅತಂತ್ರ ಸ್ಥಿತಿಯಲ್ಲಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ರಾಜೀನಾಮೆ ನೀಡಲು ಸಿದ್ಧ:  ಉದ್ಧವ್ ಠಾಕ್ರೆ

ಆಪರೇಷನ್ ಕಮಲ ಬಾಂಬ್: ಉದ್ಧವ್ ಠಾಕ್ರೆ ಸರ್ಕಾರ ಪತನಕ್ಕೆ ಡೆಡ್ ಲೈನ್

ಪ್ರಕೃತಿಯ ಕುತೂಹಲಕಾರಿ ಜೀವಿಗಳ ಅದ್ಭುತ ನೋಟ: ದೈತ್ಯ ಜೀವಿಗಳ ಅಚ್ಚರಿಯ ಸಂಗತಿ

ಸಮುದ್ರದಲ್ಲಿ ಮುಳುಗಿ ಹೋದ ಪ್ರಸಿದ್ಧ ತೇಲುವ ರೆಸ್ಟೋರೆಂಟ್!

ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ

ಇತ್ತೀಚಿನ ಸುದ್ದಿ

Exit mobile version