4:02 PM Wednesday 15 - October 2025

ಬಿಇಎಂಎಲ್ ಖಾಸಗೀಕರಣ ಪ್ರಶ್ನಿಸಿ ಪಿಐಎಲ್ : ಕರ್ನಾಟಕ ಹೈಕೋರ್ಟ್‌‌ನಿಂದ ಕೇಂದ್ರ ಸರ್ಕಾರಕ್ಕೆ ನೋಟಿಸ್

high court
19/01/2022

ಬೆಂಗಳೂರು: ಕೇಂದ್ರ ಸರ್ಕಾರದ ಒಡೆತನದ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಖಾಸಗೀಕರಣಗೊಳಿಸುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಸರ್ಕಾರ ಹಾಗೂ ಬಿಇಎಂಎಲ್ ​ಗೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಬಿಇಎಂಎಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ರುದ್ರಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ರಕ್ಷಣಾ ವಲಯದ ಅತ್ಯಂತ ಪ್ರಮುಖ ಉದ್ದಿಮೆಯಾದ ಬಿಇಎಂಎಲ್​ನ್ನು ಖಾಸಗೀಕರಣಗೊಳಿಸುವ ಕ್ರಮಸರಿಯಲ್ಲ. ಅದರೂ, ಖಾಸಗೀಕರಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆಸಕ್ತ ಬಿಡ್ಡರ್ ​ಗಳ ಮೌಲ್ಯಮಾಪನ ನಡೆಸಲಾಗುತ್ತಿದೆ.

ಖಾಸಗೀಕರಣ ಪ್ರಕ್ರಿಯೆ ಕೈಬಿಡುವಂತೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಸೇರಿದಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ವಿವರಿಸಿದರು.

ಅಲ್ಲದೆ, ರಕ್ಷಣಾ ವಲಯದ ಉದ್ದಿಮೆಯಾದ್ದರಿಂದ ಖಾಸಗೀಕರಣಗೊಳಿಸುವುದು ಸರಿಯಲ್ಲ. ಹೀಗಾಗಿ, ಖಾಸಗೀಕರಣ ಪ್ರಕ್ರಿಯೆಗೆ ನ್ಯಾಯಾಲಯ ಮಧ್ಯಂತರ ತಡೆ ನೀಡಬೇಕು. ಇಲ್ಲವೇ, ಖಾಸಗೀಕರಣ ಪ್ರಕ್ರಿಯೆಯು ಈ ಅರ್ಜಿ ಸಂಬಂಧ ನ್ಯಾಯಾಲಯ ನೀಡಲಿರುವ ಅಂತಿಮ ತೀರ್ಪಿಗೆ ಒಳಪಡಲಿದೆ ಎಂದಾದರೂ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮೊದಲು ನೊಟೀಸ್ ಜಾರಿಯಾಗಲಿ. ಪ್ರತಿವಾದಿಗಳು ತಮ್ಮ ನಿಲುವು ತಿಳಿಸಿದ ನಂತರ ಈ ಕುರಿತು ವಿಚಾರಣೆ ನಡೆಸೋಣ ಎಂದು ತಿಳಿಸಿ ಮಧ್ಯಂತರ ತಡೆ ನೀಡಲು ನಿರಾಕರಿಸಿತು. ಜತೆಗೆ, ನೋಟಿಸ್ ಜಾರಿಗೆ ಆದೇಶಿಸಿದ ಪೀಠ ವಿಚಾರಣೆಯನ್ನು ಫೆ. 10ಕ್ಕೆ ಮುಂದೂಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾರಾಯಣ ಗುರುಗಳ ಸ್ತಬ್ಧಚಿತ್ರ ವಿವಾದ : ಸಿದ್ದರಾಮಯ್ಯ ಕಿಡಿ

ಮಂಗಳೂರು: ತ್ಯಾಜ್ಯ ವಿಲೇವಾರಿ ವಿಳಂಬ; ಪಾಲಿಕೆ ಆಯುಕ್ತರಿಗೆ ಹೈಕೋರ್ಟ್ ಎಚ್ಚರಿಕೆ

ಕೋವಿಡ್ ಲಸಿಕೆ ಸಾವು ತಪ್ಪಿಸುತ್ತದೆಯೇ ಹೊರತು ಸೋಂಕು ಬರುವುದನ್ನಲ್ಲ: ಸಚಿವ ಡಾ. ಸುಧಾಕರ್‌

ಭಾರೀ ಪ್ರಮಾಣದ ಹಿಮಕುಸಿತ; ಭಾರತೀಯ ಸೇನೆಯಿಂದ 30 ನಾಗರಿಕರ ರಕ್ಷಣೆ

ನಾಪತ್ತೆಯಾಗಿದ್ದ ನಟಿ ರೈಮಾ ಇಸ್ಲಾಂ ಶಿಮು ಅವರ ಮೃತದೇಹ ಗೋಣಿಚೀಲದಲ್ಲಿ ಪತ್ತೆ

 

 

ಇತ್ತೀಚಿನ ಸುದ್ದಿ

Exit mobile version