12:26 PM Wednesday 15 - October 2025

ವಿದ್ಯುತ್‌ ಶಾಕ್:‌ ಕುಮಾಸ್ವಾಮಿಯಿಂದ ಮೂರುಪಟ್ಟು ದಂಡ ವಸೂಲಿ ಮಾಡಿದ ಬೆಸ್ಕಾಂ

h d kumarasawmy
17/11/2023

ಬೆಂಗಳೂರು: ಬೆಂಗಳೂರು: ಮನೆಯ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಹಿನ್ನೆಲೆ ಬೆಸ್ಕಾಂ ತಮ್ಮಿಂದ ಬಳಕೆ ಮಾಡಿದ್ದ ವಿದ್ಯುತ್ ಗಿಂತಲೂ ಮೂರುಪಟ್ಟು ದಂಡವನ್ನು ಬೆಸ್ಕಾಂ ವಿಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ನಗರದ ಜೆಡಿಎಸ್ ಪಧಾನಕಚೇರಿ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಸ್ಕಾಂ  ವಿಧಿಸಿದ 68,526 ರೂಪಾಯಿ ದಂಡದ ಮೊತ್ತವನ್ನು ಪಾವತಿಸಲಾಗಿದೆ. ಬೆಸ್ಕಾಂ ಇಲಾಖೆ ಅಧಿಕಾರಿಗಳು 2,526 ರೂ. ಬಿಲ್ ಬದಲು 68,526 ರೂಪಾಯಿ ದಂಡದ ಬಿಲ್ ನೀಡಿದ್ದಾರೆ. ಕರೆಂಟ್ ಬಿಲ್ ಕಟ್ಟಲು ನಾನು ಸಿದ್ಧನಿದ್ದೇನೆ. ಲೈಟಿಂಗ್ ಹಾಕಿದ್ದಕ್ಕೆ ಹೆಚ್ಚು ಕರೆಂಟ್ ತೆಗೆದುಕೊಳ್ಳುವುದಿಲ್ಲ. ಅದು 1 ಕಿಲೋ ವ್ಯಾಟ್‌ ಗಿಂತ ಕಡಿಮೆ ಇರುತ್ತದೆ.

ಆದರೆ ಇವರು 2.5 ಕಿಲೋ ವ್ಯಾಟ್‌ ಗೆ ಲೆಕ್ಕ ತೆಗೆದುಕೊಂಡಿದ್ದಾರೆ. 7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಆದರೆ ಅವರು 71 ಯೂನಿಟ್‌ ಗೆ ಮೂರು ಪಟ್ಟು ದಂಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದೇನೆ. ಬೆಸ್ಕಾಂ ನೀಡಿದ ಬಿಲ್ ಕೂಡ ಸರಿ ಇಲ್ಲ ಅಂತ ಪ್ರತಿಭಟನೆ ಮಾಡಿದ್ದೇನೆ. ಬೆಸ್ಕಾಂ ಇಲಾಖೆ ಪ್ರಕಾರ 2,526 ರೂಪಾಯಿ ಬಿಲ್ ನೀಡಬೇಕಿತ್ತು. ಆದರೆ ಬೆಸ್ಕಾಂ ಇಲಾಖೆ 68,526 ರೂ. ಕರೆಂಟ್ ಬಿಲ್ ನೀಡಿದೆ ಎಂದು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version