1:13 AM Sunday 14 - September 2025

ಬೆಟ್ಟಿಂಗ್ ಆಪ್ ಮಾಲಿಕ ರವಿ ಉಪ್ಪಾಳ್ ದುಬೈನಲ್ಲಿ ಅರೆಸ್ಟ್

betting app
13/12/2023

ನವದೆಹಲಿ: ಛತ್ತೀಸ್ ಗಢ ಮಹಾದೇವ್ ಬೆಟ್ಟಿಂಗ್ ಆಪ್ ಮಾಲಿಕರಲ್ಲಿ ಒಬ್ಬನಾಗಿರುವ ರವಿ ಉಪ್ಪಾಳ್ ನನ್ನು ದುಬೈನಲ್ಲಿ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಇ.ಡಿ. ಆದೇಶದ ಮೇರೆಗೆ ಇಂಟರ್ ಪೋಲ್ ಹೊರಡಿಸಿದ ರೆಡ್ ನೋಟಿಸ್ ಆಧಾರದಲ್ಲಿ ಸ್ಥಳೀಯ ಪೊಲೀಸರು ದುಬೈನಲ್ಲಿ ಆರೋಪಿ ರವಿ ಉಪ್ಪಾಳ್ ನನ್ನು ಅರೆಸ್ಟ್ ಮಾಡಿದ್ದಾರೆ.
ಸೌರಭ್ ಚಂದ್ರಕಾರ್ ಮತ್ತು ರವಿ ಉಪ್ಪಾಳ್ ಆರಂಭಿಸಿದ್ದ ಮಹಾದೇವ್ ಬೆಟ್ಟಿಂಗ್ ಆಪ್ ದುಬೈನಿಂದ ಕಾರ್ಯಾಚರಿಸುತ್ತಿತ್ತು. ಇದು ಬೇನಾಮಿ ಖಾತೆಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡುತ್ತಿತ್ತು ಎಂದು ಇ.ಡಿ. ಆರೋಪಿಸಿದೆ.

ಕಳೆದ ವಾರ ರವಿ ಉಪ್ಪಾಳ್ ನನ್ನು ದುಬೈನಲ್ಲಿ ಬಂಧಿಸಲಾಗಿದೆ. ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ಇ.ಡಿ. ಅಧಿಕಾರಿಗಳು ದುಬೈ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ರವಿ ಉಪ್ಪಾಳ್ ಫೆಸಿಫಿಕ್ ಮಹಾಸಾಗರ ದ್ವೀಪ ರಾಷ್ಟ್ರ ವನೌಟುದ ಪೌರತ್ವ ಹೊಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version