10:15 AM Thursday 21 - August 2025

ಅಲರ್ಟ್: ಗುಜರಿಗೆ ಹಾಕುವ ಮುನ್ನ‌ ಈ ನಿಯಮಗಳನ್ನು ಪಾಲಿಸದೆ ಇದ್ರೆ ಅಪಾಯ ಗ್ಯಾರಂಟಿ!

18/10/2024

ಗುಜರಿಗೆ ಹಾಕುವ ಮುನ್ನ ನಿಯಮಗಳನ್ನು ಪಾಲಿಸದೆ ಇದ್ದರೆ ಎಚ್ಚರ. ನಿಮ್ಮ ಹಳೆಯ ವಾಹನ ಅಪರಾಧಕ್ಕೆ ಬಳಸಲು ಸಾಧ್ಯ. ಹೌದು.

ವಾಹನವನ್ನು ಗುಜರಿಗೆ ಮಾರಾಟ ಮಾಡಿದರೆ ವಾಹನದ ದೋಷಗಳನ್ನು ಸರಿಪಡಿಸಿ ಮರು ಬಳಕೆ ಮಾಡುವ, ಇಂತಹ ವಾಹನವನ್ನು ಕಳ್ಳತನ, ದರೋಡೆ, ನಿಷೇಧಿತ ಮಾದಕ ವಸ್ತುಗಳ ಸಾಗಾಟ ಸೇರಿದಂತೆ ಅಪರಾಧ ಕೃತ್ಯಗಳಿಗೆ ಬಳಸುವ ಸಾಧ್ಯತೆ ಇದೆ.

ವಾಹನವನ್ನು ಗುಜರಿಗೆ ಹಾಕುವ ಬಹುತೇಕರು ವಾಹನದ ನೋಂದಣಿಯನ್ನು ರದ್ದು ಮಾಡದ ಕಾರಣ, ವಾಹನ ಮಾಲೀಕರು ಅಪರಾಧ ಪ್ರಕರಣಗಳಲ್ಲಿಸಿಲುಕುವ ಸಾಧ್ಯತೆ ಇದೆ. ಇದರಿಂದ ಪಾರಾಗಲು ವಾಹನವನ್ನು ಮುನ್ನ ಗುಜರಿಗೆ ಹಾಕುವ ಮೊದಲು ಅನುಮತಿ ಪಡೆಯುವಂತೆ ಮೋಟಾರು ವಾಹನ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ವಾಹನ ಕ್ರಾಪ್ ಮಾಡುವ ಅನುಮತಿ ಹಾಗೂ ನೋಂದಣಿ ಪ್ರಮಾಣಪತ್ರದ ರದ್ದತಿಗಾಗಿ ಅರ್ಜಿ ಸಲ್ಲಿಸಬೇಕು. ವಾಹನದ ಈ ಹಿಂದಿನ ಬಾಕಿ ದಂಡ ಪಾವತಿ ಇತ್ಯಾದಿಗಳನ್ನು ಸಹಾಯಕ ಮೋಟಾರು ವಾಹನ ತಪಾಸಣಾಧಿಕಾರಿ ಪರಿಶೀಲಿಸಿ ಪಾವತಿ ಬಾಕಿ ಇದ್ದರೆ ಅದನ್ನು ಪಾವತಿಸಿದ ಬಳಿಕ ಆರ್‌ಸಿ ರದ್ದುಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ವಾಹನಗಳ ಅವಧಿ ಅಥವಾ ಅಪಘಾತಗಳ ಕಾರಣದಿಂದ ನಿರುಪಯುಕ್ತವಾದಾಗ ಅದನ್ನು ಸ್ಕ್ರ್ಯಾಪ್‌ ಮಾಡಲಾಗುತ್ತದೆ. ಆರ್‌ಸಿ ರದ್ದುಗೊಳಿಸದೆ ವಾಹನವನ್ನು ಸ್ಕ್ರ್ಯಾಪ್‌ ಮಾಡಲು ಹಸ್ತಾಂತರಿಸಿದಾಗ ವಾಹನದ ಎಲ್ಲದಾಖಲೆಗಳು ಹಾಗೇ ಉಳಿಯುತ್ತವೆ. ಸ್ಕ್ರ್ಯಾಪ್‌ ಮಾಡಲಾಗುವ ವಾಹನದ ಎಂಜಿನ್‌ ಅಥವಾ ಚಾಸಿಸ್‌ನ್ನು ಬೇರೆ ವಾಹನದಲ್ಲಿಬಳಸುವ ಸಾಧ್ಯತೆಯೂ ಇದೆ. ಇಂತಹ ವಾಹನಗಳು ಅಪಘಾತ ಅಥವಾ ಕಾನೂನುಬಾಹಿರ ಕೃತ್ಯಗಳಲ್ಲಿಸಿಕ್ಕಿಬಿದ್ದರೆ ಎಂಜಿನ್‌ ಮತ್ತು ಚಾಸಿಸ್‌ ಸಂಖ್ಯೆ ಮೂಲಕ ಮೂಲ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version