11:03 PM Wednesday 22 - October 2025

8ನೇ ಬಾರಿಗೆ ನಡುಗಿದ ಭೂಮಿ: ಮಳೆ, ಭೂಕಂಪನದಿಂದ ಕಂಗೆಟ್ಟ ಜನ

earthquake
10/07/2022

ಸುಳ್ಯ: ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ  ಮತ್ತೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. 8ನೇ ಬಾರಿಗೆ ಭೂಮಿ ಕಂಪಿಸಿದ್ದು, ಇಲ್ಲಿನ ನಿವಾಸಿಗಳು ತೀವ್ರ ಆತಂಕಕ್ಕೊಳಗಾಗಿದ್ದಾರೆ.

ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಮುಂತಾದೆಡೆ ಭೂಕಂಪನದ ಅನುಭವವಾಗಿದೆ.  ಮಲಗಿದ್ದ ವೇಳೆ ಭೂಮಿ ನಡುಗಿದ ಅನುಭವವಾಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.

ಒಂದೆಡೆ ಭಾರೀ ಮಳೆ ಇನ್ನೊಂದೆಡೆ ನಡುಗುತ್ತಿರುವ ಭೂಮಿ. ಇದರಿಂದಾಗಿ ಜನರು ತೀವ್ರವಾಗಿ ಆತಂಕಿತರಾಗಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿದೆ.

ವರದಿಗಳ ಪ್ರಕಾರ, ಜುಲೈ 10ರಂದು ಬೆಳಗ್ಗೆ 6:24ರ ಸುಮಾರಿಗೆ ಭೂಮಿ ನಡುಗಿದೆ. ಭಾರೀ ಶಬ್ಧದೊಂದಿಗೆ ಭೂಮಿ ನಡುಗಿರುವುದಾಗಿ ಜನರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version