1 ಬಿಲಿಯನ್ ಡಾಲರ್ ಮೊತ್ತದ ಆಯುಧಗಳನ್ನು ಇಸ್ರೇಲ್ ಗೆ ನೀಡಲು ಅಮೆರಿಕ ನಿರ್ಧಾರ

ಒಂದು ಬಿಲಿಯನ್ ಡಾಲರ್ ಮೊತ್ತದ ಆಯುಧಗಳನ್ನು ಇಸ್ರೇಲ್ ಗೆ ನೀಡಲು ಅಮೆರಿಕ ನಿರ್ಧರಿಸುವುದಾಗಿ ವರದಿಯಾಗಿದೆ. ಶಸ್ತ್ರಾಸ್ತ್ರ ಮಾರಾಟಕ್ಕೆ ಸಂಬಂಧಿಸಿ ಅಮೆರಿಕದ ಪಾರ್ಲಿಮೆಂಟ್ ನಲ್ಲಿ ಅಧ್ಯಕ್ಷ ಜೋ ಬೈಡನ್ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ. ಈ ಪ್ರಸ್ತಾಪಕ್ಕೆ ಅಮೆರಿಕಾದ ಪಾರ್ಲಿಮೆಂಟ್ ಅನುಮತಿ ನೀಡಬೇಕಿದೆ. ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯು ವರದಿ ಮಾಡಿದೆ.
ಇಸ್ರೇಲ್ ಗೆ ಶಸ್ತ್ರಾಸ್ರ ಮಾರಾಟವನ್ನು ಅಮೆರಿಕ ಸ್ಥಗಿತಗೊಳಿಸಿದೆ ಎಂಬ ಮಾಹಿತಿ ಹೊರಬಿದ್ದ ಬಳಿಕ ಈ ಬೆಳವಣಿಗೆ ನಡೆದಿದೆ. ರಫಾದ ಜನಸಾಂದ್ರತೆಯ ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಬಳಸುವುದನ್ನು ವಿರೋಧಿಸಿ ಅಮೇರಿಕಾ ಇಸ್ರೇಲ್ ಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ನಿರಾಕರಿಸಿತ್ತು ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ವತಃ ಬೈಡನ್ ಅವರೇ ಮುತುವರ್ಜಿ ವಹಿಸಿ ಇಸ್ರೇಲ್ ಗೆ ಶಸ್ತ್ರಾಸ್ತ್ರ ಮಾರಾಟ ಮಾಡಲು ಮುಂದಾಗಿರುವುದು ಕಂಡುಬಂದಿದೆ. ಸುಮಾರ್ 14 ಬಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ರಾವನ್ನು ಇಸ್ರೇಲ್ ಗೆ ಅಮೆರಿಕ ಮಾರಾಟ ಮಾಡಲು ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth