‘ತಲ್ವಾರ್ ಹಿಡಿದ ಬೈಕ್ ಸವಾರರು’: ಸುಳ್ಳು ಸುದ್ದಿಯನ್ನು ಹರಡಿದವರ ವಿರುದ್ಧ ದೂರು

bajape
08/06/2025

ಬಜಪೆ:  ತಲ್ವಾರ್ ಹಿಡಿದು ಬೈಕ್ ಸವಾರರು ಪ್ರಯಾಣಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ಫೋಟೋ ಹಾಗೂ ವಾಯ್ಸ್ ಕ್ಲಿಪ್ ನ  ಅಸಲಿಯತ್ತು ಬಯಲಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಸೂರಲ್ಪಾಡಿ ನಿವಾಸಿ ಮೊಹಮ್ಮದ್ ಸುಹೈಲ್ ಎಂಬವರು ಘಟನೆ ಸಂಬಂಧ ದೂರು ನೀಡಿದ್ದು, ನಾನು ಬೈಕ್ ನಲ್ಲಿ ಸ್ನೇಹಿತನೊಂದಿಗೆ ಮೂಡುಬಿದಿರೆಗೆ ಹೋಗುತ್ತಿದ್ದ ಸಂದರ್ಭ ಆಕ್ಟೇರಿಯಂ ಕಲ್ಲು ಮತ್ತು ಇ–ಸಿಗರೇಟ್ ಹಿಡಿದುಕೊಂಡಿದ್ದನ್ನು ಯಾರೋ ದುಷ್ಕರ್ಮಿಗಳು ಫೋಟೊ ತೆಗೆದು ‘ತಲ್ವಾರ್ ಹಿಡಿದ ಬೈಕ್ ಸವಾರರು’ ಎಂದು ಫೋಟೊ ಮತ್ತು ವಾಯ್ಸ್ ಕ್ಲಿಪ್‌ನ್ನು ‘ಕರಾವಳಿ ಟೈಗರ್ಸ್‌’ ಎಂಬ ಇನ್ಸಾಗ್ರಾಂ ಪೇಜ್ ಸುಳ್ಳು ಸುದ್ದಿ ಹರಡಿ ಕೋಮು ಪ್ರಚೋದನೆ ನೀಡಿದ್ದು, ಈ ಸಂಬಂಧ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆ ಸಂಬಂಧ ಮಂಗಳೂರು ನಗರ ಪೊಲೀಸರು ಸ್ಪಷ್ಟನೆ ನೀಡಿದ್ದು, ವಾಟ್ಸಪ್‌ ನಲ್ಲಿ ಹರಿದಾಡಿದ ತಲ್ವಾರ್ ಹಿಡಿದ ಬೈಕ್ ಸವಾರರ ಫೋಟೊ ಮತ್ತು ವಾಯ್ಸ್ ಕ್ಲಿಪ್ ತಪ್ಪು ಮಾಹಿತಿಯಾಗಿದೆ. ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ಟೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರು ಎಂದು ಸತ್ಯಾಂಶ ಬಯಲಿಗೆಳೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version