ಬಿಜೆಪಿಗೆ ಹೇಗೆ ಮತ ಗಳಿಸಬೇಕು ಎಂದು ಗೊತ್ತಿದೆ: ರಾಕೇಶ್ ಟೀಕಾಯತ್ ಹೇಳಿಕೆ

ಮುಝಾಫರ್ ನಗರ: ಬಿಜೆಪಿ ಕೇವಲ ಮತಗಳಿಸಲು ಮಾತ್ರವೇ ಕೆಲಸ ಮಾಡುತ್ತದೆ ಮತ್ತು ಮತಗಳಿಸುವಲ್ಲಿ ಯಶಸ್ವಿಯೂ ಆಗಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ನಮಗೆ ಯಾರು ಗೆದ್ದಿದ್ದಾರೆ ಎನ್ನುವುದು ಮುಖ್ಯವಲ್ಲ. ರೈತರ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಸಬೇಕು. ರೈತರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಬೇಕು ಎಂದು ಟಿಕಾಯತ್ ಒತ್ತಾಯಿಸಿದರು.
ಇನ್ನೂ ರೈತ ಚಳುವಳಿಯಿಂದ ಬಿಜೆಪಿಗೆ ಹಾನಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಚುನಾವಣೆಯಲ್ಲಿ ಪಡೆದುಕೊಂಡದ್ದಕ್ಕಿಂತ ಕಡಿಮೆ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮುಝಾಫರ್ ನಗರದ 6 ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋತಿದೆ ಎಂದರು.
ಬಿಜೆಪಿಗೆ ಹೇಗೆ ಮತ ಗಳಿಸಬೇಕು ಎನ್ನುವುದು ಗೊತ್ತು. ಒಂದೆಡೆ ಜನರನ್ನು ಬಡವರನ್ನಾಗಿ ಮಾಡುತ್ತಿದೆ. ಕೋಮುವಾದವನ್ನು ಬೆಳೆಸಿ ಸಮುದಾಯಗಳನ್ನು ಒಡೆಯುತ್ತಿದೆ. ಈ ದುರಂತ ಇಡೀ ದೇಶಾದ್ಯಂತ ನಡೆಯುತ್ತಿದೆ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಲ್ಪೆ ಸಮುದ್ರದಲ್ಲಿ ಬಲೆಗೆ ಬಿದ್ದ ಗರಗಸ ಮೀನು !
ರಾಜೀವ್ ಹಂತಕ ಜಾಮೀನಿನಲ್ಲಿ ಬಿಡುಗಡೆಯಾಗುತ್ತಿದ್ದಂತೆಯೇ ಮದುವೆಗೆ ಸಿದ್ಧತೆ!
ದೇಶದ 2ನೇ ಅತೀ ದೊಡ್ಡ ಶ್ರೀಮಂತ ಪಕ್ಷ ಬಿಎಸ್ ಪಿಗೆ ಹೀನಾಯ ಸೋಲು | ಮಾಯಾವತಿಜಿ ಇದು ನ್ಯಾಯವೇ?
ಪಂಜಾಬ್ ಸಿಎಂ ಚರಣ್ ಜಿತ್ ಸಿಂಗ್ ರಾಜೀನಾಮೆ
ಪಂಚರಾಜ್ಯ ಚುನಾವಣೆ: ರಾಜ್ಯದ ಮೇಲೆ ಪರಿಣಾಮ ಬೀರಲ್ಲ; ಸಚಿವ ವಿ.ಸೋಮಣ್ಣ