ಬಿಜೆಪಿ ‘ಯುವ ತಂಡ’ ರಚನೆಗೆ ಪ್ರಯತ್ನ ಮಾಡುತ್ತಿದೆ: ಪ್ರಧಾನಿ ಮೋದಿ

ಬೆಂಗಳೂರು: ಬಿಜೆಪಿ ಯುವ ತಂಡ ರಚನೆಗೆ ಪ್ರಯತ್ನ ಮಾಡುತ್ತಿದೆ. ಕರ್ನಾಟಕಕ್ಕೆ, ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ ಎಂದು ಪ್ರಧಾನಿ ಮೋದಿ ಹೇಳಿದರು.50 ಲಕ್ಷ ಕಾರ್ಯಕರ್ತರ ಸಮ್ಮುಖದಲ್ಲಿ ವೀಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ಲೋಕತಂತ್ರದ ಉತ್ಸವ ನಡೆಯುತ್ತಿದೆ. ಬಿಜೆಪಿ ಸದಾ ಚುನಾವಣೆಗಳನ್ನು ಲೋಕ ತಂತ್ರದ ಮಹೋತ್ಸವದಂತೆ ಆಚರಿಸುತ್ತದೆ. ರಾಜ್ಯದ ಸಮೃದ್ಧ ಪರಂಪರೆಯ ಪ್ರತಿನಿಧಿಗಳಾಗಿದ್ದಾರೆ. ನಮ್ಮ ಕಾರ್ಯಕರ್ತರು ಬಿಜೆಪಿಯನ್ನು ದಾಖಲೆಯ ಸ್ಥಾನಗಳಲ್ಲಿ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ನುಡಿದರು.
2014 ರವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಏಮ್ಸ್ ಸಂಸ್ಥೆಗಳ ನಿರ್ಮಾಣ ಆಗಿದೆ. ಈಗ 20 ಏಮ್ಸ್ ಸಂಸ್ಥೆಗಳು ಇವೆ. ಆಗ ಫಲಾನುಭವಿಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ. ಕಾಂಗ್ರೆಸ್ ಖುದ್ದು ಭ್ರಷ್ಟಾಚಾರಿ ಪಕ್ಷ. 2014ರ ಬಳಿಕ ಭ್ರಷ್ಟಾಚಾರ ನಿಯಂತ್ರಣದಲ್ಲಿ ವೇಗ ವೃದ್ಧಿಸಿದೆ ಎಂದು ಹೇಳಿದರು.
2 ದಿನಗಳ ನಂತರ ನಾನೂ ಕಾರ್ಯಕರ್ತರ ನಡುವೆ ರಾಜ್ಯದ ಜನರ ದರ್ಶನಕ್ಕೆ, ಆಶೀರ್ವಾದಕ್ಕೆ ಬರುತ್ತಿದ್ದೇನೆ. ರಾಜ್ಯದಲ್ಲಿ ಎಲ್ಲೇ ಹೋದರೂ ಅಲ್ಲಿನ ಜನ ಹೃದಯ ಪೂರ್ವಕ ಆಶೀರ್ವಾದ ಮಾಡಿದ್ದಾರೆ. ಕರ್ನಾಟಕದ ಜನರ ವಿಶ್ವಾಸ ಬಿಜೆಪಿ ಮೇಲೆ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ರಾಜ್ಯ ಬಿಜೆಪಿ ಘಟಕ ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ಅಭಿನಂದನಾರ್ಹ ಎಂದು ಹಾಡಿ ಹೊಗಳಿದರು.
ಬಿಜೆಪಿ ಈ ರೀತಿ ಶಾರ್ಟ್ ಕಟ್ ದಾರಿಯಲ್ಲಿ ಸಾಗಲ್ಲ. ನಮಗೆ ದೇಶದ ಭವಿಷ್ಯ ಬೇಕು. ನಾವು 5 ವರ್ಷ ಅಷ್ಟೇ ಆಡಳಿತ ಗುರಿ ಇಟ್ಟುಕೊಂಡಿಲ್ಲ. ನಮ್ಮ ಕನಸು ದೇಶದ ಭವಿಷ್ಯ ಉತ್ತಮ, ಸುರಕ್ಷೆಯಾಗಿಡುವುದು. ಮುಂದಿನ 25 ವರ್ಷ ದೇಶದ ಚಿತ್ರಣ ಬದಲಾಗಲಿದೆ ಎಂದು ಕಾಂಗ್ರೆಸ್ನ ಉಚಿತ ಯೋಜನೆಗಳಿಗೆ ಮೋದಿ ಕೌಂಟರ್ ನೀಡಿದರು.
ಶಿವಮೊಗ್ಗದ ವಿರೂಪಾಕ್ಷಪ್ಪ ಅವರ ಕಾರ್ಯಕರ್ತರಿಗೆ ನಿಮ್ಮ ಸಲಹೆಗಳೇನು ಎಂಬ ಪ್ರಶ್ನೆಗೆ ಉತ್ತರಿಸಿದ ಮೋದಿ, ತಲಾ 10 ಮಹಿಳೆಯರು, 20 ಪುರುಷರ ತಂಡ ರಚಿಸಿ ಬೂತ್ ಮಟ್ಟದಲ್ಲಿ ಡಬಲ್ ಎಂಜಿನ್ ಸರ್ಕಾರದ ಸಾಧನೆ ತಿಳಿಸಿ. ಜನರ ಜೊತೆ ಒಡನಾಡಿಯಾಗಿ, ಕಷ್ಟ ಸುಖ ಕೇಳಿ, ಆತ್ಮೀಯವಾಗಿ ಮಾತನಾಡಿಸಿ. ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಬಗ್ಗೆ ತಿಳಿಸಿ. ಅದರ ಫಲ ಸಿಕ್ಕಿದೆಯಾ ಅಂತ ಅಭಿಪ್ರಾಯ ಕೇಳಿ. ಬಿಜೆಪಿಗೆ ಮತ ಹಾಕುವಂತೆ ಪ್ರೇರೇಪಿಸಿ. ವಿರೋಧ ಪಕ್ಷದವರ ಅಜೆಂಡಾ ಅರ್ಥ ಮಾಡಿಕೊಂಡು ಕೆಲಸ ಮಾಡಿ.
ಪೂರ್ಣಬಹುಮತ ಬಗ್ಗೆ ಜನರನ್ನು ಮನವರಿಕೆ ಮಾಡಿಸಿ. ಒಂದೇ ಸರ್ಕಾರದ ಮಹತ್ವ ಬಗ್ಗೆ ಅರ್ಥ ಮಾಡಿಸಿ ಎಂದು ಹೇಳಿದರು.ಟ್ರ್ಯಾಕ್ಟರ್ಗೆ ಮಾರುತಿ ಕಾರು ಚಕ್ರ ಹಾಕಿದರೆ ಆ ಟ್ರ್ಯಾಕ್ಟರ್ ಸರಿಯಾಗಿ ಓಡುತ್ತಾ? ಇಲ್ಲ. ಒಂದೇ ತರಹದ ಚಕ್ರ ಇದ್ದರೆ ಮಾತ್ರ ಓಡುತ್ತದೆ. ಹಾಗೇಯೇ ಡಬಲ್ ಎಂಜಿನ್ ಸರ್ಕಾರ ಕೂಡಾ. ವಿಕಾಸದ ವೇಗ ಡಬಲ್ ಎಂಜಿನ್ ಸರ್ಕಾರದಲ್ಲಿ ಹೆಚ್ಚಾಗಿರುತ್ತದೆ ಎಂದು ಬಿಡಿಸಿ ಹೇಳಿದರು.
ಬಿಜೆಪಿ ಯುವ ತಂಡ ರಚನೆಗೆ ಪ್ರಯತ್ನ ಮಾಡುತ್ತಿದೆ. ಕರ್ನಾಟಕಕ್ಕೆ, ಬೆಂಗಳೂರಿಗೆ ವಿಶ್ವದಲ್ಲಿ ಉತ್ತಮ ಹೆಸರಿದೆ. 2014 ರವರೆಗೆ ಏಮ್ಸ್ ಸಂಸ್ಥೆಗಳ ಸಂಖ್ಯೆ 7 ಇದ್ದವು. ನಾವು ಬಂದ ಮೇಲೆ 3 ಪಟ್ಟು ಏಮ್ಸ್ ಸಂಸ್ಥೆಗಳ ನಿರ್ಮಾಣ ಆಗಿದೆ. ಈಗ 20 ಏಮ್ಸ್ ಸಂಸ್ಥೆಗಳು ಇವೆ. ಆಗ ಫಲಾನುಭವಿಗಳ ಬಗ್ಗೆ ಯೋಚನೆ ಮಾಡುತ್ತಿರಲಿಲ್ಲ. ನಾವು ಫಲಾನುಭವಿಗಳ ಇಚ್ಚೆಗನುಸಾರ ಮನೆ ಕಟ್ಟಿಸಿಕೊಡುತ್ತಿದ್ದೇವೆ. ನೀರು, ವಿದ್ಯುತ್, ಅಡುಗೆ ಅನಿಲ ಎಲ್ಲವೂ ಸಿಗುತ್ತಿದೆ. ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಮೊದಲಿಗಿಂತ ಈಗ ಹೆಚ್ಚು ಸುಧಾರಣೆ ಆಗಿದೆ. ಕಾಂಗ್ರೆಸ್ ಖುದ್ದು ಭ್ರಷ್ಟಾಚಾರಿ ಪಕ್ಷ. 2014ರ ಬಳಿಕ ಭ್ರಷ್ಟಾಚಾರ ನಿಯಂತ್ರಣದಲ್ಲಿ ವೇಗ ವೃದ್ಧಿಸಿದೆ ಎಂದು ಹೇಳಿದರು.
ವಿಜಯನಗರ ಕಾರ್ಯಕರ್ತ ಚಂದ್ರಶೇಖರ್ ಪ್ರಶ್ನೆಗೆ ಉತ್ತರಿಸಿದ ಮೋದಿ, ಇತಿಹಾಸ, ಸಂಸ್ಕೃತಿ, ಆಧ್ಯಾತ್ಮಿಕತೆ, ಆಚಾರ ವಿಚಾರಗಳಲ್ಲಿ ಕರ್ನಾಟಕ ಸಮೃದ್ಧವಾಗಿದೆ. ಕರ್ನಾಟಕದ ಜನ ಭಕ್ತಿಯ ಶಕ್ತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕೃತಿ ಓದುವ ಪಾಲಿಸುವ ಸಂಸ್ಕೃತಿ ಇಲ್ಲಿದೆ. ಕರ್ನಾಟಕದ ಜನ ತಂತ್ರಜ್ಞಾನದ ಕೋಡಿಂಗ್ ಸಹ ಮಾಡುತ್ತಾರೆ, ಕುವೆಂಪು ಸಾಹಿತ್ಯವನ್ನೂ ಓದುತ್ತಾರೆ ಎಂದರು.
ದಕ್ಷಿಣ ಕನ್ನಡದ ಅರುಣ್ ಸೇಠ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ದೇಶದ ಭವಿಷ್ಯ, ಮುಂದಿನ ಪೀಳಿಗೆಗೆ ಮಾರಕ. ರಾಜನೀತಿಯನ್ನು ಕೆಲವರು ಭ್ರಷ್ಟಾಚಾರದ ಮಾರ್ಗ ಮಾಡಿಕೊಂಡಿದ್ದಾರೆ. ಉಚಿತ ಯೋಜನೆಗಳ ರಾಜಕಾರಣ ಭ್ರಷ್ಟಾಚಾರಕ್ಕೆ ದಾರಿಯಾಗಿದೆ. ಉಚಿತ ಯೋಜನೆಗಳ ಮೂಲಕ ದೇಶ, ಯುವ ಸಮೂಹದ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಅವರಿಗೆ ಉಚಿತ ಘೋಷಣೆಗಳಿಂದ ಸರ್ಕಾರ ನಡೆಯಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw