ಬಿಜೆಪಿಗೆ ಹೆಚ್ಚೆಂದರೆ 200 ರಿಂದ 220 ಸೀಟು ಅಷ್ಟೇ: ಖ್ಯಾತ ಆರ್ಥಿಕ ತಜ್ಞ ಪರಕಲ ಸೀತಾರಾಮನ್ ಹೇಳಿಕೆ

16/05/2024
ಬಿಜೆಪಿಗೆ ಹೆಚ್ಚೆಂದರೆ 200 ರಿಂದ 220 ಸೀಟುಗಳಷ್ಟೇ ಲಭಿಸಬಹುದು ಎಂದು ಖ್ಯಾತ ಅರ್ಥ ತಜ್ಞ ಮತ್ತು ಕೇಂದ್ರ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ ಅವರ ಪತಿ ಪರಕಲ ಸೀತಾರಾಮನ್ ಹೇಳಿದ್ದಾರೆ. ದಿ ವಯರ್ ನ ಕರಣ್ ತಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೂನ್ ಐದರಂದು ಬಿಜೆಪಿಯೇತರ ಪಕ್ಷಗಳು ಕೇಂದ್ರದಲ್ಲಿ ಸರಕಾರ ರಚಿಸಲಿದೆ. ಉತ್ತರ ಭಾರತದಲ್ಲಿ ಬಿಜೆಪಿಗೆ ಕನಿಷ್ಠ 80 ರಿಂದ 95 ಸ್ಥಾನಗಳು ಈ ಬಾರಿಯ ಚುನಾವಣೆಯಲ್ಲಿ ನಷ್ಟವಾಗಲಿದೆ ಎಂದವರು ಭವಿಷ್ಯ ನುಡಿದಿದ್ದಾರೆ. ಅಲ್ಲದೆ, ಬಿಜೆಪಿಯು ಅತ್ಯಂತ ಆಘಾತಕಾರಿ ರಾಜಕೀಯ ಪ್ರತ್ಯಾಘಾತಳನ್ನು ಎದುರಿಸಲಿದೆ ಎಂದು ಕೂಡ ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth