11:43 AM Tuesday 21 - October 2025

ಕಾವೇರಿ ಸಂಕಷ್ಟ: ಕೇಂದ್ರ ಮಧ್ಯ ಪ್ರವೇಶಕ್ಕೆ ಆಗ್ರಹಿಸಿ ಬಿಎಸ್ ಎನ್ ಎಲ್ ಕಚೇರಿಗೆ ಮುತ್ತಿಗೆ

kaveri
22/09/2023

ಚಾಮರಾಜನಗರ: ಕಾವೇರಿ ಸಂಕಷ್ಟಕ್ಕೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ವಿವಾದ ಬಗೆಹರಿಸಬೇಕೆಂದು ಆಗ್ರಹಿಸಿ ಚಾಮರಾಜನಗರದಲ್ಲಿ ಕನ್ನಡಪರ ಸಂಘಟನೆಗಳು ಬಿಎಸ್ ಎನ್ ಎಲ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಚಾಮರಾಜನಗರದ ಮಾರಿಗುಡಿ ಸಮೀಪ ಇರುವ ಬಿಎಸ್ ಎನ್ ಎಲ್ ಕಚೇರಿಗೆ ಚಾ.ರಂ.ಶ್ರೀನಿವಾಸಗೌಡ ನೇತೃತ್ವದಲ್ಲಿ ಪ್ರತಿಭಟನಾಕರರು ಮುತ್ತಿಗೆ ಹಾಕಿ ತಮಿಳುನಾಡು, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ತಮಗೇ ಕುಡಿಯಲು ನೀರಿಲ್ಲ ಆದರೆ ತಮಿಳುನಾಡು 3 ನೇ ಬೆಳೆಗೆ ನೀರು ಕೇಳುತ್ತಿದೆ. ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರನ್ನು ಹರಿಸಬಾರದು, ತಮಿಳುನಾಡು ಇದೇ ರೀತಿ ಕ್ಯಾತೆ ತೆಗೆಯುತ್ತಿದ್ದರೇ ತಮಿಳು ಚಿತ್ರ, ತಮಿಳು ವಾಹನಗಳಿಗೆ ನಿರ್ಬಂಧ ಹೇರುತ್ತೇವೆ ಎಂದು ಕಿಡಿಕಾರಿದರು.

ಇತ್ತೀಚಿನ ಸುದ್ದಿ

Exit mobile version