8:10 AM Thursday 15 - January 2026

ಬುದ್ಧರ ದೃಷ್ಟಿಯಲ್ಲಿ ದೇವರು

budha
04/09/2021

ಬುದ್ಧರು ದೇವರನ್ನು ಒಪ್ಪಿದ್ದರೆ? ಉತ್ತರ: “ಇಲ್ಲ”. ಕಾರಣ? ಯಾರೂ ದೇವರನ್ನು ನೋಡಿಲ್ಲ, ಯಾರಿಗೂ ದೇವರು ಯಾರೆಂಬುದು ಗೊತ್ತಿಲ್ಲ, ಆದ್ದರಿಂದ ಬುದ್ಧರು ದೇವರನ್ನು ಒಪ್ಪಲಿಲ್ಲ. ಹಾಗಿದ್ದರೆ ಈ ಪ್ರಪಂಚ ಸೃಷ್ಟಿಸಿರುವುದು ದೇವರೇ ಅಲ್ಲವೆ? ಬುದ್ಧರ ಪ್ರಕಾರ ಇಲ್ಲ‌. ಯಾಕೆಂದರೆ ಈ ಪ್ರಪಂಚವನ್ನು ದೇವರು ಸೃಷ್ಟಿಸಿದ್ದಾನೆ ಎಂದು ಸಾಧಿಸಲು ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಬುದ್ಧರ ಪ್ರಕಾರ ಈ ಜಗತ್ತು ಸೃಷ್ಟಿಸಲ್ಪಟ್ಟಿಲ್ಲ, ಬದಲಿಗೆ ವಿಕಾಸ ಹೊಂದಿದೆ.

ಹಾಗಿದ್ದರೆ ದೇವರು ಇದ್ದಾನೆ ಎಂದು ನಂಬುವುದರಿಂದ ಇರುವ ಅನುಕೂಲ? ಖಂಡಿತ, ಯಾವುದೇ ಅನುಕೂಲವಿಲ್ಲ, ಹಾಗೆ ಅದು ಲಾಭದಾಯಕ ಕೂಡ ಅಲ್ಲ. ಇದಕ್ಕೆ ಬುದ್ಧರು ಹೇಳಿದ್ದೆಂದರೆ “ದೇವರ ಮೇಲೆ ಆಧಾರಿತ ಧರ್ಮವು ಅದು ಸಂಪೂರ್ಣ ಊಹೆಯ ಮೇಲೆ ನಿಂತಿದೆ. ಆ ಕಾರಣ ದೇವರ ಆಧಾರದ ಮೇಲೆ ಇರುವ ಧರ್ಮವನ್ನು ಮನುಷ್ಯ ಹೊಂದುವುದು ಯೋಗ್ಯವಾದುದಲ್ಲ, ಅದರ ಅಂತಿಮ ಫಲಿತಾಂಶವೆಂದರೆ ಮೂಢನಂಬಿಕೆ ಆಗಿರುತ್ತದೆ”.

-ರಘೋತ್ತಮ ಹೊಬ

 (ಆಧಾರ: ಡಾ.ಅಂಬೇಡ್ಕರ್ ರವರ ಬುದ್ಧ ಅಂಡ್ ಹಿಸ್  ಧಮ್ಮ ಕೃತಿ)

 

ಇದನ್ನೂ ಓದಿ:

ಡಾ.ಅಂಬೇಡ್ಕರರ ಬುದ್ಧ ಪಯಣ | ರಘೋತ್ತಮ ಹೊ.ಬ

ಅಂಬೇಡ್ಕರ್ ಎಂಬ ಅನುಕರಣೀಯ ಮಾದರಿ | ಜೆಸ್ಸಿ ಪಿ.ವಿ. ಪುತ್ತೂರು

ಬಾಲ ಭೀಮನಿಗೆ ಅಂಬೇಡ್ಕರ್ ಗುರುಗಳು ನೀಡಿದ ಆ ಉಡುಗೊರೆ

ಇತ್ತೀಚಿನ ಸುದ್ದಿ

Exit mobile version