3:59 AM Thursday 16 - October 2025

ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಅರೆಬಿಕ್ ಶಾಲೆಯ ಶಿಕ್ಷಕ ಅರೆಸ್ಟ್

24/02/2021

ಉಪ್ಪಿನಂಗಡಿ: ಸುಳ್ಯದ ಅರೆಬಿಕ್ ಶಾಲೆಯ ಶಿಕ್ಷಕನೋರ್ವ ಬಸ್ ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ಹೋಗುತ್ತಿದ್ದ ಬಸ್ ನಲ್ಲಿ  ಶಿಕ್ಷಕ ದುರ್ವರ್ತನೆ ತೋರಿದ್ದಾನೆ.

ಸುಳ್ಯದ ಅರೆಬಿಕ್ ಶಾಲೆಯ ಶಿಕ್ಷಕ 32 ವರ್ಷ ವಯಸ್ಸಿನ ಮೊಹಮ್ಮದ್ ಸೈಫುಲ್ಲ ವಿರುದ್ಧ ದೂರು ದಾಖಲಾಗಿದ್ದು,  ಆರೋಪಿಯು ಚಿಕ್ಕಮಗಳೂರು ಮೂಲದವನಾಗಿದ್ದಾನೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ  ವಿದ್ಯಾರ್ಥಿನಿಯನ್ನು ಆತ ಪದೇ ಪದೇ ಮುಟ್ಟಿ ಕಿರುಕುಳ ನೀಡುತ್ತಿದ್ದ. ಈತ ಕೃತ್ಯಕ್ಕೆ ವಿದ್ಯಾರ್ಥಿನಿ ವಿರೋಧ ವ್ಯಕ್ತಪಡಿಸಿದ್ದು, ಕಂಡೆಕ್ಟರ್ ಗೆ ದೂರು ನೀಡಿದ್ದಾಳೆ.

ಈ ವೇಳೆ ಬಸ್ ನ ಚಾಲಕ ಬಸ್ ನ್ನು ನೇರವಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎದುರು ನಿಲ್ಲಿಸಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿದ್ಯಾರ್ಥಿನಿಯ ದೂರಿನನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version