1:08 PM Wednesday 22 - October 2025

ನಿಮಗೆ ಬೇಕಿರುವ ಕಾಂಡೋಮ್‌ ಗಳನ್ನು ನೀವೇ ಖರೀದಿಸಿ: ಮಹಿಳೆಯರಿಗೆ ನಟಿ ರಾಧಿಕಾ ಆಪ್ಟೆ ಹೀಗೆ ಹೇಳಿದ್ದೇಕೆ?

radhika apte
26/05/2024

ಕಾಂಡೋಮ್‌ ಬ್ರಾಂಡ್‌ಗೆ ರಾಯಭಾರಿಯಾಗಿರುವ ರಾಧಿಕಾ ಆಪ್ಟೆ, ಮಹಿಳೆಯರ ಸುರಕ್ಷತೆಯ ಬಗ್ಗೆ ಮಾತನಾಡಿದ್ದು, ಮಹಿಳೆಯರ ಮನಸ್ಥಿತಿ ಬದಲಿಸಲು ಹಾಗೂ ವಾಸ್ತವ ಸ್ಥಿತಿಯನ್ನು ವಿವರಿಸಲು ಮುಂದಾಗಿದ್ದಾರೆ.

ಜಾಹೀರಾತು ವಿಡಿಯೋದಲ್ಲಿ ಮಾತನಾಡಿರುವ ರಾಧಿಕಾ, ಕಾಂಡೋಮ್ ಖರೀದಿಯನ್ನು ಪುರುಷ ಮಾಡುವ ಬದಲು ಮಹಿಳೆಯರು ಮಾಡಬೇಕು. ಯಾಕೆಂದರೆ  ನಂತರ ಅದರಲ್ಲಿ ಏನಾದರೂ ದೋಷಗಳಿದ್ದರೆ, ಅದರ ಪರಿಣಾಮವನ್ನು ಮಹಿಳೆಯರೇ ಎದುರಿಸಬೇಕಲ್ಲವೇ ಎಂದು  ಮಹಿಳೆಯರನ್ನು ಎಚ್ಚರಿಸಿದ್ದಾರೆ.

ಕಾಂಡೋಮ್‌ ಖರೀದಿಯ ಆಯ್ಕೆ ಪುರುಷರಿಗೇಕೆ? ಈ ವಿಚಾರದಲ್ಲಿ ಮಹಿಳೆ ಯಾವತ್ತೂ ಹಿಂಜರಿಯಬಾರದು. ಒಂದು ವೇಳೆ ರಾಜಿಯಾದರೆ, ಅದರ ನೇರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ  ಎಂದು ಅವರು ಸಾಮಾಜಿಕ ಜಾಲತಾಣದಲ್ಲ ಹಂಚಿಕೊಂಡಿರುವ  ವಿಡಿಯೋ ಮೂಲಕ ವಿವರಿಸಿದ್ದಾರೆ.

ಕಾಂಡೋಮ್ ನ ಜಾಹೀರಾತಿಗಾಗಿ  ರಾಧಿಕಾ ದೊಡ್ಡ ಮಟ್ಟದ ಸಂಭಾವನೆಯನ್ನೂ ಪಡೆದುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ ಜಾಹೀರಾತಿನ ಜೊತೆಗೆ ಕಾಂಡೋಮ್ ಸಂಬಂಧಿತ ಕೀಳರಿಮೆಗಳು ಮತ್ತು ವಾಸ್ತವ ಸ್ಥಿತಿಗಳ ಜಾಗೃತಿಗೂ ಅವರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

“ಕಾಂಡೋಮ್‌.. ಈ ಪದ ಕೇಳುತ್ತಿದ್ದಂತೆ, ಬಹುತೇಕರು ಕೊಂಚ ಮುಜುಗರಕ್ಕೊಳಗಾಗುತ್ತಾರೆ. ಅನ್‌ ಕಂಫರ್ಟ್‌ ಆಗುತ್ತಾರೆ. ಯಾಕೆ? ಅಷ್ಟಕ್ಕೂ ಕಾಂಡೋಮ್‌ ಖರೀದಿಯ ನಿರ್ಧಾರವನ್ನು ಜತೆಗಿರುವ ಸಂಗಾತಿಗೆ ವಹಿಸುತ್ತಾರೆ. ಏಕೆ? ಈ ವಿಷಯದಲ್ಲಿ ನಮ್ಮ ಅಭಿಪ್ರಾಯವೂ ಮುಖ್ಯವಾಗಿರುತ್ತೆ ಎಂದು ಯಾರಿಗೂ ಯಾಕೆ ಅನ್ನಿಸಿಲ್ಲವೇಕೆ? ಈ ಕಾಂಡೋಮ್‌ ಖರೀದಿ ಏಕೆ ನಮ್ಮ ಆಯ್ಕೆ ಆಗಬಾರದು? ಮಹಿಳೆಯರು ಗರ್ಭನಿರೋಧಕ ಖರೀದಿ ಮಾಡಿದ್ದೇ ಆದರೆ ಏನಾಗುತ್ತೆ? ಅಷ್ಟಕ್ಕೂ ಆ ಕಾಂಡೋಮ್‌ ನ ಅನುಭವ ಪಡೆಯುವವರು ನಾವೇ ಅಲ್ಲವೇ? ಹಾಗಾಗಿ ಅದರ ಖರೀದಿ ಆಯ್ಕೆಯೂ ನಮ್ಮದೇ ಆಗಬೇಕು” ಎಂದು ಅವರು ಹೇಳಿದ್ದಾರೆ.

“ಗರ್ಲ್ಸ್‌, ಕಾಂಡೋಮ್‌ ಖರೀದಿ ನಮ್ಮ ಚಾಯ್ಸ್‌ ಆಗಿರಲಿ. ಈ ವಿಷ್ಯದಲ್ಲಿ ಯಾವತ್ತೂ ಕಾಂಪ್ರಮೈಸ್‌ ಆಗಬೇಡಿ. ಸಂತೋಷ, ರಕ್ಷಣೆ, ಮತ್ತು ಕಂಫರ್ಟ್‌ಗಾಗಿ ಈ ಆಯ್ಕೆಯನ್ನು ಬೇರೆ ಯಾರಿಗೂ ನೀಡಬೇಡಿ. ನಿಮಗೆ ಬೇಕಿರುವ ಕಾಂಡೋಮ್‌ ಗಳನ್ನು ನೀವೇ ಖರೀದಿಸಿ. ಒಂದು ವೇಳೆ ರಾಜಿಯಾದರೆ, ಕೊನೆಗೆ ಅದರ ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ” ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version