8:19 PM Wednesday 17 - December 2025

ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದರು: ಆ  ರಾತ್ರಿ ಏನಾಯ್ತು ಎಂದು ವಿವರಿಸಿದ ಸಿ.ಟಿ.ರವಿ

c t ravi
21/12/2024

ಬೆಂಗಳೂರು: ಯಾರದ್ದೋ ಸೂಚನೆಯ ಮೇರೆಗೆ ನನ್ನ ಹತ್ಯೆ ಮಾಡಲು ಗದ್ದೆ, ಕಲ್ಲಿನ ಕ್ವಾರಿ, ಗಲ್ಲಿ ರಸ್ತೆಗಳಲ್ಲಿ ಪೊಲೀಸರು ಸುತ್ತಾಡಿಸಿದ್ದರು ಎಂದು ಸಿ.ಟಿ.ರವಿ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಯಾಕೆ ಬಂಧಿಸಿದ್ದೀರಿ ಎಂದು ಕೇಳಿದಾಗ ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ, ನನ್ನನ್ನು ಪೊಲೀಸ್ ಜೀಪ್ ನಲ್ಲಿ ಸುತ್ತಾಡಿಸಿದರು. ಹಳ್ಳಿ ರಸ್ತೆ, ಕಾಡಿನ ರಸ್ತೆ,  ಗದ್ದೆಗೆಲ್ಲ ಕರೆದುಕೊಂಡು ಹೋದರು.  ಸ್ಟೋನ್ ಕ್ರಷರ್ ಬಳಿ ಕರೆದೊಯ್ಯುವೇ ವೇಳೆ ಮಾಧ್ಯಮದವರು ಅಲ್ಲಿಗೆ ಬಂದಾಗ ನಾನು ಚೀರಾಡಿದೆ. ನನ್ನ ಹತ್ಯೆ ಮಾಡಲು ಕರೆದುಕೊಂಡು ಬಂದಿದ್ದೀರಾ ಎಂದು ಕೇಳಿದೆ ಎಂದು ಸಿ.ಟಿ.ರವಿ ಹೇಳಿದರು.

ನಾನು ಗಾಡಿಯಿಂದ ಇಳಿಯಲು ಪ್ರಯತ್ನಪಟ್ಟೆ, ಅವರು ಬಲವಾಗಿ ಹಿಡಿದರು, ನನ್ನ ಪತ್ನಿಗೆ ಲೈವ್ ಲೊಕೇಶನ್ ಕಳಿಸಿದೆ. ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದರು. ಆ ಜಾಗಕ್ಕೆ ಮಾಧ್ಯಮದವರು ಬಂದಾಗ ಅವರನ್ನು ನೋಡಿ, ಈ ನನ್ನ ಮಕ್ಳು ಇಲ್ಲಿಗೆ ಹೇಗೆ ಬಂದ್ರು ಎಂದು ಮಾತನಾಡಿಕೊಂಡರು. ನನ್ನನ್ನು ಏನೋ ಮಾಡಲು ಕರೆದುಕೊಂಡು ಹೋಗಿದ್ದರು ಅಂದುಕೊಂಡೆ ಎಂದು ಅವರು ಹೇಳಿದರು.

ನನ್ನ ಮೇಲೆ ಯಾರಿಂದಲೋ ಹಲ್ಲೆ ನಡೆಸಲು ಅಥವಾ ಕೊಲೆ ಮಾಡುವ ಸಂಚು ಅವರಿಗಿತ್ತು. ಕೋರ್ಟ್ ಗೆ ಹೋದಾಗ ಎಲ್ಲ ವಿವರ ಜಡ್ಜ್ ಮುಂದೆ ಹೇಳಿದೆ ಎಂದು ಸಿ.ಟಿ.ರವಿ ವಿವರಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version