ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆರೋಗ್ಯದಲ್ಲಿ ಏರುಪೇರಾಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಭಾಗಿಯಾಗದೇ ಗೈರಾಗಿದ್ದಾರೆ. ಇತ್ತೀಚೆಗೆ ಆರೋಗ್ಯ ಸಚಿವ ಡಾ. ಸುಧಾಕರ್ ವಿವಿಧ ಜಿಲ್ಲೆಗಳ ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿ, ಸೋಂಕಿತರಿಗೆ ನೀಡಲಾಗುತ್ತ...
ಮುದ್ದೇಬಿಹಾಳ: ಚಂದ್ರಗ್ರಹಣದ ಬಗ್ಗೆ ಟಿವಿ ಚಾನೆಲ್ ಗಳೇ ಮೌಢ್ಯಾಚರಣೆಯಲ್ಲಿ ಪ್ರೋತ್ಸಾಹಿಸುತ್ತವೆ. ಅಂತಹದ್ದಲ್ಲಿ ಇಲ್ಲೊಂದು ಯುವಕರ ತಂಡ ಚಂದ್ರಗ್ರಹಣದಂದು ಸ್ಮಶಾನದಲ್ಲಿ ಊಟ ಮಾಡುವ ಮೂಲಕ ಮೌಢ್ಯ ಹಾಗೂ ಮೌಢ್ಯಕ್ಕೆ ಪ್ರೇರಣೆ ನೀಡುವವರಿಗೆ ತಿರುಗೇಟು ನೀಡಿದ್ದಾರೆ. ಮುದ್ದೇಬಿಹಾಳ ತಾಲೂಕಿನ ನಾಲತವಾಡದ ಯುವಕರು ಈ ಕಾರ್ಯ ಮಾಡಿದ್ದು, ಪಟ್ಟಣ...
ಚಿಕ್ಕಮಗಳೂರು: ಹಿರಿಯ ಆರೋಗ್ಯ ನಿರೀಕ್ಷಕ ಡಾ.ರಮೇಶ್ ಕುಮಾರ್ ಎಂಬವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ, ಸ್ಥಳದಲ್ಲಿಯೇ ಇದ್ದ ತರೀಕೆರೆ ಬಿಜೆಪಿ ಶಾಸಕ ಡಿ.ಎಸ್.ಸುರೇಶ್ ಅವರನ್ನು ಆಸ್ಪತ್ರೆಗೆ ಸಾಗಿಸಲೂ ಮುಂದಾಗದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತರೀಕೆರೆ ಸಮೀಪದ ಲಕ್ಕವಳ್ಳಿ ಕ...
ಸುಳ್ಯ: ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಹಲವು ವಿದ್ಯಾರ್ಥಿಗಳು ಕಾಲೇಜು ಫೀಸು ಪಾವತಿ ಮಾಡಲು ಸಮಯಾವಕಾಶ ನೀಡಲು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ವತಿಯಿಂದ ತಹಶೀಲ್ದಾರ್ ರಿಗೆ ಮನವಿ ಸಲ್ಲಿಸಲಾಯಿತು. ಲಾಕ್ ಡೌನ್ನಲ್ಲಿ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ ಪ್ರಾರಂಭಿಸಲಾಗಿದ್ದು, ಆದರೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಹಲವಾರ...
ಕೊಡಗು: ಆಂಬುಲೆನ್ಸ್ ಚಾಲಕನೋರ್ವ ವೃದ್ಧೆಯೊಬ್ಬರನ್ನು ನಡು ರಸ್ತೆಯಲ್ಲಿ ಆಂಬುಲೆನ್ಸ್ ನಿಂದ ಇಳಿಸಿ ಹೋದ ಅಮಾನವೀಯ ಘಟನೆ ಕೊಡಗಿನಲ್ಲಿ ನಡೆದಿದ್ದು, ಕೊರೊನಾದಿಂದ ಗುಣಮುಖರಾದ 60ರ ವೃದ್ಧೆಯನ್ನು ಅವರ ಮನೆಯಿಂದ 2 ಕಿ.ಮೀ. ದೂರದಲ್ಲಿ ಇಳಿಸಿ ಆಂಬುಲೆನ್ಸ್ ಚಾಲಕ ವಾಪಸ್ ಹೋಗಿದ್ದಾನೆ. ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಡಿಕೇರಿಯ ಕೊವಿಡ್...
ರಾಯಚೂರು: ಅಪಘಾತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಯುವಕನೋರ್ವ ರಸ್ತೆಯಲ್ಲಿ ನರಳಾಡುತ್ತಿದ್ದರೆ, ಜನರು ವಿಡಿಯೋ ಮಾಡುತ್ತಾ, ಆತ ಯಾವಾಗ ಸಾಯುತ್ತಾನೆ ಎಂದು ನೋಡುತ್ತಾ ನಿಂತಿರುವ ಅಮಾನವೀಯ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಡೆದಿದೆ. ಅಪಘಾತ ನಡೆದು ಒಂದು ಗಂಟೆಗಳ ವರೆಗೆ ಗಾಯಾಳು ರಸ್ತೆಯಲ್ಲಿ ಬಿದ್ದ...
ಚಾಮರಾಜನಗರ: ಪ್ರೀತಿಸಿ ಮದುವೆಯಾಗಿದ್ದ ಪತಿ-ಪತ್ನಿ ಸಾವಿನಲ್ಲೂ ಒಂದಾಗಿದ್ದು, ಒಂದೇ ದಿನ ಪತಿ-ಪತ್ನಿ ಕೊರೊನಾಕ್ಕೆ ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ. 51 ವರ್ಷ ವಯಸ್ಸಿನ ಸುದರ್ಶನ ಹಾಗೂ 46 ವರ್ಷ ವಯಸ್ಸಿನ ಹೇಮಲತಾ ದಂಪತಿಗೆ ಕಳೆದ ವಾರ ಕೊವಿಡ್ ದೃಢಪಟ್ಟಿತ್ತು. ಅವರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್...
ಮೈಸೂರು: ತಂದೆಯ 6 ಲಕ್ಷ ಹಣ, ಮೊಬೈಲ್ ಇತರ ವಸ್ತುಗಳನ್ನು ಕೊಡಿ, ಮೃತದೇಹ ನನಗೆ ಬೇಡ ಎಂದು ಪಾಪಿ ಮಗನೋರ್ವ ಹೇಳಿದ ಘಟನೆ ಇಲ್ಲಿನ ಹೆಬ್ಬಾಳ ಸಮೀಪದ ಸೂರ್ಯ ಬೇಕರಿ ಬಳಿಯಲ್ಲಿ ನಡೆದಿದೆ. ಸೂರ್ಯ ಬೇಕರಿ ಸಮೀಪದ ಮನೆಯ ವ್ಯಕ್ತಿಯೊಬ್ಬರು ಕೊವಿಡ್ ಗೆ ಬಲಿಯಾಗಿದ್ದರು. ಹೀಗಾಗಿ ಸ್ಥಳೀಯ ನಗರ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಅವರು ಮೃತರ ಪುತ್ರನ...
ಕೊಡಗು: ಕೊವಿಡ್ ನಿಂದಾಗಿ ತಾಯಿಯನ್ನು ಕಳೆದುಕೊಂಡಿರುವ ಬಾಲಕಿಯೊಬ್ಬಳು ಬರೆದಿರುವ ಪತ್ರವನ್ನು ಓದಿದರೆ ಎಂತಹವರ ಕರುಳು ಕೂಡ ಚುರ್ ಎನ್ನದಿರದು. ತನ್ನ ತಾಯಿಯನ್ನು ಕಳೆದುಕೊಳ್ಳುವುದರ ಜೊತೆಗೆ ತಾಯಿಯ ನೆನಪುಗಳನ್ನೂ ಕಳೆದುಕೊಳ್ಳುವಂತಹ ಸ್ಥಿತಿಗೆ ತಲುಪಿರುವ ಬಾಲಕಿಯ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೊಡಗು ಜಿಲ್ಲೆಯ ಕ...
ಕೊಪ್ಪಳ: ಕೊರೊನಾ ವೈರಸ್ ಗೆ 19 ವರ್ಷ ವಯಸ್ಸಿನ ಯುವಕ ಬಲಿಯಾಗಿದ್ದು, ಜಿಲ್ಲೆಯಲ್ಲಿ 20 ವರ್ಷ ವಯಸ್ಸಿನ ಯುವಕರ ಸಾವಿನ ಮೊದಲನೇಯ ಪ್ರಕರಣ ಇದಾಗಿದ್ದು, ಇದರಿಂದ ಜನರು ಆತಂಕಗೊಂಡಿದ್ದಾರೆ. ಪ್ರಸಿದ್ಧ ಸೂಳೆಕಲ್ ಬೃಹನ್ಮಠದ ಗವಿಸಿದ್ದೇಶ್ವರ ಸ್ವಾಮೀಜಿಯವರ ಎರಡನೇ ಪುತ್ರ 19 ವರ್ಷ ವಯಸ್ಸಿನ ಪ್ರಸಾದ್ ಮೃತಪಟ್ಟವರಾಗಿದ್ದಾರೆ. ಪ್ರಸಾದ್ ಅವ...