ಶಿವಮೊಗ್ಗ: ಹಿರಿಯೂರುನಲ್ಲಿ ಆಯೋಜಿಸಿದ್ದ 10ನೇ ಅಂತರ ಮಹಾವಿದ್ಯಾಲಯಗಳ ಬಾಸ್ಕೆಟ್ ಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿ ಡಾ.ಆರ್.ಸಿ ಜಗದೀಶ್ ಉದ್ಘಾಟಿಸಿದರು. ರಾಜ್ಯದಲ್ಲಿರುವ ವಿವಿಧ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆಗಳ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ ...
ಸುಳ್ಯ: ನಗರದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸಲಾಗಿರುವ ಫುಟ್ಪಾತ್ ಅವ್ಯವಸ್ಥೆಯಿಂದ ಕೂಡಿದೆ. ಇನ್ನೊಂದೆಡೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳಿಲ್ಲದೇ ಫುಟ್ಪಾತ್ ಗಳಲ್ಲೇ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ ಎಂದು ಸತೀಶ್ ಬೂಡುಮಕ್ಕಿ ಸುಳ್ಯ ತಿಳಿಸಿದ್ದಾರೆ. ಫುಟ್ಪಾತ್ ಗಳು ಕೂಡ ವಾಹನ ನಿಲುಗಡೆಯ ನಿಲ್ದಾಣವಾಗಿ ಪರಿಣಮಿಸಿದೆ. ಫುಟ್ಪಾತ್...
ಮಂಗಳೂರು : ಆಯನ ನಾಟಕದ ಮನೆ ಮತ್ತು ರಂಗ ಅಧ್ಯಯನ ಕೇಂದ್ರ ಹಾಗೂ ಸಂತ ಆಲೋಶಿಯಸ್ (ಪರಿಗಣಿತ) ವಿಶ್ವವಿದ್ಯಾಲಯ ಮಂಗಳೂರು ಸಹಭಾಗಿತ್ವದಲ್ಲಿ ಎರಡು ನಾಟಕ ಪ್ರದರ್ಶನವು ದಿನಾಂಕ 04-03-2024 ಮತ್ತು 05-03-2024ರಂದು ಸಂಜೆ 7-00 ಗಂಟೆಗೆ ಸಂತ ಆಲೋಶಿಯಸ್ ಸಹೋದಯ ರಂಗಮಂದಿರದಲ್ಲಿ ನಡೆಯಲಿದೆ. ದಿನಾಂಕ 04-03-2024ರಂದು ಚಂದ್ರಶೇಖರ್ ಕೆ. ನಿರ್...
ಕಡಬ: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಬಂಧಿತ ಯುವಕ ಕೇರಳ ಮೂಲದ ಎಂಬಿಎ ವಿದ್ಯಾರ್ಥಿ ಅಬೀನ್ ಎಂದು ತಿಳಿದು ಬಂದಿದೆ. ಆ್ಯಸಿಡ್ ದಾಳಿಯ...
ಕೊಟ್ಟಿಗೆಹಾರ: ಬಾಳೂರು ಹೋಬಳಿಯ ಅರಮನೆ ತಲಗೂರಿನ ಬೆದೆಮಕ್ಕಿ ಗ್ರಾಮದಲ್ಲಿ ಗದ್ದೆಯಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹೆಜ್ಜೇನು ದಾಳಿ ಮಾಡಿ ಹಸು ಸಾವನ್ನಪ್ಪಿದ ಘಟನೆ ನಡೆದಿದೆ. ಅರಮನೆ ತಲಗೂರಿನ ಕೃಷ್ಣೇಗೌಡ ಅವರ ಹಸುವಿಗೆ ಹೆಜ್ಜೇನು ದಾಳಿ ನಡೆದಿದ್ದು ಕೆಲವೇ ದಿನಗಳಲ್ಲಿ ಅದು ಕರುವನ್ನು ಹಾಕುತ್ತಿತ್ತು ಎಂದು ಹಸುವಿನ ಮಾಲಿಕ ಕೃಷ್ಣೇಗ...
ಕೊಟ್ಟಿಗೆಹಾರ: ಮಲೆನಾಡು ದಕ್ಷಿಣ ಕನ್ನಡ ಸಂಪರ್ಕಿಸುವ ದಾರಿ ಉದ್ದಕ್ಕೂ ಕಸದ ರಾಶಿಗಳೇ ಕಂಡು ಬರುತ್ತಿವೆ. ರಾಜ್ಯದ ವಿವಿಧ ಮೂಲೆಗಳಿಂದ ಪಾದಯಾತ್ರೆ ಕೈಗೊಳ್ಳುವ ಧರ್ಮಸ್ಥಳ ಯಾತ್ರಿಕರಿಂದಾಗಿ ಇದೀಗ ಇಲ್ಲಿನ ಸಾರ್ವಜನಿಕರು ತೊಂದರೆಗೀಡಾಗುತ್ತಿದ್ದಾರೆ. ಧರ್ಮಸ್ಥಳ ಯಾತ್ರಿಗಳು ಸಾಗುವ ಮಾರ್ಗದುದ್ದಕ್ಕೂ ಕಸದ ರಾಶಿ ಬೀಳುತ್ತಿದ್ದು, ಪ್ಲ...
ಕಾರ್ಕಳ: ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಲಿಗಳ ಸಂಚಾರ ನಿರಂತರವಾಗಿದೆ ಎಂದು ಇಲ್ಲಿನ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದರೂ, ಅರಣ್ಯ ಇಲಾಖೆ ಅಧಿಕಾರಿಗಳು ತೀವ್ರ ನಿರ್ಲಕ್ಷ್ಯವಹಿಸಿದ್ದಾರೆ. ಈ ನಡುವೆ ಎರಡು ದನಗಳನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ರೆಂಜಾಳ ಗ್ರಾಮ ಪಂಚಾಯತ್ ವ್ಯಾಪ್ತಿ...
ಮಂಗಳೂರು: ಖಾಸಗಿ ಬಸ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಉದ್ಯಮಿಯೋರ್ವರು ನೇಣು ಬಿಗಿದು ಸಾವಿಗೆ ಶರಣಾಗಿರುವ ಘಟನೆ ನಡೆದಿದೆ. ನಗರದ ಬಜಾಲ್ ನಿವಾಸಿ ಪ್ರಜ್ವಲ್ ಡಿ.(35) ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ. ಇವರು ಭವಾನಿ ಬಸ್ ಮಾಲಿಕರಾಗಿದ್ದ ದೇವೇಂದ್ರ ಅವರ 2ನೇಯ ಪುತ್ರ ಆಗಿದ್ದಾರೆ. ಎಂ.ಜೆ.ರೋಡ್ ನಲ್ಲಿರುವ ಸ್ವಗೃಹದಲ್ಲ...
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕೆ.ಎಫ್.ಡಿ. ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಕೂಲಿ ಕಾರ್ಮಿಕರಾಗಿದ್ದ ಮಹಿಳೆಯೊಬ್ಬರು ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಕೊಟ್ರಮ್ಮ (43) ಕೆ.ಎಫ್.ಡಿ.ಗೆ ಬಲಿಯಾದವರಾಗಿದ್ದಾರೆ. ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾ.ಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್ ಮಹಿಳೆ ಇವರಾಗಿದ್ದು, ಜ್ವರ, ಸುಸ್ತು, ಉ...
ಚಿಕ್ಕಮಗಳೂರು: ಗೋ ಬ್ಯಾಕ್ ಶೋಭಕ್ಕ ಅಭಿಯಾನದ ಮಧ್ಯೆ ಸಚಿವೆ ಶೋಭಾ ಕರಂದ್ಲಾಜೆ ತಾವೂ ಕೈಯಲ್ಲಿ ಬ್ರಷ್ ಹಿಡಿದು ಗೋಡೆಗಳಲ್ಲಿ ಕಮಲದ ಚಿತ್ರ ಬರೆದಿದ್ದಾರೆ. ಗೋ ಬ್ಯಾಕ್ ಶೋಭಕ್ಕ, ಪತ್ರ ಚಳವಳಿ ಮಧ್ಯೆಯೂ ಶೋಭಾ ಕರಂದ್ಲಾಜೆ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ. ರಸ್ತೆ ಬದಿ ಗೋಡೆ ಮೇಲೆ ಕಮಲದ ಹೂ ಚಿತ್ರ ಬಿಡಿಸಿದರು. ಚಿಕ್ಕಮಗಳೂರು ನಗರ...