ಬಸ್ಸಿನಲ್ಲಿ ಯುವತಿಯೊಂದಿಗೆ ಮಾತನಾಡಿದ ಕಾರಣಕ್ಕೆ ಯುವಕನನ್ನು ತಂಡವೊಂದು ಬಸ್ಸಿನಿಂದ ಹೊರಗೆಳೆದು ಹಲ್ಲೆ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯಲ್ಲಿ ನಡೆದಿದೆ. ಹಲ್ಲೆಗೆ ಒಳಗಾದ ಯುವಕ ಕಕ್ಕಿಂಜೆ ನಿವಾಸಿ ಶಾಹಿಲ್ (22) ಎಂದು ಗುರುತಿಸಲಾಗಿದೆ. ಈತ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಬಸ್ಸಿನಲ್ಲಿ ಬರುತ್ತಿದ್ದ ವೇಳೆ ತನ್ನ...
ರೈಲು ಹಳಿಗೆ ಮರ ಬಿದ್ದದ್ದನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ಸಮಯ ಪ್ರಜ್ಞೆಯಿಂದ ಕೆಂಪುಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದ ಮಂಗಳೂರು ನಗರದ ಕುಡುಪು ಸಮೀಪದ ಆಯರಮನೆಯ ಚಂದ್ರಾವತಿ ಅವರನ್ನು ಮಂಗಳೂರು ರೈಲ್ವೆ ಪೊಲೀಸ್ ಅಧಿಕಾರಿಗಳು ಸೆಂಟ್ರಲ್ ನಿಲ್ದಾಣದ ರೈಲ್ವೆ ಪೊಲೀಸ್ ಠಾ...
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರ ಬಂಡೀಪುರ ಭೇಟಿಗೆ ದಿನಗಣನೆ ಆರಂಭವಾಗಿದ್ದು, ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸಕಲ ತಯಾರಿ ನಡೆಸುತ್ತಿದೆ. ಯಾವುದೇ ಅಹಿತಕರ ಹಾಗೂ ಭದ್ರತಾ ಲೋಪ ಉಂಟಾಗದ ರೀತಿ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಎಡಿಜಿಪಿ ಅಲೋಕ್ ಕುಮಾರ್ ಅವರಿಂದು ಬಂಡೀಪುರಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದ...
ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಸರ್ಕಾರಿ ಬಂಗಲೆ ಖಾಲಿ ಮಾಡುವಂತೆ ನೋಟಿಸ್ ನೀಡಿದ ಬೆನ್ನಲ್ಲೇ ಅವರಿಗೆ ಮನೆ ನೀಡಲು ಅನೇಕರು ಮುಂದಾಗಿದ್ದಾರೆ. ಹನುಮಾನ್ ಘರಿ ದೇವಸ್ಧಾನದ ದರ್ಶಕ ಮಹಂತ್ ಸಂಜಯ್ ದಾಸ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಅಯೋಧ್ಯ ದೇವಸ್ಥಾನದ ಆವರಣದಲ್ಲಿ ಸನ್ಯಾಸಿಗಳೊಂದಿಗೆ ವಾಸ್ತವ್ಯ ಹೂಡುವಂತೆ ಆಹ್ವಾನಿ...
ಉಡುಪಿ, ಎ.4: ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ನಗರದ ಮಾರುಥಿ ವಿಥಿಕಾ ರಸ್ತೆಯ ಜೋಸ್ ಅಲುಕಾಸ್ ಬಳಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಿರುವ ಉಚಿತ ಶುದ್ದ ಕುಡಿಯುವ ನೀರಿನ ವ್ಯವಸ್ಥೆಗೆ ಇಂದು ಚಾಲನೆ ನೀಡಲಾಯಿತು. ದಿನೇ ದಿನೇ ಹೆಚ್ಚುತ್ತಿರುವ ಬಿಸಿಲಿನ ತಾಪದಿಂದ ತತ್ತರಿಸುತ್ತಿ ರುವ ಹಿರಿಯ ನಾಗರಿಕರು, ಮಹಿ...
ಚಿಕ್ಕಮಗಳೂರು: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಆರಂಭಗೊಂಡಿರುವ ಆಕ್ರೋಶ ಇನ್ನೂ ನಿಂತಿಲ್ಲ. ಹೆಚ್.ಡಿ. ತಮ್ಮಯ್ಯಗೆ ಟಿಕೆಟ್ ನೀಡಿದರೆ ನಾವು ಬೆಂಬಲಿಸುವುದಿಲ್ಲ ಎಂದು ಚಿಕ್ಕಮಗಳೂರು ಮುಸ್ಲಿಂ ಅಸೋಸಿಯೇಷನ್ ಎಚ್ಚರಿಕೆ ನೀಡಿದೆ. ಹೆಚ್.ಡಿ. ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡದಂತೆ ಒತ್ತಾಯಿಸಿರುವ ಮುಸ್ಲಿಮ್ ಮುಖಂ...
ಚಾಮರಾಜನಗರ: ಪ್ರವಾಸಿಗರ ಬಸ್ಸೊಂದು ಬೈಕ್ ಗಳಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಇಳಿದ ಭೀಕರ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಅಸ್ಸಿಸಿ ಆಸ್ಪತ್ರೆ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಮಾಡ್ರಹಳ್ಳಿ ಗ್ರಾಮದ ರಾಜು(45) ಎಂಬಾತ ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಗುಂಡ್ಲುಪೇಟೆ ತಾಲೂಕಿನ ಕಿಲಗೆರೆ ಗ್ರಾಮದ ವ್ಯಕ್ತಿಯೋರ್ವ...
ಚಾಮರಾಜನಗರ: ಚುನಾವಣಾ ಹೊತ್ತಿನಲ್ಲಿ ಕಾಮಗಾರಿಗಳು ಗುಣಮಟ್ಟ ಯಾವ ರೀತಿ ಇರಲಿದೆ ಎಂಬುದಕ್ಕೇ ಈ ರಸ್ತೆ ಒಂದು ನಿದರ್ಶನವಾಗಿದೆ. ಡಾಂಬಾರು ಹಾಕಿದ ಎರಡೇ ದಿನಕ್ಕೆ ಕಿತ್ತುಬಂದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. ಗುಂಡ್ಲುಪೇಟೆ ತಾಲೂಕಿನ ಮಾಲಾಪುರ ಸಂಪರ್ಕ ರಸೆಯಲ್ಲಿ ತೀರಾ ಕಳಪೆ ಕಾಮಗಾರಿ ನಡೆದಿರುವ ಆರೋಪ ಕೇಳಿಬಂದಿದೆ.ಯರಿಯೂರ...
ಚಾಮರಾಜನಗರ: ಬರೋಬ್ಬರಿ 2 ದಶಕದ ಬಳಿಕ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಲೇ ಬೇಕೆಂದು ಪಣ ತೊಟ್ಟಿರುವ ಕಮಲಪಾಳೇಯ ಅಚ್ಚರಿ ಅಭ್ಯರ್ಥಿಯಾಗಿ ಸೋಮಣ್ಣ ಬರಬಹುದೆಂಬ ಮಾತುಗಳು ದಟ್ಟವಾಗಿದೆ. ಹೌದು..., ಟಿಕೆಟ್ ಸಂಬಂಧ ನಡೆದ ಕೋರ್ ಕಮಿಟಿ ಸಭೆಯಲ್ಲಿ ಸಚಿವ ಸೋಮಣ್ಣ ಅವರ ಹೆಸರು ಪ್ರಬಲವಾಗಿ ಕೇಳಿಬಂದಿದೆ. ಜೊತೆಗೆ...
ರಾಮನಗರ: ಕನಕಪುರದ ತಾಲೂಕಿನ ಸಾತನೂರಿನಲ್ಲಿ ಗೋಸಾಗಾಟ ಮಾಡುತ್ತಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆಯ ತನಿಖೆ ಚುರುಕುಗೊಂಡಿದ್ದು, ಸೋಮವಾರ ಸಂಜೆ ಐಜಿಪಿ ರವಿಕಾಂತೇಗೌಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ಸ್ಥಳೀಯರಿಂದಲೂ ಮಾಹಿತಿ ...