ರೈತ ಮುಖಂಡರು ಮತ್ತು ಕೇಂದ್ರ ಸಚಿವರ ನಡುವಿನ ನಿರ್ಣಾಯಕ ಸಭೆ ಸೋಮವಾರ ತಡರಾತ್ರಿ ನಿರ್ಣಯವಿಲ್ಲದೆ ಕೊನೆಗೊಂಡಿತು. ಹೀಗಾಗಿ ರೈತರು ಇಂದು ತಮ್ಮ 'ದೆಹಲಿ ಚಲೋ' ಪ್ರತಿಭಟನೆಯನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ. ಅನೇಕ ಗಂಟೆಗಳ ಮಾತುಕತೆಯ ಹೊರತಾಗಿಯೂ ಎರಡೂ ಕಡೆಯವರು ಪ್ರಮುಖ ಬೇಡಿಕೆಗಳ ಬಗ್ಗೆ ಒಪ್ಪಂದಕ್ಕೆ ಬರಲು ವಿಫಲರಾದರು. ಆದರೂ ಹೆ...
ಉದ್ಯೋಗಕ್ಕಾಗಿ ನಗದು ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ ಎಂಟು ತಿಂಗಳ ನಂತರ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರು ರಾಜೀನಾಮೆ ನೀಡಿದ್ದಾರೆ. ಬಂಧನ ಮತ್ತು ಅನಾರೋಗ್ಯದ ನಂತರ ಸಚಿವ ಸ್ಥಾನಗಳಿಂದ ವಂಚಿತರಾಗಿದ್ದ ಬಾಲಾಜಿ ಅವರು ತಮ್ಮ ರಾಜೀನಾಮೆ ಆದೇಶದ ಅಂಗೀಕಾರಕ್ಕಾಗಿ ಕಾ...
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಹೈದರಾಬಾದ್ನ್ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. "ಮಾನವ ದೋಷ" ದಿಂದಾಗಿ ಅಪಘಾತ ಸಂಭವಿಸಿರಬಹುದು ಎಂದು ಪ್ರವಾಸೋದ್ಯಮ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ಯಾರಾಗ್ಲೈಡಿಂಗ್ ಪೈಲಟ್ ನನ್ನು ಬಂಧಿಸಲಾಗಿದ್ದು, ಘಟನೆಯ ಬಗ...
ಸಂದೇಶ್ ಖಾಲಿಯಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಪರಿಶೀಲಿಸಲು ಪಶ್ಚಿಮ ಬಂಗಾಳ ಸರ್ಕಾರವು ಡಿಐಜಿ ಶ್ರೇಣಿಯ ಮಹಿಳಾ ಅಧಿಕಾರಿಯ ನೇತೃತ್ವದಲ್ಲಿ 10 ಸದಸ್ಯರ ತಂಡವನ್ನು ರಚಿಸಿದೆ. ಈ ತಂಡವು ಸಂದೇಶ್ ಖಾಲಿಗೆ ಭೇಟಿ ನೀಡಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂ...
ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ರಾಜಸ್ಥಾನದಿಂದ ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ, ಅವರು ರಾಯ್ ಬರೇಲಿಯನ್ನು ಪ್ರತಿನಿಧಿಸುವ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಅವರನ್ನು ಬಿಹಾರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮನಿ...
ಛತ್ತೀಸ್ಗಢದ ಕೊರ್ಬಾದಿಂದ ಇಂದು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭವಾಗಿದೆ. ಯಾತ್ರೆಯ ವೇಳೆ ರಾಹುಲ್ ಗಾಂಧಿಗೆ ಬಿಜೆಪಿ ಕಾರ್ಯಕರ್ತರು ಕೇಸರಿ ಬಾವುಟವನ್ನು ಪ್ರದರ್ಶಿಸಿದ್ದಾರೆ. ಈ ವೇಳೆ ತೆರೆದ ಜೀಪಿನಿಂದ ಇಳಿದು ಬಂದ ರಾಹುಲ್ ಗಾಂಧಿ ಅವರು ಬಿಜೆಪಿ ಕಾರ್ಯಕರ್ತರ ಹಸ್ತಲಾಘವ ಮಾಡಿದ್ದಾರೆ. ಯಾತ್ರೆಗೆ ಉತ್ತಮ...
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮಹಾರಾಷ್ಟ್ರದ ಅಶೋಕ್ ಚೌಹಾಣ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಫಡ್ನವಿಸ್ ಅವರು ಹೇಳಿಕೆ ನೀಡಿದ್ದಾರೆ. ಇನ್ನು ಚ...
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್.ಡಿ.ಎ ಸರಕಾರ ವಿಶ್ವಾಸಮತ ಗೆದ್ದುಕೊಂಡಿದೆ. ಅದರಲ್ಲೂ ವಿಶ್ವಾಸ ಮತಯಾಚನೆಗಿಂತ ಸ್ವಲ್ಪ ಮೊದಲು ಆರ್ ಜೆಡಿಯ ಮೂವರು ಶಾಸಕರು ನಿತೀಶ್ ಕುಮಾರ್ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಮಹಾಘಟಬಂಧನ್ ಗೆ ಭಾರಿ ಮುಖಭಂಗ ಎದುರಾಗಿದೆ. ಪೂರ್ಣ ಬಹುಮತಕ್ಕೆ 122 ಮತಗಳು ಬೇಕಾಗಿದ್ದು ನಿತೀಶ್ ಕುಮಾರ್ ಅವರು 12...
ಮಥುರಾ: ಕಾರು ಹಾಗೂ ಬಸ್ ನ ನಡುವೆ ನಡೆದ ಭೀಕರ ಅಪಘಾತದಲ್ಲಿ ಐವರು ಸಜೀವ ದಹನವಾಗಿರುವ ದಾರುಣ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ನಡೆದಿದೆ. ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಆಗ್ರಾ-ನೋಯ್ಡಾ ಕ್ಯಾರೇಜ್ ಮಾರ್ಗದ 117 ನೇ ಮೈಲಿಗಲ್ಲು ಬಳಿ ಈ ಭೀಕರ ಅಪಘಾತ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ...
ಖ್ಯಾತ ಸಾಹಿತಿ ಪದ್ಮಶ್ರೀ ಡಾ.ಉಷಾ ಕಿರಣ್ ಅವರು ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ. ಡಾ.ಉಷಾ ಕಿರಣ್ ಅವರು ಹಿಂದಿ ಮತ್ತು ಮೈಥಿಲಿಯಲ್ಲಿ ಪ್ರಸಿದ್ಧ ಬರಹಗಾರರಾಗಿದ್ದರು. ಅವರ ಮೈಥಿಲಿ ಕಾದಂಬರಿ 'ಭಾಮತಿ: ಏಕ್ ಅವಿಸ್ಮಾರನಿಯಾ ಪ್ರೇಮಕಥಾ' ಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರ...