ಕೊಟ್ಟಾಯಂ: ಕೊಟ್ಟಾಯಂನಲ್ಲಿ ಕ್ರೀಮ್ ಬನ್ ನಲ್ಲಿ ಕ್ರೀಂ ಇಲ್ಲ ಎಂದು ಆರೋಪಿಸಿ ದುಷ್ಕರ್ಮಿಗಳು ಬೇಕರಿ ಮಾಲಿಕ ಹಾಗೂ ಅವರ ಕುಟುಂಬಸ್ಥರಿಗೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ. ಅಂಗಡಿ ಮಾಲಿಕ ಶಿವಕುಮಾರ್, ಅವರ ಪತ್ನಿ ಕವಿತಾ, ಮಕ್ಕಳಾದ ಕಾಶಿನಾಥನ್ ಮತ್ತು ಸಿದ್ಧಿ ವಿನಾಯಕ್ ಹಲ್ಲೆಗೊಳಗಾದವರು ಎಂದು ತಿಳಿದು ಬಂದ...
ಜಮ್ಮು ಕಾಶ್ಮೀರದ ಬುದ್ಗಾಮ್ ಗ್ರಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಖ್ಯಾತ ಟಿಕ್ ಟಾಕ್-ಟಿವಿ ತಾರೆಯನ್ನು ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ. 35 ವರ್ಷದ ಅಮರೀನ್ ಭಟ್ ಕೊಲೆಯಾದ ಮಹಿಳೆ. ಆಕೆಯ ಸಂಬಂಧಿ 10 ವರ್ಷದ ಬಾಲಕಿಗೂ ಗಂಭೀರವಾಗಿ ಗಾಯವಾಗಿದ್ದು, ಬುಧವಾರ ರಾತ್ರಿ 7:55ರ ಸುಮಾರಿಗೆ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾ...
ನವದೆಹಲಿ: ಸಮಾಜದಲ್ಲಿರುವ ಎಲ್ಲಾ ವೃತ್ತಿಗಳಂತೆಯೇ ವೇಶ್ಯಾವಾಟಿಕೆ ವೃತ್ತಿಗೂ ಗೌರವ ನೀಡಬೇಕೆಂದು ಕಳೆದ ಅನೇಕ ವರ್ಷಗಳಿಂದ ಲೈಂಗಿಕ ಕಾರ್ಯಕರ್ತೆಯರು ಹೋರಾಟ ನಡೆಸುತ್ತಲೇ ಇದ್ದಾರೆ. ಈ ಸಂಬಂಧ ಇಂದು ಮಹತ್ವದ ತೀರ್ಪನ್ನು ನೀಡಿರುವ ಸುಪ್ರೀಂ ಕೋರ್ಟ್ ತಮ್ಮ ಸ್ವಂತ ಇಚ್ಛೆಯಿಂದ ಲೈಂಗಿಕ ಕಾರ್ಯಕರ್ತೆಯರಾಗಿರುವ ವಿರುದ್ಧ ಕ್ರಮ ಕೈಗೊಳ್ಳುವ ಅಥವಾ ವ...
ಮಹಾರಾಷ್ಟ್ರ: ಪ್ರಮುಖ ಫಾಸ್ಟ್ ಫುಡ್ ಸಂಸ್ಥೆಯಾಗಿರುವ ಮೆಕ್ ಡೊನಾಲ್ಡ್ಸ್ನ ಆಹಾರದಲ್ಲಿ ಸತ್ತ ಹಲ್ಲಿ ಪತ್ತೆಯಾಗಿರುವ ಘಟನೆ. ಮಹಾರಾಷ್ಟ್ರದ ಅಹಮದಾಬಾದ್ ನಲ್ಲಿ ನಡೆದಿದೆ. ಅಹಮದಾಬಾದ್ ನ ಸೈನ್ಸ್ ಸಿಟಿ ರಸ್ತೆಯಲ್ಲಿರುವ ಮೆಕ್ ಡೊನಾಲ್ಡ್ ನ ಔಟ್ ಲೆಟ್ ನಲ್ಲಿ ನೀಡಲಾದ ಪಾನೀಯದಲ್ಲಿ ಹಲ್ಲಿ ಪತ್ತೆಯಾಗಿದೆ. ಇದರ ಬೆನ್ನಲ್ಲೇ ಅಹಮದಾಬ...
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಐಹೊಳೆ ಸಮೀಪದ ಕ್ಯಾದಿಗೇರಿ ಕ್ರಾಸ್ ಬಳಿ ಶಾಲೆ ಮುಗಿಸಿ ಮನೆಗೆ ಹೊರಟಿದ್ದ ವಿದ್ಯಾರ್ಥಿಗಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ವಿದ್ಯಾರ್ಥಿನಿಯರಾದ ನೇತ್ರಾವತಿ ರಗಟಿ (14), ಅಂಜಲಿ ಸೂಡಿ ...
ಬೆಂಗಳೂರು: ಶಾಲಾ ಬಸ್ ವೊಂದು ಬಾಲಕಿಯ ಮೇಲೆ ಹರಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿಯಲ್ಲಿ ನಡೆದಿದೆ. ಹಾರೋಹಳ್ಳಿ ನಿವಾಸಿ 16 ವರ್ಷ ವಯಸ್ಸಿನ ಕೀರ್ತನಾ ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಸ್ನೇಹಿತರ ಜತೆ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ವೇಳೆ ಹಿಂ...
ಹೈದರಾಬಾದ್: ತೆಲಂಗಾಣದಲ್ಲಿರುವ ಎಲ್ಲ ಮಸೀದಿಗಳಲ್ಲಿಯೂ ಉತ್ಖನನ ನಡೆಸಬೇಕು. ಶಿವಲಿಂಗ ಪತ್ತೆಯಾದರೆ ಮಸೀದಿ ಹಿಂದೂಗಳಿಗೆ ಬಿಟ್ಟುಕೊಡಬೇಕು. ಮೃತದೇಹ ಪತ್ತೆಯಾದರೆ ಮುಸ್ಲಿಮರು ತೆಗೆದುಕೊಳ್ಳಬಹುದು ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿರು...
ಮೈಸೂರು: ನನ್ನ ಕಥನವನ್ನ ಪಠ್ಯ ಪುಸ್ತಕಕ್ಕೆ ಬಳಸಲು ನೀಡಿದ್ದ ಅನುಮತಿಯನ್ನು ನಾನು ಹಿಂದೆಗೆದುಕೊಂಡಿದ್ದೇನೆ ಎಂದು ಪದ್ಮಶ್ರೀ ಪುರಸ್ಕೃತ ಸಾಹಿತಿ ದೇವನೂರು ಮಹದೇವ ಹೇಳಿದ್ದಾರೆ. ಎಲ್.ಬಸವರಾಜು, ಎ.ಎನ್.ಮೂರ್ತಿ, ಪಿ.ಲಂಕೇಶ್, ಸಾರಾ ಅಬೂಬಕರ್ ಮೊದಲಾದವರ ಕತೆ, ಲೇಖನಗಳನ್ನು ಕೈ ಬಿಡಲಾಗಿದೆ. ಇದನ್ನು ಯಾರು ಕೈ ಬಿಟ್ಟಿದ್ದಾರೋ, ಅವರಿಗೆ ...
ಸೆನೆಗಲ್: ಆಸ್ಪತ್ರೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದ ಪರಿಣಾಮ 11 ನವಜಾತ ಶಿಶುಗಳು ಸಜೀವ ದಹನವಾದ ಘಟನೆ ಸೆನೆಗಲ್ ನ ಟಿವಾವೋನ್ ಆಸ್ಪತ್ರೆಯಲ್ಲಿ ನಡೆದಿದೆ. ಘಟನೆಯನ್ನು ಅಧ್ಯಕ್ಷ ಮ್ಯಾಕಿ ಸಾಲ್ ದೃಢಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ತೀವ್ರ ದುಃಖ ವ್ಯ...
ವಿಶಾಖಪಟ್ಟಣ: ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಗೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿಡಬಾರದು ಎಂದು ಜಾತಿ ಪೀಡೆ ದೇಶದ್ರೋಹಿಗಳು ವಿಧ್ವಂಸಕ ಕೃತ್ಯ ಆರಂಭಿಸಿದ್ದು, ಸಚಿವರು ಮತ್ತು ಶಾಸಕರ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಮಲಾಪುರಂನ ಸಾರಿಗೆ ಸಚಿವ ವಿಶ್ವರೂಪ್ ಅವರ ಮನೆಗೆ ಬೆಂಕಿ ಹಚ್ಚಲಾಗಿದ್ದು, ಮನೆಯ ಸಮೀಪ ನಿಲ...