ತುಮಕೂರು: ತುಮಕೂರಿನಲ್ಲಿ ಬೆಳ್ಳಂ ಬೆಳ್ಳಗೆ ಭೀಕರ ಅಪಘಾತ ನಡೆದಿದ್ದು, ಬಸ್ಸೊಂದು ಮಗುಚಿ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪಳವಳ್ಳಿ ತಿರುವಿನ ಬಳಿ ಈ ದುರ್ಘಟನೆ ಸಂಭವಿಸಿದೆ. ಸದ್ಯದ ಮಾಹಿತಿಗಳ ಪ್ರಕಾರ 6 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರೆ, 25ಕ್ಕೂ ಅಧಿಕ ಜನರು...
ತ್ರಿಶೂರ್: ನಿನ್ನೆ ಕೊಡಂಗಲ್ಲೂರಿನಲ್ಲಿ ಬಟ್ಟೆ ಅಂಗಡಿಯೊಂದರ ಮಾಲಕಿಯನ್ನು ಯುವಕನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ವಿಲಂಗರಪರಂಬಿಲ್ ನಾಸರ್ ಅವರ ಪತ್ನಿ ರಿನ್ಸಿ ಅವರು ಹತ್ಯೆಯಾದ ಮಹಿಳೆಯಾಗಿದ್ದಾರೆ. ರಿನ್ಸಿ ಅವರ ಮೃತದೇಹದ ಮೇಲೆ ಮೂವತ್ತಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿದ್ದು, ಕೃತ್ಯದ ಬಳಿಕ ಆರೋಪಿ ರಿಯಾಜ್ ತಲೆ...
ತ್ರಿಶೂರ್: ಶಾಲೆಯಲ್ಲಿ ಕಲ್ಲಂಗಡಿ ಹಣ್ಣು ಕತ್ತರಿಸಿ ಗೆಳತಿಯ ಹುಟ್ಟುಹಬ್ಬ ಆಚರಣೆ ಮಾಡಿದ ಆರೋಪದಲ್ಲಿ 10ನೇ ತರಗತಿ ವಿದ್ಯಾರ್ಥಿಗೆ ಶಿಕ್ಷಕರು ಮಾರಣಾಂತಿಕವಾಗಿ ಥಳಿಸಿರುವ ಆರೋಪ ಕೇಳಿ ಬಂದಿದ್ದು, ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಾಲಕ್ಕಾಡ್ ಪಂದಲಂಪಾಡಂ ಮೇರಿ ಮಾತಾ ಶಾಲೆಯ ವಿದ್ಯಾರ್ಥಿ ಶ್ರೇಯಸ್ ವಿದ್ಯಾರ್ಥಿ ಎಂದು ಗುರುತಿಸ...
ನವದೆಹಲಿ: ಈ ವರ್ಷದ ಮೊದಲ ಚಂಡಮಾರುತ ʻಅಸಾನಿʼ ಇದೇ ಮಾರ್ಚ್ 21 ರಂದು ಮಧ್ಯ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ( IMD) ತಿಳಿಸಿದೆ. ಈ ಚಂಡಮಾರುತವು ಭಾರತದ ಕರಾವಳಿಯನ್ನು ದಾಟುವ ಸಾಧ್ಯತೆಯಿಲ್ಲ. ಆದ್ರೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುವ ಸಾಧ್...
ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿಗೆ ಒಳಗಾಗಿದ್ದ 18 ಸರ್ಕಾರಿ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಸಂಪತ್ತು ಹೊಂದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿವಾನಂದ ಅಲಿಯಾಸ್ ಪೀರಪ್ಪ ಶರಣಪ್ಪ ಕೇದಗಿ (ಶೇ.325), ಮೈಸೂರು ನಗರ ವಿಜಯನಗರ ಪೊಲೀಸ್ ಠಾಣೆ ಇನ್ಸ್...
ಯುಎಇ ಸರಕು ಹಡಗು ಇರಾನ್ ನಲ್ಲಿ ಮುಳುಗಿದ್ದು, ಇಲ್ಲಿನ ಅಸಲುಯಾ ಕರಾವಳಿ ಭಾಗದಲ್ಲಿ ಇಂದು ಬೆಳಿಗ್ಗೆ ಭಾರಿ ಚಂಡಮಾರುತ ಅಲೆಗಳಿಗೆ ಸಿಲುಕಿ ಹಡಗು ಮುಳುಗಿದೆ ಎನ್ನಲಾಗಿದೆ. ಹಡಗಿನಲ್ಲಿ ಭಾರತೀಯರು ಸೇರಿದಂತೆ 30 ಸಿಬ್ಬಂದಿ ಇದ್ದರು. ಇದರಲ್ಲಿ ಇಬ್ಬರನ್ನು ಹೊರತುಪಡಿಸಿ, ಉಳಿದವರನ್ನು ರಕ್ಷಿಸಲಾಗಿದೆ ಎಂದು ಹಡಗು ಮಾಲೀಕತ್ವದ ಕಂಪನಿಯನ...
ದಕ್ಷಿಣ ಕನ್ನಡ: ಮಂಗಳೂರಿನ ಪಡೀಲು ಮತ್ತು ಕುಲಶೇಖರ ರೈಲ್ವೆ ನಿಲ್ದಾಣಗಳ ನಡುವೆ ಜೋಡಿ ರೈಲು ಮಾರ್ಗ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಇಂದಿನಿಂದ (ಮಾರ್ಚ್ 17) 18 ರೈಲುಗಳ ಸಂಚಾರವನ್ನು ವಲಯ ರೈಲ್ವೇ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಸುಬ್ರಹ್ಮಣ್ಯ ರಸ್ತೆ-ಮಂಗಳೂರು ಸೆಂಟ್ರಲ್ (ಗಾಡಿ ಸಂಖ್ಯೆ 06488/06489) ಮಧ್ಯದ ಪ್ರಯಾಣಿಕರ ...
ಪತ್ತನಂತಿಟ್ಟ: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಾದ್ರಿಯನ್ನು ಕಸ್ಟಡಿಗೆ ನೀಡಲಾಗಿದೆ. ` ಪತ್ತನಂತಿಟ್ಟದ ಕೂಡಲ್ ಆರ್ಥೊಡಾಕ್ಸ್ ಚರ್ಚ್ನ ಧರ್ಮಾಧಿಕಾರಿ ಪಾಂಡ್ಸನ್ ಜಾನ್ ಅವರನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಕೌನ್ಸೆಲಿಂಗ್ ಗೆ ಬಂದ ಬಾಲಕಿಗೆ ಪಾದ್ರಿ ಲೈಂಗಿಕ ದೌರ್ಜನ್ಯ ಎಸಗ...
ಬೆಂಗಳೂರು : ಹಿಜಾಬ್ ಧಾರ್ಮಿಕ ಅಚರಣೆ ಅಲ್ಲ ಎಂಬ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಇಂದು ಮುಸ್ಲಿಂ ಸಂಘಟನೆಯಾದ ಅಮಿರ್-ಇ-ಷರಿಯತ್ ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಹೈಕೋರ್ಟ್ ತೀರ್ಪಿನ ಬಗ್ಗೆ ಮುಸ್ಲಿಂ ಧರ್ಮಗುರುಗಳು ಚರ್ಚೆ ನಡೆಸಿದ್ದು ಈ ಸಭೆಯಲ್ಲಿ ಮುಖಂಡ ಸಗೀರ್ ಅಹ್ಮದ್ ಅವರು, ಗುರುವಾರ ಸ್ವಯಂ ಪ್ರೇರಿತವಾಗಿ ಕರ್ನಾಟಕ ಬಂ...
ಗುವಾಹಟಿ: ಅಸ್ಸಾಂ ಪೊಲೀಸರು 24 ಗಂಟೆಗಳಲ್ಲಿ ಇಬ್ಬರು ಅತ್ಯಾಚಾರ ಆರೋಪಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಏಳು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದ ಆರೋಪದಲ್ಲಿ ಅಸ್ಸಾಂ ಪೊಲೀಸರು ಬುಧವಾರ ಆರೋಪಿಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ರಾಜೇಶ್ ಮುಂಡಾ (38) ಮಜ್ಬತ್ ನಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯ...