ಕಾರವಾರ: ಸಂಸದ ಅನಂತ್ ಕುಮಾರ್ ಹೆಗಡೆ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕ ಕಾರ್ಯಕ್ರಮ ಹಾಗೂ ಸಾರ್ವಜನಿಕರ ಭೇಟಿಗೆ ಲಭ್ಯವಿರುವುದಿಲ್ಲ ಎಂದು ಸಂಸದರ ಆಪ್ತ ಕಾರ್ಯದರ್ಶಿ ಸುರೇಶ್ ಶೇಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಂಸದ ಅನಂತ್ ಕುಮಾರ್ ಹೆಗಡೆ ಬೆನ್ನು ನೋವು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದ...
ಬೆಂಗಳೂರು: ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಜೊತೆಗೆ ರಾಸಲೀಲೆಯಲ್ಲಿ ನಿರತವಾಗಿದ್ದ ಮಹಿಳೆಯ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸರು ಶೋಧ ನಡೆಸಿದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ರಮೇಶ್ ಜಾರಕಿಹೊಳಿ ಅವರನ್ನೇ ಭೇಟಿ ಮಾಡಿ ಮಹಿಳೆಯ ಬಗ್ಗೆ ವಿಚಾರಿಸಿದಾಗ ಅವರು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರಮೇಶ್ ಜಾರಕಿಹೊಳಿ ದೂ...
ದೆಹಲಿ: ಮುತ್ತೋಟು ಗ್ರೂಪ್ ಮಾಲಿಕ ಎಂ.ಜಿ.ಜಾರ್ಜ್ ಮುತ್ತೋಟು ತಮ್ಮ ನಿವಾಸದ ನಾಲ್ಕನೇ ಮಹಡಿಯಿಂದ ಬಿದ್ದು ಸಾವಿಗೀಡಾಗಿದ್ದು, ಚಿನ್ನದ ಮೇಲೆ ಸಾಲ ನೀಡುವ ಮುತ್ತೋಟು ಗ್ರೂಪ್ ನ ಮಾಲಿಕ ದಾರುಣವಾಗಿ ಅಂತ್ಯವಾಗಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆ ಸುಮಾರಿಗೆ ಪೂರ್ವ ದೆಹಲಿಯ ಕೈಲಾಶ್ ನಗರದ ತಮ್ಮ ನಿವಾಸದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ...
ಮಧ್ಯಪ್ರದೇಶ: ಬಿಜೆಪಿ ಶಾಸಕರೊಬ್ಬರ ಬರ್ತ್ ಡೇ ಪಾರ್ಟಿ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಬನ್ವಾರ್ ಗ್ರಾಮದಲ್ಲಿ ನಡೆದಿದ್ದು, ಜನ್ಮ ದಿನಾಚರಣೆ ಸಂಭ್ರಮದ ನಡುವೆಯೇ ಈ ದುರ್ಘಟನೆ ನಡೆದಿದೆ. ಮಧ್ಯಪ್ರದೇಶದ ಬಿಜೆಪಿ ಶಾಸಕ ಧರ್ಮೇಂದ್ರ ಲೋಧಿ ಎಂಬವರ ಬರ್ತ್ ಡೇ ಪಾರ್ಟಿಯ ಸಂದರ್ಭದಲ್ಲಿ ಘರ್ಷಣೆ ನಡೆದಿದ್ದು, ಈ ವೇಳೆ...
ಬೆಂಗಳೂರು: ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡಬಾರದು ಎಂದು ಕೋರಿ ಸಿಎಂ ಯಡಿಯೂರಪ್ಪ ಸಂಪುಟದ 6 ಸಚಿವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಮಾರ್ಚ್ 30ರವರೆಗೆ ಮಾನಹಾನಿಕರ ಸುದ್ದಿಗಳ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ರಮೇಶ್ ಜಾರಕಿಹೊಳಿ ಸಿಡ...
ಬೆಂಗಳೂರು: ರಾಜ್ಯ ಬಿಜೆಪಿ ಸಚಿವರ ರಾಸಲೀಲೆ ವಿಚಾರ ಚರ್ಚೆಯಲ್ಲಿರುವಂತೆಯೇ ಇನ್ನೂ 6 ಸಚಿವರು ಕೋರ್ಟ್ ಗೆ ಹೋಗಿ ತಮ್ಮ ಬಗ್ಗೆ ಯಾವುದೇ ಮಾನಹಾನಿಕರ ವರದಿ ಪ್ರಕಟಿಸದಂತೆ ಮನವಿ ಮಾಡಿದ್ದಾರೆ, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ತಮ್ಮ ಮೇಲೆ ರಾಜಕೀಯ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಸಚಿವರು ಹೇಳುತ್ತಿ...
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದು, ದಿನೇಶ್ ಕಲ್ಲಹಳ್ಳಿ ನೀಡಿದ ದೂರಿನಲ್ಲಿ ಆರ್ ಟಿ ನಗರದ ಪಿಜಿಯೊಂದರಲ್ಲಿ ಯುವತಿ ಇದ್ದಳು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ ಟಿ ನಗರ ವ್ಯಾಪ್ತಿಯಲ್ಲಿರುವ 45 ಪಿ.ಜಿ.ಗಳಲ್ಲಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಬ್ಬನ್ ಪಾರ್ಕ್...
ಬೆಂಗಳೂರು: ಒಂದು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪನವರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಶಾಸಕ ಬಿ.ಕೆ.ಸಂಗಮೇಶ್ ಹೇಳಿದ್ದು, ಯಡಿಯೂರಪ್ಪ, ಈಶ್ವರಪ್ಪ, ರಾಘವೇಂದ್ರ ಎಲ್ಲಿದ್ದರು? ಎಲ್ಲಿಂದ ಎಲ್ಲಿಗೆ ಬಂದರು? ಎಂಬ ಬಗ್ಗೆ ಸಂಪೂರ್ಣ ಮಾಹಿತಿ, ದಾಖಲೆ ನನ್ನ ಬಳಿ ಇದೆ ಎಂದು ಅವರು ಹೇಳಿದ್ದಾರೆ. ...
ಮಂಡ್ಯ: ಮಾಜಿ ಸಚಿವರೊಬ್ಬರ ಅಶ್ಲೀಲ ವಿಡಿಯೋ ಬಿಡುಗಡೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ನಾರಾಯಣ ಗೌಡ ಪ್ರತಿಕ್ರಿಯಿಸಿದ್ದು, ಆ ವಿಡಿಯೋ ಗ್ರಾಫಿಕ್ಸ್ ಆಗಿರಬಹುದು ಎಂದು ಹೇಳಿದ್ದಾರೆ. ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿ ಬಾಂಬೆಗೆ ತೆರಳಿದ್ದ ಮಿತ್ರಮಂಡಳಿ ಇದೀಗ ಸಿಡಿಗೆ ಹೆದರಿ ಓಡುವಂತಾಗಿದೆ. ಬಾಂಬೆ ಮಿತ್ರಮಂಡಳಿ ಇದೀಗ ಇದಕ್...
ರಾಜಸ್ತಾನ: ಪತ್ನಿಯು ಟಿಕ್ ಟಾಕ್ ನಲ್ಲಿ ತನ್ನ 300ಕ್ಕೂ ಅಧಿಕ ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, ಇದರಿಂದ ಸಿಟ್ಟಿಗೆದ್ದ ಪತಿ ಆಕೆಗೆ ಮನ ಬಂದಂತೆ ಥಳಿಸಿದ್ದಾನೆ. ಆದರೆ ಇದೀಗ ಪತಿ ಸಂಕಷ್ಟಕ್ಕೀಡಾಗಿದ್ದಾನೆ. ಪತಿ ತನ್ನ ಮೇಲೆ ಹಲ್ಲೆ ನಡೆಸಿದ್ದರಿಂದ ಆಕ್ರೋಶಗೊಂಡ ಪತ್ನಿ ಪತಿಯ ವಿರುದ್ಧ ದೂರು ನೀಡಿದ್ದರು, ಇದೀಗ ಪತಿ ಕಂಬಿ ಎಣಿಸ...