ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಶೀಘ್ರವೇ ಕದನವಿರಾಮ.? ಆ ಮಾತುಕತೆ ಸಕ್ಸಸ್ ಆಗುತ್ತಾ..?

05/07/2024

ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ಕದನವಿರಾಮ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಕದನ ವಿರಾಮ ಏರ್ಪಡಿಸುವುದು ಮತ್ತು ಬಂಧಿಗಳ ವಿನಿಮಯ ಸೇರಿದಂತೆ ವಿವಿಧ ಉಪಕ್ರಮಗಳ ಕುರಿತಂತೆ ಚರ್ಚಿಸಲು ಇಸ್ರೆಲ್ ನ ಗುಪ್ತಚರ ಸಂಸ್ಥೆಯಾದ ಮೊಸಾದ್ ನ ಮುಖ್ಯಸ್ಥ ಡೇವಿಡ್ ಬರ್ನಿ ಅವರನ್ನು ಕತಾರ್ ಗೆ ಕಳಿಸಲು ಪ್ರಧಾನಿ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇವತ್ತು ಖತಾರ್ ಪ್ರಧಾನಿ ಮೊಹಮ್ಮದ್ ಬಿನ್ ಅಬ್ದುಲ್ ರಹಮಾನ್ ಅಲ್ತಾಾನಿ ಜೊತೆ ಮೊಸಾದ್ ಮುಖ್ಯಸ್ಥ ಮಾತುಕತೆ ನಡೆಸಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಸಹಿತ ವಿವಿಧ ವಿಷಯಗಳ ಮೇಲೆ ಚರ್ಚೆ ನಡೆಸುವುದಕ್ಕೆ ಕಳೆದ ಬುಧವಾರ ಹಮಾಸ್ ನಿಂದ ನಮಗೆ ನಿರ್ದೇಶನಗಳು ಲಭಿಸಿತ್ತು ಎಂದು ಇಸ್ರೇಲ್ ಹೇಳಿಕೊಂಡಿತ್ತು. ಈ ಸೂಚನೆಗಳನ್ನು ಇಸ್ರೇಲ್ ಈಗ ಅವಲೋಕನ ನಡೆಸುತ್ತಿದೆ. ಕದನ ವಿರಾಮಕ್ಕೆ ಸಂಬಂಧಿಸಿ ಅಧ್ಯಕ್ಷ ಜೋ ಬೈಡನ್ ಜೊತೆ ನೇತಾನ್ಯಾಹು ಕಳೆದ ವಾರ ಮಾತುಕತೆ ನಡೆಸಿದ್ದರು.

 

ಒತ್ತೆಯಾಳುಗಳ ಬಿಡುಗಡೆ ಮತ್ತು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕುವ ಕುರಿತಂತೆ ಇಬ್ಬರು ನಾಯಕರು ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. ಒಪ್ಪಂದಕ್ಕೆ ಸಂಬಂಧಿಸಿ ಹಮಾಸ್ ನೀಡಿರುವ ಸೂಚನೆಗಳ ಬಗ್ಗೆ ಇಬ್ಬರೂ ನಾಯಕರು ಚರ್ಚೆ ನಡೆಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version