8:56 AM Thursday 16 - October 2025

ಶಾಕಿಂಗ್ ನ್ಯೂಸ್: ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಬಂಡೆಗಳು

train
12/11/2021

ಬೆಂಗಳೂರು:  ಕಣ್ಣೂರು-ಬೆಂಗಳೂರು ಎಕ್ಸ್ ಪ್ರೆಸ್ ರೈಲಿನ 5 ಬೋಗಿಗಳು ಹಳಿ ತಪ್ಪಿದ ದುರ್ಘಟನೆ ಶುಕ್ರವಾರ ಮುಂಜಾನೆ 3:50ರ ಸುಮಾರಿಗೆ ನಡೆದಿದ್ದು, ರೈಲು ಚಾಲನೆಯಲ್ಲಿರುವಾಗಲೇ ಬಂಡೆಗಳು ಉರುಳಿ ಬಿದ್ದ ಪರಿಣಾಮ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕಣ್ಣೂರು-ಬೆಂಗಳೂರು ಎಕ್ಸ್‌ ಪ್ರೆಸ್ ರೈಲು ತೊಪ್ಪೂರು-ಶಿವಡಿ ಬಳಿ ಸಂಚರಿಸುವಾಗ ಏಕಾಏಕಿ ಕಲ್ಲುಬಂಡೆ ಉರುಳಿಬಿದ್ದ ಪರಿಣಾಮ ರೈಲಿನ 5 ಬೋಗಿಗಳು ಹಳಿ ತಪ್ಪಿವೆ. ಅದೃಷ್ಟವಶಾತ್ ರೈಲಿನ ವೇಗ ಕಡಿಮೆ ಇದ್ದುದರಿಂದಾಗಿ ಪ್ರಯಾಣಿಕರು ಯಾವುದೇ ಅಪಾಯವಾಗದೇ ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಾಹಿತಿಗಳ ಪ್ರಕಾರ ರೈಲಿನಲ್ಲಿ 2348 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದ ರೈಲ್ವೇ ಉನ್ನತ ಅಧಿಕಾರಿಗಳು ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ಭೇಟಿ ನೀಡಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಕಣ್ಣೂರು-ಬೆಂಗಳೂರು ಎಕ್ಸ್‌ಪ್ರೆಸ್‌ ನ ಪ್ರಯಾಣಿಕರನ್ನು ಅವರು ಹೋಗ ಬೇಕಿದ್ದ ಊರುಗಳಿಗೆ ಕಳಿಸಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಇನ್ನಷ್ಟು ಸುದ್ದಿಗಳು

ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ: ಶಿಕ್ಷಣದಲ್ಲಿ ರಾಜಕೀಯ ಏಕೆ ಬೆರೆಸುತ್ತಿದ್ದೀರಿ | ಹೈಕೋರ್ಟ್ ಪ್ರಶ್ನೆ

ನಿಧಿಯಾಸೆಗಾಗಿ ಬೆತ್ತಲೆ ಪೂಜೆ: ಮೌಢ್ಯ ಆಚರಣೆಯಲ್ಲಿ ತೊಡಗಿದ್ದ 6 ಮಂದಿ ಅರೆಸ್ಟ್

ಬಿಟ್ ಕಾಯಿನ್ ಹಗರಣ ಆರೋಪ ನಿರ್ಲಕ್ಷಿಸಲು ಸಿಎಂ ಬೊಮ್ಮಾಯಿಗೆ ಪ್ರಧಾನಿ ಮೋದಿ ಸಲಹೆ!

ಶೀಘ್ರದಲ್ಲೇ ಮದುವೆಯಾಗ್ತಾರಂತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನಟಿ ಕಂಗನಾ!

ಅಶ್ವಿನಿ ಅಳುತ್ತಾ “ಹಿ ಇಸ್ ನೋ ಮೋರ್” ಎಂದಾಗ ಹುಚ್ಚನಂತೆ ಓಡಾಡಿದ್ದೆ | ಅಪ್ಪು ಸಾವಿನ ಸುದ್ದಿ ತಿಳಿದಾಗ ಶಿವಣ್ಣನ ಸ್ಥಿತಿ ಏನಾಗಿತ್ತು?

80 ಕೋಟಿ ಬಡವರ ಖಾತೆಗೆ ಕನ್ನ |  ಶ್ರೀಕೃಷ್ಣನ ಮೇಲೆ ಮತ್ತೊಂದು ಗಂಭೀರ ಆರೋಪ

ಬಾಲಕಿಯನ್ನು ಕಾರು ಚಾಲಕ ಹಿಂಬಾಲಿಸಿದ ಪ್ರಕರಣಕ್ಕೆ ತಿರುವು!

ಇತ್ತೀಚಿನ ಸುದ್ದಿ

Exit mobile version