5:06 AM Wednesday 17 - December 2025

ಇಲಿಗಳನ್ನು ಓಡಿಸಲು ಇಟ್ಟಿದ್ರು ಪಾಷಾಣ: ವಿಷ ಗಾಳಿ ಸೇವಿಸಿ ಮಕ್ಕಳು ಸಾವು

15/11/2024

ಇಲಿಗಳ ಕಾಟ ತಡೆಯುವುದಕ್ಕಾಗಿ ಇಟ್ಟಿದ್ದ ಪಾಷಾಣದ ವಿಷಕಾರಿ ಗಾಳಿಯನ್ನು ಉಸಿರಾಡಿದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನ ಕುಂದ್ರಥೂರ್​​ನಲ್ಲಿ ನಡೆದಿದೆ .ಆರು ವರ್ಷದ ವೈಷ್ಣವಿ ಮತ್ತು ನಾಲ್ಕು ವರ್ಷದ ಸಾಯಿ ಸುದರ್ಶನ್​ ಸಾವನ್ನಪ್ಪಿದ ಮಕ್ಕಳಾಗಿದ್ದಾರೆ.

ಗಿರಿಥರನ್​ ಮತ್ತು ಪವಿತ್ರಾ ದಂಪತಿ ಚೆನ್ನೈನ ಕುದ್ರಥೂರ್​ ನಿವಾಸಿಗಳಾಗಿದ್ದಾರೆ. ಮನೆಯಲ್ಲಿ ಇಲಿ ಕಾಟ ಹೆಚ್ಚಾದ ಕಾರಣ, ಉಪಶಮನಕ್ಕೆ ಖಾಸಗಿ ಕೀಟ ನಿಯಂತ್ರಣ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಮನೆಗೆ ಬಂದ ಕೀಟ ನಿಯಂತ್ರಕ ಕಂಪನಿ ಸದಸ್ಯರು ಮನೆಯ ಎಲ್ಲಾ ಮೂಲೆಗಳಲ್ಲಿ ಇಲಿ ಸಾಯುವ ಪಾಷಾಣವನ್ನು ಇರಿಸಿದ್ದಾರೆ.

ಮಲಗುವ ಕೋಣೆಯಲ್ಲೂ ಇರಿಸಿದ್ದಾರೆ. ಈ ಪಾಷಣಾದಲ್ಲಿ ಕೊಂಚ ಹೆಚ್ಚಿನ ಮಟ್ಟದ ವಿಷಕಾರಿ ಅಂಶ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ದಂಪತಿ ಪಾಷಾಣವಿರಿಸಿದ್ದ ಬೆಡ್​ ರೂಂನಲ್ಲಿ ಎಂದಿನಂತೆ ಮಕ್ಕಳೊಂದಿಗೆ ರಾತ್ರಿ ಎಸಿ ಹಾಕಿ ಎಲ್ಲಾ ಬಾಗಿಲುಗಳನ್ನು ಬಂದ್​ ಮಾಡಿ ಮಲಗಿದ್ದಾರೆ.

ಎಸಿ ಹಾಕಿದ ಹಿನ್ನೆಲೆಯಲ್ಲಿ ಗಾಳಿಯಾಡಲು ಸಾಧ್ಯವಾಗದೇ ಇಲಿಯ ಪಾಷಾಣದ ಗಾಳಿಯನ್ನು ಮನೆಯ ನಾಲ್ಕು ಮಂದಿ ಉಸಿರಾಡಿದ್ದಾರೆ. ಬೆಳಗ್ಗೆ ಏಳುತ್ತಿದ್ದಂತೆ ದಂಪತಿಗಳಿಬ್ಬರು ಅಸ್ವಸ್ಥರಾಗಿದ್ದಾರೆ. ಮಕ್ಕಳು ಕೂಡ ಪ್ರಜ್ಞೆ ತಪ್ಪಿದ್ದಾರೆ.
ತಕ್ಷಣಕ್ಕೆ ನೆರೆ ಹೊರೆಯವರ ಸಹಾಯದಿಂದ ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ, ಮಕ್ಕಳ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಅತಿಯಾದ ವಿಷಕಾರಿ ಅಂಶದ ಬಳಕೆ ಜೊತೆಗೆ ಈ ರಾಸಾಯನಿಕ ಸಿಂಪಡಿಸಿದಾಗ ಮುನ್ನೆಚ್ಚರಿಕೆ ಕ್ರಮ ಪಾಲಿಸದ ಹಿನ್ನೆಲೆಯಲ್ಲಿ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಕರ್​ ಬಂಧಿತನಾಗಿದ್ದು, ಪ್ರಕರಣದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version