ಚಿರು ಪುತ್ರನನ್ನು ನೋಡಲು ಬಂದ ಅರ್ಜುನ್ ಸರ್ಜಾ

24/10/2020

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ಮಗನನ್ನು ನೋಡಲು ಅರ್ಜುನ್ ಸರ್ಜಾ ಅವರ ಮಾವ ಚೆನ್ನೈನಿಂದ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ಮೊಮ್ಮಗನನ್ನು ನೋಡಲು ಕುಟುಂಬ ಸಮೇತರಾಗಿ ಆಸ್ಪತ್ರೆಗೆ ಬಂದಿದ್ದಾರೆ.

ಮಾವ ಆಸ್ಪತ್ರೆಗೆ ಬರುತ್ತಿದ್ದಂತೆಯೇ ನಟ ಧ್ರುವ ಸರ್ಜಾ ಕೂಡ ಆಸ್ಪತ್ರೆಗೆ ಬಂದಿದ್ದಾರೆ. ಚಿರು ಸಾವಿನ ನೋವಿನ ನಡುವೆಯೇ ಅವರಿಗೆ ಪುತ್ರ ಜನಿಸಿರುವುದು ಚಿರು ಮತ್ತೆ ಹುಟ್ಟಿ ಬಂದಿದ್ದಾನೆ ಎಂದೇ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಮಗು ಜನಿಸಿದ ದಿನದಂದು ಅರ್ಜುನ್ ಸರ್ಜಾ ಚೆನ್ನೈನಲ್ಲಿ ಚಿತ್ರೀಕರಣದಲ್ಲಿದ್ದರು. ಹಾಗಾಗಿ ಅವರು ಇಂದು ಆಗಮಿಸಿದ್ದಾರೆ.  ಚಿರುವನ್ನು ಕಳೆದುಕೊಂಡ ನೋವಿನ ನಡುವೆಯೇ ಅವರ ಪುತ್ರ ಇದೀಗ ಇಡೀ ಕುಟುಂಬಕ್ಕೆ ಸಂತಸ ನೀಡಿದ್ದಾನೆ.

ಇತ್ತೀಚಿನ ಸುದ್ದಿ

Exit mobile version