6:00 PM Sunday 28 - September 2025

ಪ್ರಜಾಪ್ರಭುತ್ವ ದೇಶದಲ್ಲಿ ಸಂವಿಧಾನ ಕೊಡುವ ಜಾತ್ಯಾತೀತ– ಸಮಾಜವಾದ ಪದಗಳು ದೂರವಾಗುತ್ತಿದೆಯೇ ?

adarsh josepgh
31/07/2025

ಫಾ.ಆದರ್ಶ್ ಜೋಸೆಫ್

ಛತ್ತೀಸ್ ಗಡದಲ್ಲಿ ಕ್ರೈಸ್ತ ಸನ್ಯಾಸಿನೀಯರ ಬಂಧನ ಮಾನವ ಹಕ್ಕುಗಳ ಮೇಲಿನ ಕಗ್ಗೊಲೆಯಾಗಿದೆ:

ಕಾನೂನು ಕೈಗೆ ಎತ್ತುವ ಅವಕಾಶ ದೇಶದ ಸಂವಿಧಾನ ಯಾರಿಗೂ ನೀಡಿಲ್ಲ! ನಿಯಮ ಮತ್ತು ನಿಯಮ ಪಾಲಕರ ಮುಂದೆಯೇ ಕೆಲವು ಗುಂಪುಗಳು ಸಂಘ ಸೇರಿ, ಸನ್ಯಾಸಿನೀಯರ ಮೇಲೆ ದೌರ್ಜನ್ಯ ಎಸಗಿರುವುದು ಸಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ಉಂಟಾಗಿದೆ. ಒಬ್ಬ ಪ್ರಜೆಗೆ ಸಂವಿಧಾನ ನೀಡುವ ಹಕ್ಕುಗಳು ನಮ್ಮ ದೇಶದಲ್ಲಿ ಕಸಿಯಲ್ಪಡುತ್ತಿದೆ. ಗುಂಪು ಸೇರಿ ಅಕ್ರಮಗಳು ನಮ್ಮ ದೇಶದಲ್ಲಿ ಆಗಾಗ ನಡೆಯುತ್ತಿದೆ. ಇಂಥವರ ವಿರುದ್ಧ ಕ್ರಮ ಯಾಕೆ ಆಗುತ್ತಾ ಇಲ್ಲ? ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರನ್ನು ಕಾಡುತ್ತಿದೆ.

ಸ್ವತಂತ್ರ ಭಾರತದ ಕೆಲವು ರಾಜ್ಯಗಳಲ್ಲಿ ಸ್ವತಂತ್ರವಾಗಿ ಪ್ರಯಾಣ ಬೆಳಸಲು ಸಾಧ್ಯವಾಗುತಿಲ್ಲ ಅಂದರೆ ನಮ್ಮ ದೇಶದ ಎಲ್ಲಿಗೆ ಹೋಗುತ್ತಾ ಇದೆ. ? ಸ್ವತಂತ್ರವಾಗಿ ಬದುಕಲು, ಸಂಚಾರ ಮಾಡಲು, ಕೆಲಸ ಮಾಡಲು, ಧರ್ಮ ಪಾಲನೆ ಮಾಡಲು ದೇಶದ ಸಂವಿಧಾನ ನಮಗೆ ಹಕ್ಕನ್ನು ನೀಡಿದೆ. ಆದರೆ ಒಬ್ಬ ಪ್ರಜೆಗೆ ಇರುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲೇಬೇಕು. ಯಾವುದೇ ತಪ್ಪು ಮಾಡದಿದ್ದರೂ, ಕಾನೂನು ಬಾಹಿರವಾಗಿ ಯಾವುದೇ ಕಾರ್ಯಗಳು ಕ್ರೈಸ್ತ ಸನ್ಯಾಸಿಯರಿಂದ ಆಗದಿದ್ದರೂ, ಛತ್ತೀಸ್ ಗಡದಲ್ಲಿ ಸುಳ್ಳು ಆರೋಪದ ಅಡಿಯಲ್ಲಿ ಬಂಧಿಸಿರುವುದು ಖಂಡನಿಯವಾಗಿದೆ. ಅನ್ಯಾಯವಾಗಿ ಬಂಧನದಲ್ಲಿ ಇರಿಸಿದ ಸನ್ಯಾಸಿನಿಯರಿಗೆ ಆದಷ್ಟು ಬೇಗ ನ್ಯಾಯ ದೊರಕಲೇ ಬೇಕು.

ಛತ್ತೀಸ್ ಗಡದಲ್ಲಿ ಆಗಿದ್ದೇನು? : ತಮ್ಮ ಪೋಷಕರ ಒಪ್ಪಿಗೆಯೊಂದಿಗೆ 18 ವರ್ಷ ಮೇಲ್ಪಟ್ಟ ಮಹಿಳೆಯರು ಕೆಲಸ ಹಾಗೂ ನರ್ಸಿಂಗ್ ಕಲಿಯಬೇಕೆಂಬ ಆಸೆಯೊಂದಿಗೆ ಇಬ್ಬರು ಕ್ರೈಸ್ತ ಸನ್ಯಾಸಿಯಾರೊಂದಿಗೆ ರೈಲಿನಲ್ಲಿ ಪ್ರಯಾಣ ಬೆಳಸುತ್ತಿದ್ದ ವೇಳೆ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಕೆಲವರು ಗುಂಪು ಸೇರಿ ಅವಾಚ್ಯ ಪದಗಳನ್ನು ಬಳಸಿ ಹಲ್ಲೆಗೆ ಮುಂದಾಗಿದರು. ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳು ತಮ್ಮ ಬಳಿ ಇದ್ದರೂ, ಮಾನವ ಕಳ್ಳ ಸಾಗಣೆ  ಹಾಗೂ ಮಾತಾoತರ ಎಂಬ ಸುಳ್ಳು ಆರೋಪದ ಅಡಿಯಲ್ಲಿ ಬಂಧಿಸಿರುವುದು ಸಂವಿಧಾನ ನೀಡುವಂತ  ಧಾರ್ಮಿಕ ಹಕ್ಕುಗಳ ಹಾಗೂ ಮಾನವ ಹಕ್ಕುಗಳ ಮೇಲಿನ ಕಗ್ಗೊಲೆಯಾಗಿದೆ.

ಪ್ರಜಾಪ್ರಭುತ್ವ ದೇಶದಲ್ಲಿ ನಡೆಯುವ ಇಂಥ ಬೆಳೆವಣಿಗೆಗಳು ಮಾನವ ಹಕ್ಕುಗಳ ಮೇಲೆ ನಡೆಯುವ ದೌರ್ಜನ್ಯ ವಾಗಿದೆ.  ಸಮಾಜದಲ್ಲಿ ಹಿಂದುಳಿದವರಿಗೆ ಸೇವೆ ಮಾಡುವುದು ಮತಾoತರವಲ್ಲ,  ಶಿಕ್ಷಣ ವಂಚಿತರಿಗೆ ಶಿಕ್ಷಣ ಕೊಡುವುದು ಮತಾoತರವಲ್ಲ, ಉದ್ಯೋಗ ಇಲ್ಲದವರಿಗೆ ಬದುಕು ಕಟ್ಟಲು ಉದ್ಯೋಗ ಕೊಡುವುದು ಮತಾoತರವಲ್ಲ, ಧ್ವನಿ ಇಲ್ಲದವರ ಧ್ವನಿ ಆಗುವುದು ಮತಾoತರವಲ್ಲ, ರೋಗಿಗಳಿಗೆ ಚಿಕಿತ್ಸೆ ಕೊಡುವುದು ಮತಾoತರವಲ್ಲ. ಬಟ್ಟೆ ಇಲ್ಲದವರಿಗೆ ಬಟ್ಟೆ ಕೊಡುವುದು ಮತಾoತರವಲ್ಲ,  ಶಿಕ್ಷಣ ಹಾಗೂ ಉದ್ಯೋಗದಿಂದ ಸಮಾಜದ ಮತ್ತು ಮಾನವನ ಪರಿವರ್ತನೆ ಆಗುತ್ತದೆ. ಕ್ರೈಸ್ತ ಸನ್ಯಾಸಿನಿಯರು  ಮಾಡುತ್ತಿರುವ ನಿಸ್ವಾರ್ಥ ಸೇವೆಯನ್ನು  ಸುಳ್ಳು ಆರೋಪದ ಅಡಿಯಲ್ಲಿ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸುತ್ತ ಜೈಲಿಗಟ್ಟಿರುವುದು ಖಂಡನೀಯವಾಗಿದೆ.

ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಯಲಿ, ಜೈ  ಭಾರತ್


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version