ಎಲ್ಲದಕ್ಕೂ ಸ್ಪಷ್ಟನೆ ನೀಡಿದ ಚಂದನ್- ನಿವೇದಿತಾ ಗೌಡ | ಸೃಜನ್ ಲೋಕೇಶ್, ಪ್ರಶಾಂತ್ ಸಂಬರ್ಗಿ ವಿಚಾರ ಏನು?

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಟಿ ನಿವೇದಿತಾ ಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದರು.
ನಾವಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಚಾರಗಳು ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
“ನನಗೆ ಬೇಜರಾಗುತ್ತಿದೆ, ಏನು ಮಾಡಬೇಕು ಗೊತ್ತಿಲ್ಲ” ಎನ್ನುವ ಚಂದನ್ ಶೆಟ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಬಗ್ಗೆ ಸ್ಪಷ್ಟನೆ ನೀಡಿದ ಚಂದನ್, ಇದು ಹಳೆಯ ವಿಡಿಯೋವಾಗಿದೆ. ಹಾಡೊಂದರ ವಿಚಾರಕ್ಕೆ ಸಂಬಂಧ ನಾನು ಮಾತನಾಡಿರುವ ವಿಡಿಯೋ ಇದಾಗಿದೆ ಎಂದು ಅವರು ಹೇಳಿದರು.
ನಮ್ಮ ನಡುವೆ ಹೊಂದಾಣಿಕೆ ಸಾಧ್ಯವಾಗಲಿಲ್ಲ. ಹೊಂದಿಕೊಂಡು ಜೀವನ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆವು. ಯಾರು ಕೂಡ ಬಲವಂತವಾಗಿ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನಾವಿಬ್ಬರು ಒಮ್ಮತದಿಂದ ವಿವಾಹ ವಿಚ್ಛೇದನ ಪಡೆದಿರುವುದಾಗಿ ಅವರು ಹೇಳಿದರು.
ಚಂದನ್ ನೀಡಿದ ಸ್ಪಷ್ಟನೆ:
* ನಿವೇದಿತಾ ಅವರು ಯಾವುದೇ ರೀತಿಯ ಜೀವನಾಂಶವನ್ನು ಪಡೆದುಕೊಂಡಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು.
* ಮಕ್ಕಳು ಮಾಡಿಕೊಳ್ಳಬೇಕು ಎನ್ನುವ ವಿಚಾರಕ್ಕೆ ಡಿವೋರ್ಸ್ ಪಡೆಯಲಾಗಿದೆ ಎನ್ನುವುದು ಸುಳ್ಳು.
ವ್ಯಕ್ತಿಯೊಬ್ಬರು ನನ್ನ ತುಂಬಾ ಕ್ಲೋಸ್ ಫ್ರೆಂಡ್ ಅಂತ ಹೇಳಿಕೊಂಡು ಯೂಟ್ಯೂಬ್ ಗೆ ಸಂದರ್ಶನ ನೀಡಿದ್ದಾರೆ. ಆದರೆ ಆ ರೀತಿ ಯಾವುದೂ ಇಲ್ಲ. ಅವರು ಹೇಳಿದಂತಹ ಮಾತುಗಳು ನನಗೆ ಒಂದು ರೀತಿ ಶಾಕ್ ಆಯ್ತು. ಯಾಕೆ ಈ ಥರ ಸುಳ್ಳು ಹೇಳ್ತಿದ್ದಾರೆ ಅಂತ ಅನ್ನಿಸಿತು. ನಿವೇದಿತಾ ಹೈದರಾಬಾದ್ ಗೆ ಯಾಕೆ ಹೋಗ್ತಾರೆ ಅಂತ ನನ್ನ ಬಳಿ ಕೇಳಿದ್ದರು ಅಂತ ಅವರು ಹೇಳಿದ್ದರು. ಆದರೆ ಆ ರೀತಿಯ ಒಂದು ಮಾತುಕತೆಯೇ ನನ್ನ ಜೊತೆಗೆ ನಡೆದಿಲ್ಲ. ಒಂದು ಸಿನಿಮಾದಲ್ಲಿ ನಾನು ಆಕ್ಟ್ ಮಾಡಬೇಕಾದರೆ ಅವರು, ಕೂಡ ಆ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಸಿನಿಮಾ ಶೂಟಿಂಗ್ ಟೈಮ್ ನಲ್ಲಿ ನಾನು ಅವರಿಗೆ ಸಿಕ್ಕಿದ್ದೆ. ಸಿಕ್ಕಾಗ ಸಿನಿಮಾ ಬಗ್ಗೆ ಮಾತನಾಡಿದ್ವಿ, ಹೊರತು ಈ ರೀತಿಯ ಯಾವುದೇ ವಿಚಾರ ಮಾತನಾಡಿಲ್ಲ. ಈ ರೀತಿಯ ಸುಳ್ಳು ಹೇಳಿಕೆ ಯಾಕೆ ಕೊಟ್ಟಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾವೇ ಸುಮ್ಮನಿರುವಾಗಿ ನಮ್ಮಿಬ್ಬರ ವಿಚಾರದಲ್ಲಿ ನಡುವೆ ಬಂದು ಯಾಕೆ ಮಾತನಾಡುತ್ತಿದ್ದಾರೆ ಎಂದು ಚಂದನ್ ಪ್ರಶ್ನಿಸಿದರು.
ಮೂರನೇ ವ್ಯಕ್ತಿಯ ಚಿತ್ರವನ್ನು ನಿವೇದಿತಾ ಅವರೊಂದಿಗೆ ಸೇರಿಸಿ ಸಂಬಂಧ ಕಲ್ಪಿಸುತ್ತಿರುವುದು. ಮನಸ್ಸಿಗೆ ತುಂಬಾ ಬೇಸರ ನೀಡಿದೆ. ಅವರು ತುಂಬಾ ಒಳ್ಳೆಯ ಕುಟುಂಬದವರು. ಆ ವ್ಯಕ್ತಿಯ ಫೋಟೋ ಬಳಸಿ ಈ ವ್ಯಕ್ತಿಗೆ ನಿವೇದಿತಾ ಅವರೊಂದಿಗೆ ಸಂಬಂಧವಿದೆ ಎನ್ನುವುದು ವಿಕೃತ ಮನಸ್ಥಿತಿ. ನಾವು ಕನ್ನಡಿಗರಾಗಿ ಇಂತಹ ಕೆಲಸ ಮಾಡುವುದು ಶೋಭೆ ತರುವುದಿಲ್ಲ.
–ಚಂದನ್ ಶೆಟ್ಟಿ
ನಾವು ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದಾರೆ. ಅವರ ಫ್ಯಾಮಿಲಿ ಜೊತೆಗೆ ನಾವು ಹೋಗ್ತೀವಿ. ಅವರ ಮನೆಯಲ್ಲಿ ಫಂಕ್ಷನ್ಸ್ ಇರುವಾಗ ನಾನು ಮಾತ್ರವಲ್ಲ, ಎಲ್ಲರನ್ನೂ ಸೇರಿಸಿ ಫ್ಯಾಮಿಲಿ ಫಂಕ್ಷನ್ ಮಾಡ್ತಾರೆ. ಅವರ ಕುಟುಂಬದ ಜೊತೆಗೆ ನನಗೆ ಉತ್ತಮ ಬಾಂದವ್ಯ ಇದೆ. ಪ್ರತಿ ವರ್ಷವೂ ಅವರು ನನ್ನ ಬರ್ತ್ ಡೇಗೆ ವಿಶ್ ಮಾಡ್ತಾರೆ. ನಾನೂ ಅವರ ಬರ್ತ್ ಡೇಗೆ ವಿಶ್ ಮಾಡ್ತೀನಿ. ಆದ್ರೆ, ಈ ವರ್ಷ ಯಾಕೆ ಈಥರ ಮಾಡ್ತಿದ್ದಾರೆ. ಇದು ತುಂಬಾ ತಪ್ಪು. ಅವರಿಗೆ ಅವರದ್ದೇ ಆದ ಕುಟುಂಬ ಇದೆ. ಮಕ್ಕಳು ಇದ್ದಾರೆ. ದಯವಿಟ್ಟು ಹೀಗೆ ಮಾಡ್ಬೇಡಿ. ಇದರಿಂದ ಮನಸ್ಸಿಗೆ ತುಂಬಾ ನೋವಾಗುತ್ತದೆ.
— ನಿವೇದಿತಾ ಗೌಡ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97