ಹಸಿರು ಫೌಂಡೇಶನ್  ವತಿಯಿಂದ ಸ್ವಚ್ಛತಾ ಅಭಿಯಾನ

hasiru foundation
04/03/2025

ಕೊಟ್ಟಿಗೆಹಾರ: ಹಸಿರು ಫೌಂಡೇಶನ್ (ರಿ) ವತಿಯಿಂದ ಮೂಡಿಗೆರೆ ತಾಲೋಕ್ ಬಣಕಲ್ ಹೋಬಳಿಯ ಪೊಲೀಸ್ ಸ್ಟೇಷನ್ ಸರ್ಕಲ್ ನಿಂದ ಚಾರ್ಮಾಡಿವರೆಗೂ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ಮುಖಂಡ  ಕುರುವಂಗಿ ವೆಂಕಟೇಶ್, ಹಸಿರು ಫೌಂಡೇಶನ್ (ರಿ) ಸಂಸ್ಥೆ ಬಗ್ಗೆ ಶ್ಲಾಘಿಸಿದರು ಜೊತೆಗೆ ಸಂಸ್ಥೆ ವತಿಯಿಂದ ಇನ್ನಷ್ಟು ಉತ್ತಮ ಕಾರ್ಯಗಳು ಆಗಲಿ, ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದರು.

ಇನ್ನೋರ್ವ ಮುಖಂಡರು ವಿಜಯ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹಸಿರು ಫೌಂಡೇಶನ್ (ರಿ) ಜೊತೆ ಕೈಜೋಡಿಸಿ ಒಳ್ಳೆ ಸಂದೇಶ ನೀಡಿದ್ದಾರೆ, ಇದು ಹೀಗೆ ಮುಂದುವರೆಯಲಿ ಎಂದರು.

ಹಸಿರು ಫೌಂಡೇಶನ್ (ರಿ) ಅಧ್ಯಕ್ಷ ರತನ್ ಊರುಬಗೆ ಮಾತಾಡಿ,  ನಮ್ಮ ಹಸಿರು ಫೌಂಡೇಶನ್ (ರಿ)  ಸಮಾಜ ಸೇವೆ ಮಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಲ್ಲರೂ ಕೈ ಜೋಡಿಸಿದರೆ ಏನು ಬೇಕಾದರೂ ಸಾಧಿಸಬಹುದು ನಮ್ಮಟ್ರಸ್ಟ್ ನಿಂದ ನಿರಂತರವಾಗಿ  ಸಾಮಾಜಿಕ ಕೆಲಸಗಳು ನಡೆಯುತ್ತಿರುತ್ತವೆ ಎಂದರು.

ಕಾರ್ಯಕ್ರಮದಲ್ಲಿ  ಡಿ ಎಸ್ ಬಿ ಜಿ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಹಸಿರು ಫೌಂಡೇಶನ್ (ರಿ) ಸ್ವಯಂ ಸೇವಕರು ಹಾಜರಿದ್ದರು.

ಈ ಸಂದರ್ಭದಲ್ಲಿ ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಗೋಪಾಲ್, ಮುಖಂಡರಾದ ಸಂಜಯ್ ಕೊಟ್ಟಗೆಹಾರ, ಪ್ರಭಾಕರ್ ಬಿನ್ನಡಿ, ಗ್ರಾಮ ಪಂಚಾಯಿತಿ ಸದಸ್ಯ ಮಧು ಕುಮಾರ್ ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version