1:01 PM Thursday 16 - October 2025

ಸಿಎಂ ಇಬ್ರಾಹಿಂ ಯಾಕೆ ಸಿಎಂ ಆಗಬಾರದು ಅವರೇನು ಅಸ್ಪೃಷ್ಯರೇ?: ನಾಲಿಗೆ ಹರಿಯಬಿಟ್ಟ ಕುಮಾರಸ್ವಾಮಿ

kumaraswamy
27/11/2022

ಬೆಂಗಳೂರು: ಸಿಎಂ ಇಬ್ರಾಹಿಂ ಯಾಕೆ ಸಿಎಂ ಆಗಬಾರದು, ಅವರೇನು ಅಸ್ಪೃಶ್ಯರೇ ?ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಾಲಿಗೆ ಹರಿಯಬಿಟ್ಟಿದ್ದು, ಅಸ್ಪೃಶ್ಯತೆಯನ್ನು ಸಮರ್ಥಿಸಿದಂತಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆಯ ವೇಳೆ ಖಾಸಗಿ ಇಂಗ್ಲಿಷ್ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಇಬ್ರಾಹಿಂ ಅವರನ್ನು ಜೆಡಿಎಸ್ ಮುಖ್ಯಮಂತ್ರಿ ಮಾಡುತ್ತದೆಯೇ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ, ವೈ ನಾಟ್ ಕಾನ್ಟ್ ಸಿಎಂ ಇಬ್ರಾಹಿಂ ಬಿಕಮ್ ಚೀಫ್ ಮಿನಿಸ್ಟರ್? ಹಿ ಇಸ್ ನಾಟ್ ಅನ್ ಟಚೇಬಲ್ ಮ್ಯಾನ್ ಎಂದು ಹೇಳಿಕೆ ನೀಡಿದ್ದಾರೆ.

ಮಾಜಿ ಸಿಎಂ ಆಗಿರುವ ಹೆಚ್.ಡಿ.ಕುಮಾರಸ್ವಾ,ಮಿ ಅವರಿಂದ ಇಂತಹ ಹೇಳಿಕೆ ಯಾರು ಕೂಡ ಊಹಿಸಲು ಸಾಧ್ಯವಿಲ್ಲ, ಅಸ್ಪೃಶ್ಯರು ಅಧಿಕಾರ ಹೊಂದಲು ಅರ್ಹರಲ್ಲ ಎನ್ನುವ ಅರ್ಥದಲ್ಲಿ ಕುಮಾರಸ್ವಾಮಿ ಅವರು ಮಾತನಾಡಿರುವುದು ಎಷ್ಟು ಸರಿ ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ(BSP)ಯನ್ನು ಬಳಸಿಕೊಂಡ ಜೆಡಿಎಸ್ ಇಂದು,  ಯಾರ ಬಗ್ಗೆ ಕೇವಲವಾದ ಹೇಳಿಕೆ ನೀಡಿದ್ದೀರೋ ಅವರೇ ಒತ್ತಿದ ವೋಟಿನಿಂದಾಗಿ ಕುಮಾರಸ್ವಾಮಿ ಅಧಿಕಾರ ಅನುಭವಿಸಿದರು. ವೋಟು ಹಾಕಿದ ಬಡ ಜನರನ್ನೂ ಮರೆತು ಬಿಟ್ಟರು. ಇದೀಗ ಮುಂದಿನ ಚುನಾವಣೆಯಲ್ಲಿ ಅಧಿಕ ಸ್ಥಾನ ಗೆಲ್ಲಲು ಮುಸ್ಲಿಮರನ್ನು ಓಲೈಕೆ ಮಾಡುತ್ತಿದ್ದಾರೆ. ಇದೀಗ ಅಸ್ಪೃಷ್ಯತೆಯ ಕುರಿತು ತಮ್ಮ ಮನಸ್ಸಿನೊಳಗೆ ಇರುವ ಮಾತುಗಳನ್ನೇ ಅವರು ಕಾರಿದ್ದಾರೆ ಅನ್ನೋ ಆಕ್ರೋಶದ ಮಾತುಗಳು ಕೇಳಿ ಬಂದಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version