ಫೇಸ್ ಮಾಸ್ಕ್ ಮತ್ತು ಟವಲ್ ಧರಿಸಿ ಜೂಮ್ ಮೀಟಿಂಗ್ ಗೆ ಬಂದ ಉದ್ಯೋಗಿ: ಯುವತಿಯ ಅವತಾರ ಕಂಡು ಬಾಸ್ ನೀಡಿದ ರಿಪ್ಲೈಗೆ ಎಲ್ಲರೂ ಶಾಕ್!
ನವದೆಹಲಿ: ಇತ್ತೀಚಿನ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ (WFH) ಸಂಸ್ಕೃತಿ ಹೆಚ್ಚಾದಂತೆ, ಆನ್‌ಲೈನ್ ಮೀಟಿಂಗ್‌ಗಳಲ್ಲಿ ನಡೆಯುವ ವಿಚಿತ್ರ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ಒಂದು ತಮಾಷೆಯ ಘಟನೆ ನಡೆದಿದ್ದು, ಜೆನ್-ಝಿ (Gen Z) ಉದ್ಯೋಗಿಯೊಬ್ಬಳು ಮುಖಕ್ಕೆ ಫೇಸ್ ಮಾಸ್ಕ್ ಹಚ್ಚಿಕೊಂಡು, ತಲೆಗೆ ಟವಲ್ ಸುತ್ತಿಕೊಂಡು ಜೂಮ್ ಮೀಟಿಂಗ್ ಗೆ ಹಾಜರಾಗಿದ್ದಾಳೆ!
‘ರಿಮೋಟ್‌ಸ್ಟಾರ್’ (RemoteStar) ಕಂಪನಿಯ ಸಿಇಒ ನರೇಶ್ ಹರ್ವಾನಿ ಅವರು ಕಳೆದ ಶುಕ್ರವಾರ ತಮ್ಮ ತಂಡದೊಂದಿಗೆ ಸಾಮಾನ್ಯ ಆನ್‌ಲೈನ್ ಮೀಟಿಂಗ್ ನಡೆಸುತ್ತಿದ್ದರು. ಈ ವೇಳೆ 21 ವರ್ಷದ ಉದ್ಯೋಗಿ ವರ್ತಿಕಾ ಬಿಷ್ಟ್ ಎಂಬಾಕೆ ಕ್ಯಾಮೆರಾ ಆನ್ ಮಾಡಿದಾಗ ಎಲ್ಲರೂ ಒಂದು ಕ್ಷಣ ದಂಗಾಗಿದ್ದಾರೆ. ಆಕೆ ಹಸಿರು ಬಣ್ಣದ ‘ನೀಮ್’ ಫೇಸ್ ಪ್ಯಾಕ್ ಹಚ್ಚಿಕೊಂಡು, ಸ್ನಾನದ ನಂತರ ಸುತ್ತಿಕೊಳ್ಳುವ ಟವಲ್‌ನಲ್ಲಿ ಕಾಣಿಸಿಕೊಂಡಿದ್ದಳು.
ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಬಾಸ್‌ಗಳು ಗದರುವುದುಂಟು. ಆದರೆ ಸಿಇಒ ನರೇಶ್ ಹರ್ವಾನಿ ಅವರು ಮಾತ್ರ ಯಾವುದೇ ಕೋಪ ಮಾಡಿಕೊಳ್ಳದೆ ಶಾಂತರಾಗಿದ್ದರು. “ಅದು ಯಾವ ಫೇಸ್ ಪ್ಯಾಕ್?” ಎಂದು ಅವರು ಕುತೂಹಲದಿಂದ ಕೇಳಿದರು. ಅದಕ್ಕೆ ವರ್ತಿಕಾ ಬಹಳ ಕೂಲ್ ಆಗಿ “ಇದು ಬೇವಿನ ಫೇಸ್ ಪ್ಯಾಕ್, ನೀವು ಕೂಡ ಒಮ್ಮೆ ಟ್ರೈ ಮಾಡಿ” ಎಂದು ಉತ್ತರಿಸಿದ್ದಾಳೆ. ಇದನ್ನು ಕೇಳಿ ಮೀಟಿಂಗ್‌ನಲ್ಲಿದ್ದ ಉಳಿದ ಉದ್ಯೋಗಿಗಳು ನಗು ತಡೆಯಲಾಗದೆ ಪರದಾಡಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆದ ನಂತರ, ಕಂಪನಿಯು ಇದೊಂದು ‘ಪ್ಲಾನ್ಡ್ ಪ್ರಾಂಕ್’ ಎಂದು ಸ್ಪಷ್ಟಪಡಿಸಿದೆ. ಕಂಪನಿಯಲ್ಲಿ ಸ್ನೇಹಪರ ವಾತಾವರಣ ಇರುವುದರಿಂದ ಉದ್ಯೋಗಿಗಳು ಈ ರೀತಿ ತಮಾಷೆ ಮಾಡಿದ್ದರು. ನಂತರ ಸಿಇಒ ಹರ್ವಾನಿ ಅವರು ಪ್ರತಿಕ್ರಿಯಿಸಿ, “ಉದ್ಯೋಗಿಗಳು ಕೆಲಸದ ಜೊತೆಗೆ ಇಂತಹ ತಮಾಷೆಯ ಕ್ಷಣಗಳನ್ನು ಅನುಭವಿಸುವುದರಲ್ಲಿ ತಪ್ಪಿಲ್ಲ. ಇದರಿಂದ ತಂಡದ ನಡುವೆ ಉತ್ತಮ ಬಾಂಧವ್ಯ ಬೆಳೆಯುತ್ತದೆ” ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























