RSS ವಿಷಯ ದಲಿತ ಮನುಷ್ಯನಿಗೆ ಏಕೆ ಬೇಕು?: ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಂಸದ ರಮೇಶ್ ಜಿಗಜಿಣಗಿ ಕಿಡಿ
ವಿಜಯಪುರ: RSS ತಂಟೆಗೆ ಬಂದವರು ಇದುವರೆಗೆ ಯಾರೂ ಉಳಿದಿಲ್ಲ. ಹಾಗಿರುವಾಗ RSS ವಿಷಯ ದಲಿತ ಮನುಷ್ಯನಿಗೆ ಏಕೆ ಬೇಕು? ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಬುಧವಾರ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್ (RSS) ಕುರಿತು ಪ್ರಿಯಾಂಕ್ ಖರ್ಗೆ ನೀಡುತ್ತಿರುವ ಹೇಳಿಕೆಗಳು ಬಹಳ ಕೆಟ್ಟದಾಗಿ ಕಾಣಿಸುತ್ತವೆ. RSS ನೋಂದಣಿ ಮಾಡಿಸಿ ನೀವೇನು ಮಾಡುತ್ತೀರಿ? ಸಚಿವರಾಗಿ ಮಾಡಬೇಕಾದ ಕೆಲಸ ಇದಲ್ಲ. RSS ಎಂದರೇನು ಎಂಬುದನ್ನು ಜನರನ್ನು ಕೇಳಿದರೆ ಅವರೇ ಹೇಳುತ್ತಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ರಾಜಕಾರಣದ ಕುರಿತು ಪ್ರಸ್ತಾಪಿಸಿದ ಜಿಗಜಿಣಗಿ, “ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ನಲ್ಲಿ ಸುದೀರ್ಘ ಕಾಲ ದುಡಿದಿದ್ದಾರೆ ಎಂಬ ಕಾರಣಕ್ಕೆ ಇವನಿಗೆ (ಪ್ರಿಯಾಂಕ್ ಖರ್ಗೆ) ಸಚಿವ ಸ್ಥಾನ ನೀಡಿದ್ದಾರೆ. ಅವನಿಗೆ ತಲೆ ಇಲ್ಲ. ಸುಮ್ಮನೆ ಕೊಟ್ಟಿರುವ ಸಚಿವ ಖಾತೆಯಲ್ಲಿ ಸರಿಯಾಗಿ ಕೆಲಸ ಮಾಡಿ ಹೆಸರು ಗಳಿಸಲಿ” ಎಂದು ಕಿಡಿಕಾರಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























