ಖಾಲಿ ಲಿಫ್ಟ್ ಕೋಣೆಗೆ ಕಾಲಿಟ್ಟ ಯುವಕ 11ನೇ ಮಹಡಿಯಿಂದ ಬಿದ್ದು ಸಾವು
ಜೈಪುರ: ಲಿಫ್ಟ್ ನಲ್ಲಿ 11ನೇ ಮಹಡಿಯಿಂದ ಕೆಳಗೆ ಹೋಗಲು ಪ್ರಯತ್ನಿಸಿದ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಜೈಪುರದ ಅಜ್ಮೀರ್ ರಸ್ತೆಯಲ್ಲಿರುವ ಮೈ ಹವೇಲಿ ಅಪಾರ್ಟ್ ಮೆಂಟ್ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕುಶಾಗ್ರಾ ಮಿಶ್ರಾ ದುರಂತವಾಗಿ ಸಾವಿಗೀಡಾದ ಯುವಕನಾಗಿದ್ದು, ಈತ ಮಣಿಪಾಲ ವಿಶ್ವವಿದ್ಯಾಲಯದಲ್ಲಿ 2ನೇ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ.
ಅಜ್ಮೀರ್ ರಸ್ತೆಯಲ್ಲಿರುವ ಬಾಡಿಗೆ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದ ಕುಶಾಗ್ರಾ ಮಿಶ್ರಾ ಭಾನುವಾರ ರಾತ್ರಿ ಲಿಫ್ಟ್ ನಲ್ಲಿ ಹೋಗಲು ಲಿಫ್ಟ್ ಗುಂಡಿ ಒತ್ತಿದ್ದಾರೆ. ಈ ವೇಳೆ ಲಿಫ್ಟ್ ನ ಬಾಗಿಲು ತೆರೆದುಕೊಂಡಿದೆ. ಆದರೆ ಒಳಗಡೆ ಲಿಫ್ಟ್ ಇರಲಿಲ್ಲ, ಇದನ್ನು ಗಮನಿಸದೇ ಖಾಲಿ ಲಿಫ್ಟ್ ಕೋಣೆ ಕಾಲಿಟ್ಟ ಮಿಶ್ರಾ 11ನೇ ಮಹಡಿಯಿಂದ ಕೆಳಗೆ ಬಿದ್ದು ದುರಂತ ಸಾವಿಗೀಡಾಗಿದ್ದಾನೆ.
ಬಿಲ್ಡರ್ ನ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆಸಿದೆ ಎಂದು ಅಪಾರ್ಟ್ ಮೆಂಟ್ ನಲ್ಲಿದ್ದ ನಿವಾಸಿಗಳು ಆರೋಪಿಸಿ ದೂರು ನೀಡಿದ್ದು, ಹಲವು ಬಾರಿ ಲಿಫ್ಟ್ ಸರಿಪಡಿಸುವಂತೆ ಹಾಗೂ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ಮನವಿ ಮಾಡಿದರೂ ಬಿಲ್ಡರ್ ನಿರ್ಲಕ್ಷ್ಯ ವಹಿಸಿದ್ದಾನೆ. ಇದೀಗ ಬಿಲ್ಡರ್ ನ ನಿರ್ಲಕ್ಷ್ಯದಿಂದಾಗಿ ಅನ್ಯಾಯವಾಗಿ ಯುವಕನ ಪ್ರಾಣವೇ ಹೊರಟು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























