ಲೋಕಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಮೊದಲ ಪಟ್ಟಿಯಲ್ಲಿ ರಾಹುಲ್ ಗಾಂಧಿ, ಭೂಪೇಶ್ ಬಘೇಲ್ ಹೆಸರು ಪ್ರಕಟ

2024 ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಕಾಂಗ್ರೆಸ್ ನ ಆರಂಭಿಕ ಪಟ್ಟಿಯಲ್ಲಿ ಪಕ್ಷವು ಪ್ರಸ್ತುತ ಸಂಸದೀಯ ಕ್ಷೇತ್ರವಾದ ವಯನಾಡ್ ನಿಂದ ರಾಹುಲ್ ಗಾಂಧಿ ಮತ್ತು ತಿರುವನಂತಪುರಂನಿಂದ ಶಶಿ ತರೂರ್ ಸೇರಿದಂತೆ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಛತ್ತೀಸ್ ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಈ ಬಾರಿ ಛತ್ತೀಸ್ ಗಢದ ರಾಜನಂದಗಾಂವ್ ಸಂಸದೀಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳಿಂದ 24 ಅಭ್ಯರ್ಥಿಗಳನ್ನು ಮತ್ತು ಸಾಮಾನ್ಯ ವರ್ಗದಿಂದ 15 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಛತ್ತೀಸ್ ಗಢದ ಕೊರ್ಬಾದ ಜೋತ್ಸನಾ ಮಹಂತ್ ಮತ್ತು ಕರ್ನಾಟಕದ ಶಿವಮೊಗ್ಗದ ಗೀತಾ ಶಿವರಾಜ್ ಕುಮಾರ್ ಸೇರಿದಂತೆ 5 ಮಹಿಳಾ ಅಭ್ಯರ್ಥಿಗಳ ಹೆಸರನ್ನು ಪಟ್ಟಿಯಲ್ಲಿ ಹೆಸರಿಸಲಾಗಿದೆ.
ಕೇರಳ, ಕರ್ನಾಟಕ, ತೆಲಂಗಾಣ, ಛತ್ತೀಸ್ ಗಢ, ಅಸ್ಸಾಂ, ಮೇಘಾಲಯದಿಂದ ಮತ್ತು ಲಕ್ಷದ್ವೀಪ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾದಿಂದ ತಲಾ ಒಬ್ಬ ಅಭ್ಯರ್ಥಿಯನ್ನು ಪಕ್ಷ ಹೆಸರಿಸಿದೆ.
ಕೇರಳದ ಕಾಂಗ್ರೆಸ್ ಅಭ್ಯರ್ಥಿಗಳು:
1. ಕಾಸರಗೋಡು – ರಾಜ್‌ಮೋಹನ್ ಉನ್ನಿಥಾನ್
2. ಕಣ್ಣೂರು – ಕೆ.ಸುಧಾಕರನ್
3. ವಡಕರ – ಶಫಿ ಪರಂಬಿಲ್
4. ವಯನಾಡ್ – ರಾಹುಲ್ ಗಾಂಧಿ
5. ಕೋಯಿಕ್ಕೋಡ್ – ಎಂ.ಕೆ.ರಾಘವನ್
6. ಪಾಲಕ್ಕಾಡ್ – ವಿ.ಕೆ.ಶ್ರೀಕಂದನ್
7. ಅಲತೂರ್ (ಎಸ್ಸಿ) – ಶ್ರೀಮತಿ ರೆಮ್ಯಾ ಹರಿದಾಸ್
8. ತ್ರಿಶೂರ್ – ಕೆ ಮುರಳೀಧರನ್
9. ಚಲಕುಡಿ – ಬೆನ್ನಿ ಬಹನ್ನಾನ್
10. ಎರ್ನಾಕುಲಂ – ಹಿಬಿ ಈಡನ್
11. ಡುಕ್ಕಿ – ಡೀನ್ ಕುರಿಯಾಕೋಸ್
12. ಮಾವೆಲಿಕ್ಕರ (ಎಸ್ಸಿ) – ಕೋಡಿಕುನ್ನಿಲ್ ಸುರೇಶ್
13. ಪಥನಂತಿಟ್ಟ – ಆಂಟೋ ಆಂಟನಿ
14. ಅಟ್ಟಿಂಗಲ್ – ಅಡೂರ್ ಪ್ರಕಾಶ್
15. ತಿರುವನಂತಪುರಂ – ಶಶಿ ತರೂರ್
ಕರ್ನಾಟಕದ ಕಾಂಗ್ರೆಸ್ ಅಭ್ಯರ್ಥಿಗಳು:
16. ಬಿಜಾಪುರ (ಎಸ್ಸಿ) – ಎಚ್.ಆರ್.ಅಲ್ಗೂರ್ (ರಾಜು)
17. ಶಿವಮೊಗ್ಗ – ಗೀತಾ ಶಿವರಾಜ್ ಕುಮಾರ್
18. ಹಾಸನ – ಎಂ.ಶ್ರೇಯಸ್ ಪಟೇಲ್
19. ತುಮಕೂರು – ಎಸ್.ಪಿ.ಮುದ್ದಹನುಮೇಗೌಡ
20. ಮಂಡ್ಯ – ವೆಂಕಟರಾಮೇಗೌಡ (ಸ್ಟಾರ್ ಚಂದ್ರು)
21. ಬೆಂಗಳೂರು ಗ್ರಾಮಾಂತರ – ಡಿ.ಕೆ.ಸುರೇಶ್
ಛತ್ತೀಸ್ ಗಢದ ಕಾಂಗ್ರೆಸ್ ಅಭ್ಯರ್ಥಿಗಳು
22. ಜಂಗೀರ್ – ಚಂಪಾ (ಎಸ್ಸಿ) – ಡಾ.ಶಿವಕುಮಾರ್ ದಹರಿಯಾ
23. ಕೊರ್ಬಾ – ಶ್ರೀಮತಿ ಜ್ಯೋತ್ಸನಾ ಮಹಂತ್
24. ರಾಜನಂದಗಾಂವ್ – ಭೂಪೇಶ್ ಬಘೇಲ್
25. ದುರ್ಗ್ – ರಾಜೇಂದ್ರ ಸಾಹು
26. ರಾಯ್ಪುರ – ವಿಕಾಸ್ ಉಪಾಧ್ಯಾಯ
27. ಮಹಾಸಮುಂದ್ – ತರ್ಧ್ವಜ್ ಸಾಹು
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth