ಚಳಿಗಾಲದಲ್ಲಿ ಚರ್ಮದ ಒಣ ಬಿಳಿ ಕಲೆಗಳನ್ನು ತಡೆಯಲು ಸಲಹೆಗಳು
ಚಳಿಗಾಲದ ತಂಪಾದ ಗಾಳಿ ಮತ್ತು ಒಳಾಂಗಣದ ಬಿಸಿ ಗಾಳಿ ಎರಡೂ ಚರ್ಮದ ತೇವಾಂಶವನ್ನು ಹೀರಿಬಿಡುವುದರಿಂದ, ಹಲವರು ಒಣಗಿ, ತುರಿಕೆಯುಂಟುಮಾಡುವ ಬಿಳಿ ತೇಪೆಗಳ ಸಮಸ್ಯೆಯನ್ನು ಎದುರಿಸುತ್ತಾರೆ. ಕಠಿಣ ಚಳಿಗಾಲದಲ್ಲಿಯೂ ಚರ್ಮವನ್ನು ಮೃದುವಾಗಿ ಮತ್ತು ಆರೋಗ್ಯಕರವಾಗಿ ಇರಿಸಿಕೊಳ್ಳಲು ಚರ್ಮರೋಗ ತಜ್ಞರು ಕೆಲವೊಂದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ. ಸರಿಯಾದ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಶುಷ್ಕತೆಯನ್ನು ಸಂಪೂರ್ಣವಾಗಿ ನಿಭಾಯಿಸಬಹುದು ಎಂದು ಅವರು ಹೇಳುತ್ತಾರೆ.
ಮಾಯಿಶ್ಚರೈಸರ್ ಆಯ್ಕೆ ಮತ್ತು ಸ್ನಾನದ ಅಭ್ಯಾಸ:
ಚಳಿಗಾಲದಲ್ಲಿ ಹಗುರವಾದ ಲೋಷನ್ ಗಳನ್ನು ಬಳಸುವ ಬದಲು ದಪ್ಪವಿರುವ, ಕ್ರೀಮ್ ರೂಪದ ಮಾಯಿಶ್ಚರೈಸರ್ ಗಳನ್ನು ಬಳಸುವುದು ಮುಖ್ಯ. ಶಿಯಾ ಬೆಣ್ಣೆ, ಸೆರಾಮೈಡ್ ಗಳು, ಗ್ಲಿಸರಿನ್, ಹೈಲುರಾನಿಕ್ ಆಮ್ಲ ಮತ್ತು ಸ್ಕ್ವಾಲೇನ್ ನಂತಹ ಪದಾರ್ಥಗಳನ್ನು ಹೊಂದಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ. ಇವು ತೇವಾಂಶವನ್ನು ಹಿಡಿದಿಟ್ಟುಕೊಂಡು ಚರ್ಮದ ತಡೆಗೋಡೆಯನ್ನು ಬಲಪಡಿಸುತ್ತವೆ.
ಅತ್ಯಂತ ಮುಖ್ಯವಾದ ಸಲಹೆಯೆಂದರೆ, ಸ್ನಾನದಿಂದ ಹೊರಬಂದ ನಂತರ ಎರಡು–ಮೂರು ನಿಮಿಷಗಳ ಒಳಗೆ, ಚರ್ಮವು ಒದ್ದೆಯಾಗಿರುವಾಗಲೇ ಮಾಯಿಶ್ಚರೈಸರ್ ಹಚ್ಚುವುದು. ಇದು ಈಗಾಗಲೇ ಇರುವ ತೇವಾಂಶವನ್ನು ಹಿಡಿದಿಟ್ಟುಕೊಂಡು ಒಣ ಕಲೆಗಳು ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ. ಬಿಸಿ ನೀರಿನ ಸ್ನಾನದಿಂದ ದೂರವಿರಿ. ಬಿಸಿನೀರು ನಿಮ್ಮ ಚರ್ಮದ ನೈಸರ್ಗಿಕ ಎಣ್ಣೆಯನ್ನು ತೆಗೆದುಹಾಕುತ್ತದೆ. ಬದಲಾಗಿ, ಉಗುರುಬೆಚ್ಚಗಿನ ನೀರನ್ನು ಬಳಸಿ ಮತ್ತು ಸ್ನಾನವನ್ನು 10 ರಿಂದ 12 ನಿಮಿಷಗಳಿಗೆ ಸೀಮಿತಗೊಳಿಸಿ. ಕ್ಲೆನ್ಸರ್ ಗಳ ವಿಚಾರದಲ್ಲಿ, ನೊರೆ ಬರುವ ಬಲವಾದ ಸೋಪ್ ಗಳನ್ನು ತಪ್ಪಿಸಿ. ಸೌಮ್ಯವಾದ, ಸುಗಂಧ ರಹಿತ ಮತ್ತು ಕೆನೆಭರಿತ ಕ್ಲೆನ್ಸರ್ ಗಳನ್ನು ಬಳಸಿ.
ಪರಿಸರದಿಂದ ರಕ್ಷಣೆ:
ಶೀತ ಗಾಳಿಯಿಂದಾಗಿ ಚರ್ಮವು ತೇವಾಂಶವನ್ನು ಕಳೆದುಕೊಳ್ಳುತ್ತದೆ. ಹಾಗಾಗಿ, ಹೊರಗೆ ಹೋಗುವಾಗ ಸ್ಕಾರ್ಫ್ ಅಥವಾ ಮಾಸ್ಕ್ ಬಳಸುವುದು ಸಹಾಯಕ. ಇದರ ಜೊತೆಗೆ, ಮನೆಯ ಒಳಗೆ ತಾಪನವನ್ನು ಬಳಸುವುದರಿಂದ ತೇವಾಂಶದ ಮಟ್ಟ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಇದನ್ನು ನಿಭಾಯಿಸಲು ಮಲಗುವ ಕೋಣೆಯಲ್ಲಿ ಆರ್ದ್ರಕ (Humidifier) ವನ್ನು ಬಳಸುವುದು ಚರ್ಮಕ್ಕೆ, ತುಟಿಗಳಿಗೆ ಮತ್ತು ಮೂಗಿನ ಹೊಳ್ಳೆಗಳಿಗೆ ತೇವಾಂಶವನ್ನು ಒದಗಿಸಲು ಸಹಾಯ ಮಾಡುತ್ತದೆ ಈ ಸರಳ ಬದಲಾವಣೆಗಳ ಮೂಲಕ ಚಳಿಗಾಲದ ಚರ್ಮದ ಸಮಸ್ಯೆಗಳನ್ನು ದೂರ ಮಾಡಬಹುದು.
(Disclaimer: ಆನ್ ಲೈನ್ ಮಾಹಿತಿಗಳ ಆಧಾರದಲ್ಲಿ ಈ ಲೇಖನ ಬರೆಯಲಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಗಳನ್ನು ಅನುಸರಿಸಲು ವೈದ್ಯರ ಸಲಹೆ ಅತ್ಯಗತ್ಯ)
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























