ಬಾಳೆದಿಂಡಿನಲ್ಲಿ ಇಷ್ಟೊಂದು ಶಕ್ತಿ ಇದೆಯಾ? ಆರೋಗ್ಯಕ್ಕೆ ಇದು ಎಷ್ಟು ಉತ್ತಮ!

ಬಾಳೆ ಹಣ್ಣು ಆರೋಗ್ಯಕ್ಕೆ ಉತ್ತಮ. ಅದರಂತೆಯೇ ಬಾಳೆದಿಂಡು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಬಾಳೆ ದಿಂಡಿನಲ್ಲಿ ಔಷಧೀಯ ಗುಣಗಳಿದ್ದು, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಬಾಳೆದಿಂಡು ರುಚಿಕರ ಮಾತ್ರವಲ್ಲ ಪೌಷ್ಠಿಕ ಆಹಾರವೂ ಆಗಿದೆ. ಅನೇಕ ಮಂದಿ ಬಾಳೆದಿಂಡಿನ ಪ್ರಯೋಜನಗಳನ್ನು ಅರಿತಿದ್ದಾರೆ. ಬಾಳೆ ದಿಂಡಿನಲ್ಲಿ ನಾರಿನಾಂಶ ಅಧಿಕವಾಗಿದೆ. ಕ್ಯಾಲೋರಿಗಳು ತುಂಬಾ ಕಡಿಮೆಯಿದೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ತಾಮ್ರದ ಕಬ್ಬಿಣದಂತಹ ಇತರ ಖನಿಜಗಳನ್ನು ಮತ್ತು ವಿಟಮಿನ್ ಸಿ ಮತ್ತು ಬಿ 6 ನಂತಹ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಬಾಳೆದಿಂಡಿನಲ್ಲಿ ಕಬ್ಬಿಣಾಂಶ ಹೇರಳವಾಗಿರುವುದರಿಂದ ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಯನ್ನು ಸುಧಾರಿಸಲು ಬಾಳೆದಿಂಡು ಸಹಾಯ ಮಾಡುತ್ತದೆಯಲ್ಲದೇ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಬಾಳೆದಿಂಡು ಜೀರ್ಣಕ್ರಿಯೆ ಮತ್ತು ಮಲ ಬದ್ಧತೆ ನಿವಾರಣೆಗೆ ಸಹಾಯಕವಾಗಿದೆ.
ಬಾಳೆ ದಿಂಡು ಮೂತ್ರಪಿಂಡದಿಂದ ಕಲ್ಲುಗಳನ್ನು ನೈಸರ್ಗಿಕವಾಗಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ವಾರಕ್ಕೆ ಒಂದು ಬಾರಿ ಬಾಳೆದಿಂಡಿನ ಖಾದ್ಯ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಬಾಳೆ ದಿಂಡು ಉಪಯುಕ್ತವಾಗಿವೆ. ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗದಂತೆ ತಡೆಗಟ್ಟುತ್ತದೆ
ಆಮ್ಲೀಯತೆಯ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಬಾಳೆದಿಂಡಿನ ಜ್ಯೂಸ್ ಅನ್ನು ಕುಡಿಯಬೇಕು. ಇದು ದೇಹದಲ್ಲಿನ ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಎದೆಯುರಿ, ಅಸ್ವಸ್ಥತೆ ಮತ್ತು ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ತೂಕ ಇಳಿಕೆಗೂ ಬಾಳೆದಿಂದಿನ ಖಾದ್ಯಗಳು ಸಹಾಯಕವಾಗಿವೆ. ಪಿತ್ತಕೋಶವನ್ನು ಸ್ವಚ್ಛವಾಗಿಡಲು ಬಾಳೆದಿಂಡಿನ ಖಾದ್ಯ ಸಹಾಯಕವಾಗಿದೆ.
(Disclaimer: ಈ ಲೇಖನವು ಅಂತರ್ಜಾಲದ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ಇದು ಮಹಾನಾಯಕದ ಮಾಹಿತಿಗಳಲ್ಲ)
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD