9:37 PM Tuesday 9 - September 2025

ಬಿಜೆಪಿ ಎಷ್ಟೇ ಹಣ ಸುರಿದರೂ ಕಾಂಗ್ರೆಸ್ ಗೆ ಬಹುಮತ ಖಚಿತ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಶ್ವಾಸ

dk shivakumar
12/05/2023

ಬೆಂಗಳೂರು: ನನಗೆ ಎಕ್ಸಿಟ್ ಪೋಲ್ ಮೇಲೆ ನಂಬಿಕೆ ಇಲ್ಲ. ಕಾಂಗ್ರೆಸ್ 140 ಸ್ಥಾನಗಳನ್ನ ಗಳಿಸಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ಎಕ್ಸಿಟ್ ಪೋಲ್ ನಮ್ಮ ಬಗ್ಗೆ ವಿಶ್ವಾಸ ತೋರಿಸಿದ್ದಕ್ಕೆ ಧನ್ಯವಾದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಗೆ ಬಹುಮತ ಬರುತ್ತದೆ ಇದು ನನ್ನ ಅಚಲ ನಂಬಿಕೆ. ಚುನಾವಣೇ ವೇಳೆ ಬಿಜೆಪಿಯವರು ಎಷ್ಟೇ ಹಣ ಸುರಿದಿರಬಹುದು. ಬಿಜೆಪಿ ಎಷ್ಟೇ ನಾಯಕರು ಬಂದು ಪ್ರಚಾರ ಮಾಡಿರಬಹುದು ಆದ್ರೆ ಕಾಂಗ್ರೆಸ್ ಗೆ ಬಹುಮತ ಬರುತ್ತದೆ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ  ಗುಂಡೂರಾವ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಾಗ ನನಗೆ ಜವಾಬ್ದಾರಿ ಕೊಟ್ಟರು. ಈಗ ಹಿರಿಯರು ಕಿರಿಯರು ಎಲ್ಲರೂ ನನಗೆ ಸಹಕಾರ ನೀಡುತ್ತಿದ್ದಾರೆ  ನಾವು ಉತ್ತಮವಾದ ಸರ್ಕಾರ ಕೊಡುತ್ತೇವೆ ಎಂದರು.

ಹಾಗೆಯೇ ಕಪ್ ನಮ್ಮದೇ ಎಂದು ಹೇಳಿದ ಆರ್.ಅಶೋಕ್ ಗೆ ತಿರುಗೇಟು ನೀಡಿದ ಡಿ.ಕೆ ಶಿವಕುಮಾರ್,  ಎಷ್ಟೇ ನಂಬರ್ ಬಂದರೂ ನಾವು ಸರ್ಕಾರ ಮಾಡುತ್ತೇವೆ ಅಂತಿದ್ದಾರಲ್ಲ ಅಶೋಕ್ ಕಪ್ ಅವರೇ ಇಟ್ಟುಕೊಳ್ಳಲಿ. ರೆಸಾರ್ಟ್ ರಾಜಕಾರಣ ಮುಗಿದು ಹೋಗಿದೆ.  ಎಲ್ಲಾ ಪಕ್ಷದವರು ಅವರವರ ಶಾಸಕರನ್ನ ಹಿಡಿದಿಟ್ಟುಕೊಳ್ತಾರೆ ಯಾವ ಅಧಿಕಾರ ಹಂಚಿಕೆಯ ಮಾತೂ ಇಲ್ಲ.  ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ರಾಹುಲ್ ಗಾಂಧಿ ಹೇಳಿದಂತೆ ನಾವು ಕೇಳುತ್ತೇವೆ ಎಂದು ಡಿ.ಕೆ ಶಿವಕುಮಾರ್ ನುಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version