ಚರ್ಚಾಸ್ಪದ ಕನ್ವರ್ ಯಾತ್ರೆ ಅಂತ್ಯ: ಅನೇಕ ಹಿಂಸಾತ್ಮಕ ಪ್ರಕರಣಗಳು ದಾಖಲು

06/08/2024

ಎರಡು ವಾರಗಳ ತನಕ ನಡೆದ ಉತ್ತರ ಪ್ರದೇಶದ ಕನ್ವರ್ ಯಾತ್ರೆ ಕೊನೆಗೊಂಡಿದೆ. ಆದರೆ ಈ ಯಾತ್ರೆ ದಾರಿಯುದ್ಧಕ್ಕೂ ಮಾಡಿರುವ ಅನಾಹುತಗಳು ಈಗ ಚರ್ಚೆಯಲ್ಲಿವೆ. ಇಬ್ಬರ ಹತ್ಯೆ, ಪೊಲೀಸ್ ಜೀಪ್ ಸಹಿತ ಹಲವು ವಾಹನಗಳಿಗೆ ಹಾನಿ, ವಿಶೇಷ ಚೇತನ ವ್ಯಕ್ತಿ ಸೇರಿದಂತೆ ಅನೇಕರಿಗೆ ಥಳಿತ,, ಅಂಗಡಿಗಳಿಗೆ ಹಾನಿ, ಹೀಗೆ ಧಾರ್ಮಿಕ ಯಾತ್ರೆಯೊಂದು ಅದಕ್ಕಲ್ಲದ ಕಾರಣಕ್ಕಾಗಿ ಸುದ್ದಿಯಾಗಿ ಸಮಾಪ್ತಿಯಾಗಿದೆ.

ಒಟ್ಟು 20ರಷ್ಟು ಆಕ್ರಮಣ ಪ್ರಕರಣಗಳಲ್ಲಿ 15 ಉತ್ತರ ಪ್ರದೇಶದಲ್ಲಿ ನಡೆದಿದ್ದರೆ ಎರಡು ಉತ್ತರಖಂಡದಲ್ಲಿ, ಎರಡು ಹರಿದ್ವಾರದಲ್ಲಿ ಮತ್ತು ಒಂದು ರಾಜಸ್ಥಾನದಲ್ಲಿ ನಡೆದಿದೆ. ಕಣ್ವರ್ ಯಾತ್ರಿಕರು ಸಾಗುವ ಬೀದಿಬದಿಯ ಎಲ್ಲಾ ಅಂಗಡಿ ಮಾಲಕರು ತಮ್ಮ ಹೆಸರನ್ನು ದಪ್ಪಕ್ಷರಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು ಎಂದು ಕನ್ವರ್ ಯಾತ್ರೆ ಗಿಂತ ಮೊದಲು ಉತ್ತರ ಪ್ರದೇಶ ಸರಕಾರ ಆದೇಶಿಸಿತ್ತು. ಇದು ಆ ಬಳಿಕ ವಿವಾದ ಸ್ವರೂಪವನ್ನು ಪಡೆಯಿತು. ಕೊನೆಗೆ ಸುಪ್ರೀಂ ಕೋರ್ಟ್ ಈ ಆದೇಶಕ್ಕೆ ತಡೆಹೇರಿತು. ಆದರೆ ಈ ಆದೇಶದ ಬಳಿಕ ನಡೆದ ಕನ್ವರ್ ಯಾತ್ರೆ ಈ ಹಿಂದೆಂದೂ ಕಾಣದಷ್ಟು ಹಿಂಸಾತ್ಮಕವಾಗಿ ನಡೆಯಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version