1:02 PM Thursday 16 - October 2025

ಕೊರೊನಾ ಸೋಂಕಿತ ಮಹಿಳೆಗೆ ವಾರ್ಡ್ ಬಾಯ್ ನಿಂದ ಲೈಂಗಿಕ ಕಿರುಕುಳ!

ward boy arrested
18/04/2021

ಗ್ವಾಲಿಯರ್: ಕೊವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 59 ವರ್ಷ ವಯಸ್ಸಿನ ಮಹಿಳೆಗೆ ವಾರ್ಡ್ ಬಾಯ್ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದ್ದು,  ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಹಿಳೆಯ ಕುಟುಂಬಸ್ಥರು  ಆಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದರೂ ಆಸ್ಪತ್ರೆ ಯಾವುದೇ ಕ್ರಮಕೈಗೊಂಡಿಲ್ಲ. ಈ ವಿಚಾರವಾಗಿ ದೂರು ನೀಡಿದ್ದಕ್ಕೆ ಸಂತ್ರಸ್ತೆಯ ಕುಟುಂಬಸ್ಥರ ಮೇಲೆಯೇ ಆಸ್ಪತ್ರೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಕೊವಿಡ್ 19 ಧನಾತ್ಮಕ ಪರೀಕ್ಷೆ ನಡೆಸಿದ ಬಳಿಕ 59 ವರ್ಷ ವಯಸ್ಸಿನ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಮ್ಲಜನಕದ ಬೆಂಬಲದಲ್ಲಿದ್ದ ಮಹಿಳೆಗೆ ವಾರ್ಡ್ ಬಾಯ್ ಒಂದೆರಡು ಬಾರಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಶನಿವಾರ ಆತ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಮಹಿಳೆ ಅಲಾರಾಂ ಬಟನ್ ಒತ್ತಿದ್ದು, ಈ ವೇಳೆ ಕುಟುಂಬಸ್ಥರು ಸ್ಥಳಕ್ಕೆ ಬಂದಿದ್ದು, ಈ ವೇಳೆ ವಾರ್ಡ್ ಬಾಯ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಆಸ್ಪತ್ರೆಗೆ ದೂರು ನೀಡಿದರೆ, ಆಸ್ಪತ್ರೆ ಸಿಬ್ಬಂದಿಯು ಮಹಿಳೆಯ ಕುಟುಂಬಸ್ಥರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಇದಲ್ಲದೇ ಮಹಿಳೆಗೆ ಚಿಕಿತ್ಸೆ ನೀಡುವುದನ್ನೂ ಆಸ್ಪತ್ರೆ ನಿಲ್ಲಿಸಿದೆ ಎಂದು ಅವರು ಆರೋಪಿಸಿದ್ದಾರೆ.

ಘಟನೆ ಸಂಬಂಧ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ ಪೊಲೀಸರು ಎಫ್ ಐಆರ್ ದಾಖಲಿಸಲು ಕೂಡ ವಿಳಂಬ ಮಾಡಿದ್ದಾರೆ ಎಂದು ಸಂತ್ರಸ್ತೆಯ ಮಾವ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version