ಇದಕ್ಕಿಂತ ಒಳ್ಳೆಯ ಕನಸು ಕಾಣಲು ಸಾಧ್ಯವೇ ಇರಲಿಲ್ಲ: ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ವಿರಾಟ್ ಕೊಹ್ಲಿ ಹೇಳಿದಿಷ್ಟು…!

t20
30/06/2024

ಟಿ20 ವಿಶ್ವಕಪ್ ನಲ್ಲಿ ಭರ್ಜರಿ ಜಯಗಳಿಸಿದ ನಂತರ ಈ ಸಂತಸದ ಕ್ಷಣದ ಬಗ್ಗೆ ಕಿಂಗ್ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡ ವಿರಾಟ್​ ಕೊಹ್ಲಿ, ಇದಕ್ಕಿಂತ ಒಳ್ಳೆಯ ದಿನದ ಕನಸು ಕಾಣಲು ಸಾಧ್ಯವೇ ಇರಲಿಲ್ಲ. ದೇವರು ದೊಡ್ಡವನು ಮತ್ತು ನಾನು ಕೃತಜ್ಞತೆಯಿಂದ ತಲೆ ಬಾಗುತ್ತೇನೆ. ನಾವು ಅಂತಿಮವಾಗಿ ಸಾಧಿಸಿದೆವು. ಜೈ ಹಿಂದ್ ಎಂದು ಭಾವುಕರಾಗಿ ಪೋಸ್ಟ್ ಮಾಡಿದ್ದಾರೆ.

13 ವರ್ಷಗಳ ನಂತರ ಟೀಂ ಇಂಡಿಯಾ ಟಿ20 ವಿಶ್ವ ಕಪ್ ಗೆದ್ದಿದೆ. ಗೆಲುವಿನ ಸಂತಸದಲ್ಲಿ ರೋಹಿತ್​ ಶರ್ಮಾ, ಕೊಹ್ಲಿ, ಸಿರಾಜ್​, ಪಾಂಡ್ಯ ಸೇರಿ ಅನೇಕರು ಕಣ್ಣೀರು ಸುರಿಸಿದ್ದಾರೆ.

ಟಿ20 ಗೆದ್ದ ಖುಷಿ ಒಂದೆಡೆಯಾದರೆ, ಇದು ನನ್ನ ಕೊನೆಯ ಟಿ20 ವಿಶ್ವಕಪ್ ಎಂದು ಹೇಳುವ ಮೂಲಕ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಗೆ ವಿದಾಯ ಹೇಳಿರುವುದು ಅಭಿಮಾನಿಗಳಿಗೆ ನೋವನ್ನುಂಟು ಮಾಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version