ಸೌಜನ್ಯ ಪ್ರಕರಣ ಎಸ್ ಐಟಿ ತನಿಖೆಗೆ ಇಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್

parameshwar
20/07/2025

ಬೆಂಗಳೂರು: ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಮಾತ್ರವೇ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತದೆ. ಸೌಜನ್ಯ ಪ್ರಕರಣ ಎಸ್ ಐಟಿ ತನಿಖೆಗೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣವನ್ನು ಎಸ್ ಐಟಿಗೆ ಒಪ್ಪಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಎಸ್ ಐಟಿ ತನಿಖೆ ಪ್ರಾರಂಭ ಮಾಡುತ್ತದೆ. ಯಾವುದೇ ಒತ್ತಡವಿಲ್ಲ, ಒತ್ತಡಕ್ಕೆ ಮಣಿದು ಮಾಡುವ ಕೆಲಸ ಇಲ್ಲ ಎಂದರು.

ನಾವು ಪ್ರಾಥಮಿಕವಾಗಿ ತನಿಖೆ ಮಾಡಿ ಸ್ಟೇಷನ್ ಮಟ್ಟದಲ್ಲಿ ಅಂತ ಹೇಳಿದ್ದೆವು. ಇನ್ನೂ ಹೆಚ್ಚಿನ ತನಿಖೆಯಾಗಬೇಕು ಎಂಬುದು ಹೆಚ್ಚಿನ ರೀತಿಯ ಅಭಿಪ್ರಾಯಗಳು ಸರ್ಕಾರ ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ ಎಂದು ಅವರು ಹೇಳಿದರು.

ಇದು ಸಣ್ಣ ವಿಚಾರ ಎಂದು ನಾವು ಪರಿಗಣಿಸಿಲ್ಲ, ಸ್ವಲ್ಪ ಯೋಚನೆ ಮಾಡಿ ತೀರ್ಮಾನ ಕೈಗೊಂಡಿದ್ದೇವೆ. ತನಿಖೆಯಲ್ಲಿ ಏನು ಬರುತ್ತದೆ ಅದನ್ನು ಕಾದು ನೋಡೋಣ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version