2:07 PM Wednesday 20 - August 2025

ಸಾರ್ವಜನಿಕರಿಗೆ ಕೋವಿಡ್ ಜಾಗೃತಿ ಆಂದೋಲನ ನಡೆಸಿದ ಎಎಸ್ಪಿ ಎಂ.ರಾಜೀವ್

27/10/2020

ದಾವಣಗೆರೆ:  ದಾವಣಗೆರೆ ನಗರದ ಉತ್ತರ ಪೊಲೀಸ್ ವೃತ್ತ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ  ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ  ರಾಜೀವ್ ಎಂ. ರವರ ನೇತೃತ್ವದಲ್ಲಿ ನಗರದ ಮದೀನಾ ಆಟೋ ನಿಲ್ದಾಣದಿಂದ ಅಕ್ತಾರ್ ರಜಾ ಸರ್ಕಲ್ ವರೆಗೆ ಕೋವಿಡ್ 19 ಜಾಗೃತಿ ಜಾಥಾ ಆಂದೋಲನ‌ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕೋವಿಡ್ -19 ರೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಮಾಸ್ಕ್ ವಿತರಿಸಿದರು . ಜಾಗೃತಿ ಆಂದೋಲನದಲ್ಲಿ ನಗರ ಪೊಲೀಸ್ ಉಪಾಧೀಕ್ಷಕರಾದ ನಾಗೇಶ್ ಐತಾಳ್, ಪೊಲೀಸ್ ವೃತ್ತ ನಿರೀಕ್ಷಕರಾದ ಟಿ.ಎನ್ .ಗಜೇಂದ್ರಪ್ಪ , ಪಿಎಸೈ ರವರುಗಳಾದ  ನಾಗರಾಜ . ಶೈಲಜಾ, ಲಲಿತಮ್ಮ, ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಮುಸಲ್ಮಾನ ಸಮಾಜದ  ಮುಖಂಡರುಗಳಾದ  ಅಮಾನುಲ್ಲಾಖಾನ್,  ಸಿರಾಜ್, ಸಾಧಿಕ್ ಪೈಲ್ವಾನ್ ಇತರ ಮುಖಂಡರುಗಳು ಈ ಜಾಥದಲ್ಲಿ ಭಾಗವಹಿಸಿದ್ದರು.


ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಲಾಕ್ ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ನಾಗರೀಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.

ಮಾಸ್ಕ್ ಇಲ್ಲದೇ ಅಡ್ಡಾಡುತ್ತಿದ್ದ ಜನರಿಗೆ ಮಾಸ್ಕ್ ನೀಡಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಜಾಗೃತಿ ಮೂಡಿಸುತ್ತಾ ಮಹಾಮಾರಿ ಕರೊನಾ ವೈರಸ್ ನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಮಾಸ್ಕ್ , ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಯಿತು.

ವರದಿ: ಕೋಗಲೂರು ಕುಮಾರ್


ಇತ್ತೀಚಿನ ಸುದ್ದಿ

Exit mobile version